ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಡಿ.14ರಂದು ನಡೆಯುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಸುರಕ್ಷಾಕ್ರಮಗಳಿಗಾಗಿ 10 ಡಿ.ವೈ.ಎಸ್.ಪಿ.ಗಳ ಸಹಿತ 2557 ಮಂದಿ ಪೆÇಲೀಸರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇವರಲ್ಲಿ 32 ಮಂದಿ ಇನ್ಸ್ ಪೆಕ್ಟರರು, 149 ಎಸ್.ಐ,/ಎ.ಎಸ್.ಐ.ಗಳು, 2366 ನಾಗರೀಕ ಪೆÇಲೀಸ್ ಅಧಿಕಾರಿಗಳು ಕರ್ತವ್ಯದಲ್ಲಿರುವರು. ಸಮುದ್ರದಲ್ಲಿ ಮತ್ತು ತೀರದಲ್ಲಿ ಪೆÇಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ. ಮೂರು ಕರಾವಳಿ ಠಾಣೆಗಳು ಜಂಟಿಯಾಗಿ ಸಮುದ್ರ ನಿಗಶಾ ಕಾರ್ಯಾಚರಣೆ ನಡೆಸಲಿವೆ. ಪೆÇಲೀಸರ 76 ಗುಂಪು ಗಸ್ತು ನಡೆಸುತ್ತಿದೆ. 300 ಮಂದಿ ಸದಸ್ಯರಿರುವ ಸ್ಟ್ರೈಕಿಂಗ್ ಫೆÇೀರ್ಸ್ ಸಜ್ಜುಗೊಂಡಿದೆ. ಕರ್ನಾಟಕ-ಕೇರಳ ಗಡಿಯಲ್ಲಿ ಪ್ರತ್ಯೇಕ ಸೂಕ್ಷ್ಮ ನಿಗಾ ವಹಿಸಲಾಗುವುದು ಎಂದವರು ತಿಳಿಸಿದರು.