HEALTH TIPS

ಡಿಸೆಂಬರ್ 26 ರ ಬಳಿಕ ಶಬರಿಮಲೆ ಯಾತ್ರಾರ್ಥಿಗಳಿಗೆ ಕಡ್ಡಾಯ ಆರ್‍ಟಿಪಿಸಿಆರ್ ಪರಿಶೀಲನೆ

    

        ತಿರುವನಂತಪುರ: ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ ಕೋವಿಡ್ ರೋಗಿಗಳ ಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆರೋಗ್ಯ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಈ ಬಗ್ಗೆ ಮಂಗಳವಾರ ಘೋಷಣೆ ಮಾಡಿದ್ದಾರೆ. ಕಳಪೆ ವಾತಾಯನ, ಕಿಕ್ಕಿರಿದ ಪ್ರದೇಶಗಳು ಮತ್ತು ನಿಕಟ ಸಂಪರ್ಕದ ಪ್ರದೇಶಗಳ ಕಾರಣ ಸೋಂಕು ವ್ಯಾಪಕಗೊಳ್ಳುವ ಭೀತಿ ಎದುರಾಗಿದೆ. ಆದ್ದರಿಂದ ಈ ಸ್ಥಳಗಳಲ್ಲಿ ಹೆಚ್ಚಿನ ಕಾಳಜಿ ವಹಿಸಲು ಸೂಚಿಸಲಾಗಿದೆ. ಇದರಿಂದ ಸೋಂಕು  ಹರಡುವ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದೆಂದು ಚಿಂತಿಸಲಾಗಿದೆ.

       ಅನೇಕ ಭಾಗಗಳಲ್ಲಿ ಮತ್ತು ಇತರ ರಾಜ್ಯಗಳಲ್ಲಿ ತೀರ್ಥಯಾತ್ರೆಗಳಿಂದ ವ್ಯಾಪಕವಾಗಿ ಸೋಂಕು ಹರಡಿವೆ ಎಂಬ ವರದಿಗಳ ಅನುಸಾರ ಶಬರಿಮಲೆ ಯಾತ್ರೆಯ ಸುರಕ್ಷತೆಯ ಬಗ್ಗೆ ವಿಶೇಷ ಗಮನ ನೀಡಲಾಗಿದೆ. ಇಲ್ಲಿಯವರೆಗೆ 51 ಯಾತ್ರಿಕರು, 245 ಸಿಬ್ಬಂದಿ ಮತ್ತು ಇತರ 3 ಮಂದಿ ಸೇರಿದಂತೆ 299 ಜನರಿಗೆ ಕೋವಿಡ್ ಸೋಂಕು ಬಾಧಿಸಿದೆ. ಪತ್ತನಂತಿಟ್ಟು ಜಿಲ್ಲೆಯಲ್ಲಿ ಶೇ 31 ಮತ್ತು ಕೊಟ್ಟಾಯಂನಲ್ಲಿ ಶೇ 11 ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಜನರು ಕಿಕ್ಕಿರಿದು ಅಲ್ಲಲ್ಲಿ ಸೇರಿರುವುದರಿಂದಲೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದೇ ನಿರೀಕ್ಷಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ಎಲ್ಲರೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವೆ ವಿನಂತಿಸಿರುವರು.

                    ಆರೋಗ್ಯ ಇಲಾಖೆಯ ಮಾರ್ಗಸೂಚಿಗಳು:

1. ಎಲ್ಲರೂ ಕೋವಿಡ್ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ. ಶಬರಿಮಲೆ ಬೆಟ್ಟ ಹತ್ತುವಾಗ ಭೌತಿಕ ಅಂತರವನ್ನು ಇರಿಸಿ. ನಿಕಟ ಸಂಪರ್ಕದಿಂದಾಗಿ ರೋಗವನ್ನು ಬಹಳ ಕಡಿಮೆ ಸಂಖ್ಯೆಯಿಂದ ಹೆಚ್ಚಿನ ಸಂಖ್ಯೆಯ ಜನರಿಗೆ ಹರಡುವ ಸೂಪರ್-ಸ್ಪ್ರೆಡ್‍ಗಳನ್ನು ತಪ್ಪಿಸಿ. ಯಾತ್ರಿಕರ ನಡುವಿನ ನಿಕಟ ಸಂಪರ್ಕವನ್ನು ನಿಯಂತ್ರಿಸಬೇಕು.  ಯಾತ್ರಿಕರ ಸಂಖ್ಯೆಯನ್ನು ನಿರ್ದಿಷ್ಟ ಸಂಖ್ಯೆಗೆ ಸೀಮಿತಗೊಳಿಸುವುದು ಮುಖ್ಯ.

2. ಯಾತ್ರಾರ್ಥಿಗಳು ಪ್ರಯಾಣಿಸುವಾಗ ಎಲ್ಲಾ ಸುರಕ್ಷಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಪರಿಣಾಮಕಾರಿ ಕೈ ತೊಳೆಯುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಬಳಕೆ ಮುಖ್ಯವಾಗಿದೆ. ಸ್ಯಾನಿಟೈಜರ್ ನ್ನು ಜೊತೆಯಲ್ಲಿರಿಸಿರಬೇಕು. 

 3. ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾದವರು ಅಥವಾ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ ಮತ್ತು ವಾಸನೆ ರಹಿತ ಲಕ್ಷಣಗಳಂತಹ ರೋಗಲಕ್ಷಣಗಳನ್ನು ಹೊಂದಿರುವವರು ಯಾತ್ರೆಯಿಂದ ದೂರವಿರಬೇಕು.

4. ಕರ್ತವ್ಯಕ್ಕೆ ನಿಯೋಜಿಸುವ ಮೊದಲು ತಪಾಸಣೆ ನಡೆಸಲಾಗಿದ್ದರೂ, ಅಧಿಕಾರಿಗಳಲ್ಲಿ ಸಕಾರಾತ್ಮಕ ರೋಗಿಗಳ ಸಂಖ್ಯೆ ತುಂಬಾ ಹೆಚ್ಚಿರುವುದರಿಂದ ತಪಾಸಣೆಯನ್ನು  ಬದಲಾಯಿಸಲಾಗಿದೆ. ಡಿಸೆಂಬರ್ 26 ರಂದು ಮಂಡಲಮಾಸಾ ಪೂಜೆಯ ಬಳಿಕ ಕರ್ತವ್ಯದಲ್ಲಿರುವ ಸಿಬ್ಬಂದಿಗಳು, ಅಧಿಕಾರಿಗಳು ಆರ್‍ಟಿಪಿಸಿಆರ್ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಎಲ್ಲಾ ಯಾತ್ರಾರ್ಥಿಗಳು ಆರ್‍ಟಿಪಿಸಿಆರ್, ಆರ್‍ಟಿ ಲ್ಯಾಂಪ್, ಐಸಿಎಂಆರ್ ಅನುಮೋದಿತ ಎನ್‍ಎಬಿಎಲ್ ಮಾನ್ಯತೆ ಪಡೆದ ಲ್ಯಾಬ್‍ನಿಂದ ನಡೆಸಬೇಕು. ಎಕ್ಸ್‍ಪ್ರೆಸ್ ನ್ಯಾಟ್‍ನಂತಹ ಯಾವುದೇ ಋಣಾತ್ಮಕ ಪರೀಕ್ಷೆಯನ್ನು 24 ಗಂಟೆಗಳೊಳಗೆ ನಡೆಸಿದ ವರದಿಯನ್ನು ಕೈಯಲ್ಲಿಇರಿಸಿಕೊಂಡಿರಬೇಕು. 

5. ಶಬಮಲೆಯಲ್ಲಿ ಕರ್ತವ್ಯದಲ್ಲಿರುವ ಎಲ್ಲ ಅಧಿಕಾರಿಗಳು ಆರ್‍ಟಿಪಿಸಿಆರ್, ಆರ್‍ಟಿ ಲ್ಯಾಂಪ್ ಅಥವಾ ಎಕ್ಸ್‍ಪ್ರೆಸ್ ನ್ಯಾಟ್ ಪರಿಶೀಲನೆಗೆ ಒಳಗಾಗಬೇಕು.

6. ಕರ್ತವ್ಯದಲ್ಲಿರುವ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಶಬರಿಮಲೆಗೆ ಆಗಮಿಸಿದ ಬಳಿಕ ಕನಿಷ್ಠ 30 ನಿಮಿಷಕ್ಕೊಮ್ಮೆ ಕೈ ತೊಳೆಯಬೇಕು ಅಥವಾ ಸ್ಯಾನಿಟೈಜರ್‍ನಿಂದ ಸ್ವಷದಷಗೊಳಿಸಬೇಕು. ಸಾಧ್ಯವಾದಾಗಲೆಲ್ಲಾ 6 ಅಡಿಗಳಷ್ಟು ಭೌತಿಕ ಅಂತರವನ್ನು ಇರಿಸಿ ಮತ್ತು ಮಾಸ್ಕ್ ಗಳನ್ನು ಸರಿಯಾಗಿ ಧರಿಸಿ.

    7. ಕೋವಿಡ್ ನಿಂದ ಮುಕ್ತವಾಗಿರುವ ರೋಗಿಗಳಲ್ಲಿ ದೈಹಿಕ ಸಮಸ್ಯೆಗಳು ದೀರ್ಘಕಾಲದವರೆಗೆ ಮುಂದುವರಿಯಬಹುದು. ಪರ್ವತಾರೋಹಣದಂತಹ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು. ಏರುವ ಮೊದಲು ಫಿಟ್‍ನೆಸ್ ಖಾತ್ರಿಪಡಿಸಿಕೊಳ್ಳಬೇಕು. ಏಕೆಂದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

8. ನೀಲಕ್ಕಲ್ ಮತ್ತು ಪಂಪಾದಲ್ಲಿ ಜನಸಂದಣಿಯನ್ನು ನಿತಂತ್ರಿಸಲಾಗುತ್ತದೆ.  ಪ್ರತಿ ಬಳಕೆಯ ನಂತರ ಶೌಚಾಲಯಗಳನ್ನು ಸೋಂಕುರಹಿತಗೊಳಿಸಬೇಕು. 

9. ಯಾತ್ರಾರ್ಥಿಗಳ ಜೊತೆ ಸಂಪರ್ಕವಾದ ಎಲ್ಲಾ ಚಾಲಕರು, ಕ್ಲೀನರ್‍ಗಳು ಮತ್ತು ಅಡುಗೆಯವರು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಬೇಕು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries