ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ರೈತರಿಗೆ ಹಣ ಹಂಚಿಕೆ ಡಿಸೆಂಬರ್ 25 ರಿಂದ ಪ್ರಾರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರೈಸನ್‍ನಲ್ಲಿ ಶುಕ್ರವಾರ ನಡೆದ ಕಿಸಾನ್ ಕಲ್ಯಾಣ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿ ಈ ಮಾಹಿತಿ ನೀಡಿರುವರು.
2019 ರ ಫೆಬ್ರವರಿಯಲ್ಲಿ ಪ್ರಧಾನಿ-ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದಾಗ, ಸಣ್ಣ ರೈತರ ಕುಟುಂಬಗಳಿಗೆ ಇದು ಭಾರೀ ಪ್ರಯೋಜನಕಾರಿಯಾಗಿ ಜನಮನ್ನಣೆಗೊಳಗಾಯಿತು. ಬಳಿಕ ಇದಲ್ಲದೆ, 2 ಹೆಕ್ಟೇರ್ ವರೆಗೆ ಭೂಮಿ ಇರುವವರಿಗೆ ಈ ಸೌಲಭ್ಯ ದೊರಕುವ ಅವಕಾಶ ನೀಡಲಾಯಿತು.
ಈ ಯೋಜನೆಯನ್ನು ಬಳಿಕ 2019 ರ ಜೂನ್‍ನಲ್ಲಿ ಪರಿಷ್ಕರಿಸಲಾಯಿತು ಮತ್ತು ಭೂಮಾಲೀಕರ ಜೀವನಮಟ್ಟ ಲೆಕ್ಕಿಸದೆ ಎಲ್ಲಾ ಕೃಷಿ ಕುಟುಂಬಗಳಿಗೆ ವಿಸ್ತರಿಸಲಾಯಿತು. ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ದೇಶಾದ್ಯಂತ 14.5 ಕೋಟಿ ರೈತರಿಗೆ ವಾರ್ಷಿಕವಾಗಿ 6,000 ಕೋಟಿ ರೂ. ನೀಡುವ ಯೋಜನೆಯನ್ನು ಸರ್ಕಾರ ಈ ಹಿಂದೆ ಘೋಷಿಸಿತ್ತು.