ತಿರುವನಂತಪುರ: ರಾಜ್ಯದಲ್ಲಿ ಇಂದು 2707 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಮಲಪ್ಪುರಂ 441, ಎರ್ನಾಕುಳಂ 343, ತ್ರಿಶೂರ್ 268, ಕೊಟ್ಟಾಯಂ 252, ತಿರುವನಂತಪುರ 222, ಆಲಪ್ಪುಳ 220, ಕೊಝಿಕ್ಕೋಡ್ 219, ಪಾಲಕ್ಕಾಡ್ 190, ಕೊಲ್ಲಂ 160, ಕಣ್ಣೂರು 136, ಪತ್ತನಂತಿಟ್ಟು 133, ವಯನಾಡ್ 61, ಇಡುಕ್ಕಿ 47, ಕಾಸರಗೋಡು 15 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 31,893 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ 8.49 ರಷ್ಟಿದೆ. ನಿಯಮಿತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 69,99,865 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 24 ಮಂದಿ ಮೃತಪಟ್ಟಿದ್ದಾರೆ. ತಿರುವನಂತಪುರ ಪಪ್ಪನಂಕೋಡಿನ ಸುಮಾ ತಂಬಿ (72), ಕೋಟ್ಟಯಂ ಚಂಗನಸ್ಸೆರಿಯ ಸೂಸಮ್ಮ (68), ಎರ್ನಾಕುಳಂ ಚಿಟ್ಟೆತುಕರದ ಕೆ.ಪಿ. ಮುಹಮ್ಮದ್(70), ವಚಕ್ಕಲ್‍ನ ತ್ರಿಸಾ (65), ವಟ್ಟಕಟ್ಟುಪಡಿಯ ಸಿ.ಎ.ಸುಕ್ರು(65), ವಳವಳಿಯ ಅಣ್ಣಮಕುಟ್ಟಿ (88), ವೆಂಗೋಲಾದ ಟಿ.ವಿ. ಪೈಲಿ(74), ಪಾಲಕ್ಕಾಡ್ ಮುದಲವಟ್ಟಂ ನ ಹುಸೇನ್ (60), ಪಟ್ಟಾಂಬಿಯ ಕಾಳಿ (80), ಕೊಟ್ಟಪಾಡಂನ ಅಮಿನಾ (65),ಪುತ್ತುವಾಳಯಂ ನ ಅಂತೋಣಿ ಸ್ವಾಮಿ(76), ತಚ್ಚನಾಡುಕ್ಕರದ ಖದೀಜಾ (56), ಕೀಚಿರಿಪಟ್ಟರಂಬಿನ ಪೈಲು(72), ಎಡತ್ತುನಾಡಕ್ಕರದ ಅಬೂಬಕರ್(67), ಮಲಪ್ಪುರಂ ಒತಳ್ಳುರ್ ನ ಮೊಯಿತುಣ್ಣಿ (85), ಕೋಝಿಕ್ಕೋಡ್ ಮಯ್ಯನ್ನೂರಿನ ಹಂಸ(55), ಕೊಡುವಳ್ಳಿಯ ಸುಲೇಖಾ (43), ವಡಕರದ ಗೋಪಾಲನ್ (85), ತಿರುವೆಂಜೂರಿನ ಉಣ್ಣಿ (50), ಕುನ್ನಮಂಗಲಂ ನ ಹಸನ್ ಕೋಯ (68), ವಡಗರದ ಆರ್.ಕೆ.ನಾರಾಯಣನ್(76), ಚುವಟ್ಟುಪರಂಬಿನ ಅಬ್ದುಲ್ ರಸಾಕ್(72),ಕೋಟ್ಟುವಳ್ಳಿಯ ಅಬ್ದುಲ್ಲ(60), ವಯನಾಡ್ ನ ಬತ್ತೇರಿರಿಯ ಶ್ರೀಧರನ್ ನಾಯರ್(84) ಎಂಬವರು ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 2647 ಕ್ಕೆ ಏರಿಕೆಯಾಗಿದೆ.
ಇಂದು,ಸೋಂಕು ದೃಢಪಡಿಸಿದವರಲ್ಲಿ 51 ಜನರು ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 2291 ಜನರಿಗೆ ಸೋಂಕು ತಗುಲಿತು. 328 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 422, ಎರ್ನಾಕುಳಂ 254, ತ್ರಿಶೂರ್ 252, ಕೊಟ್ಟಾಯಂ 233, ತಿರುವನಂತಪುರ 161, ಆಲಪ್ಪುಳ 197, ಕೋಝಿಕ್ಕೋಡ್ 196, ಪಾಲಕ್ಕಾಡ್ 90, ಕೊಲ್ಲಂ 158, ಕಣ್ಣೂರು 106, ಪತ್ತನಂತಿಟ್ಟು 107, ವಯನಾಡ್ 58, ಇಡುಕ್ಕಿ 44, ಕಾಸರಗೋಡು 13 ಎಂಬಂತೆ ಸಂಪರ್ಕದ ಮೂಲಕ ಕೋವಿಡ್ ಬಾಧಿಸಿದವರು.
ಮೂವತ್ತೇಳು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 8, ಎರ್ನಾಕುಳಂ ಮತ್ತು ಕೋಝಿಕ್ಕೋಡ್ ತಲಾ 6, ತಿರುವನಂತಪುರ ಮತ್ತು ಪಾಲಕ್ಕಾಡ್ ತಲಾ 5, ತ್ರಿಶೂರ್, ಮಲಪ್ಪುರಂ ಮತ್ತು ವಯನಾಡ್ ತಲಾ 2 ಮತ್ತು ಕೊಲ್ಲಂ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕಿಗೊಳಗಾಗಿರುವರು.
ಸೋಂಕು ನಿರ್ಣಯ ಮತ್ತು ಚಿಕಿತ್ಸೆ ಪಡೆದ 4481 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 198, ಕೊಲ್ಲಂ 306, ಪತ್ತನಂತಿಟ್ಟು 213, ಆಲಪ್ಪುಳ 302, ಕೊಟ್ಟಾಯಂ 352, ಇಡುಕ್ಕಿ 48, ಎರ್ನಾಕುಳಂ 582, ತ್ರಿಶೂರ್ 575, ಪಾಲಕ್ಕಾಡ್ 291, ಮಲಪ್ಪುರಂ 822, ಕೊಝಿಕ್ಕೋಡ್ 410, ವಯನಾಡ್ 152, ಕಣ್ಣೂರು 172, ಕಾಸರಗೋಡು 56 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 57,640 ಜನರಿಗೆ ಕೋವಿಡ್ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 6,11,600 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,10,107 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,96,920 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 13,187 ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 1394 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಹೊಸ ಹಾಟ್ ಸ್ಪಾಟ್ ಇದೆ. ಹೊಸ ಹಾಟ್‍ಸ್ಪಾಟ್ ಪತ್ತನಂತಿಟ್ಟು ಜಿಲ್ಲೆಯ ಕೊಯಿಪ್ರಂ (ಖಂಡ ವಲಯ ಉಪ ವಾರ್ಡ್ 11).
4 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ ಒಟ್ಟು 433 ಹಾಟ್‍ಸ್ಪಾಟ್‍ಗಳಿವೆ.