ತಿರುವನಂತಪುರ: ತಿರುವನಂತಪುರಂನ ಸಿಬಿಐ ನ್ಯಾಯಾಲಯವು 28 ವರ್ಷಗಳ ಬಳಿಕ ಸಿಸ್ಟರ್ ಅಭಯಳಿಗೆ ಕೊನೆಗೂ ನ್ಯಾಯ ಒದಗಿಸಿದೆ. ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯನ್ನು ನಾಳೆ(ಬುಧವಾರ)ಘೋಶಿಸಲಿದೆ. ಸಿಸ್ಟರ್ ಅಭಯಳ ಸಹೋದರ ಬಿಜು ಜೋಸೆಫ್ 28 ವರ್ಷಗಳ ಬಳಿಕವಾದರೂ ತನ್ನ ಸಹೋದರಿ ಸಾವಿನ ಕುರಿತು ಅಂತಿಮ ನ್ಯಾಯದ ಬಗ್ಗೆ ನ್ಯಾಯಾಲಯಕ್ಕೆ ಅರ್ಪಿಸಿರುವರು.
ತಿರುವನಂತಪುರ ಸಿಬಿಐ ನ್ಯಾಯಾಲಯವು ಸುದೀರ್ಘ ವಿಚಾರಣೆಯ ಬಳಿಕ ಒಂದು ವರ್ಷ ಮೂರೂವರೆ ತಿಂಗಳ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ನೀಡಿದೆ. ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ಈ ಪ್ರಕರಣದ ಆರೋಪಿಗಳು. ಸಿಬಿಐ ತನಿಖೆಯಲ್ಲಿ ಆರೋಪಿಗಳಿಬ್ಬರಿಗೂ ಪರಸ್ಪರ ಲೈಂಗಿಕ ಸಂಬಂಧ ಹೊಂದಿದ್ದನ್ನು ನೋಡಿದ ಅಭಯಳನ್ನು ಕೊಡಲಿಯಿಂದ ಹೊಡೆದು ಕೊಲೆಗೈದು ದೇಹವನ್ನು ಬಾವಿಯಲ್ಲಿ ಎಸೆಯಲಾಗಿದೆ ಎಂದು ಸಿಬಿಐ ತನಿಖೆಯಿಂದ ಪತ್ತೆಹಚ್ಚಲಾಗಿದೆ.
ಈ ಪ್ರಕರಣದಲ್ಲಿ ಹಲವಾರು ಜನರು ಆತ್ಮಹತ್ಯೆ ಮಾಡಿಕೊಂಡ, ಅನುಮಾನದ ಮೇಲೆ ವಿಚಾರಣೆ ನಡೆಸಿ ಬಳಿಕ ನಾಪತ್ತೆಯಾದ, ಸಾಕ್ಷ್ಯಗಳನ್ನು ನಾಶಗೊಳಿಸಿದ ಹಾಗೂ ಗೌಪ್ಯ ಸಾಕ್ಷಿ ನೀಡಿದ ಅತ್ಯಪೂರ್ವ ಪ್ರಕರಣ ಇದಾಗಿದೆ.
ಅಭಯ ಕೊಲ್ಲಲ್ಪಟ್ಟ ದಿನ ಬೆಳಿಗ್ಗೆ ಕಾನ್ವೆಂಟ್‍ಗೆ ಬಂದಾಗ ಆರೋಪಿಗಳನ್ನು ನೋಡಿದ ಬಗ್ಗೆ ಆ ಪರಿಸರದಲ್ಲಿ ಕದಿಯಲು ಹೊಂಚುಹಾಕಿದ್ದ ರಾಜು ಎಂಬವನ ಸಾಕ್ಷ್ಯ ಮಹತ್ವದ್ದಾಗಿತ್ತು. ಮತ್ತು ಸಿಸ್ಟರ್ ಸೆಫಿ ತನ್ನ ಕನ್ಯತ್ವವನ್ನು ಸಾಬೀತುಪಡಿಸಲು ಶಸ್ತ್ರಚಿಕಿತ್ಸೆ ಮಾಡಿದ್ದಾಳೆಂದು ವಿಧಿವಿಜ್ಞಾನ ಶಸ್ತ್ರಚಿಕಿತ್ಸಕರ ಹೇಳಿಕೆ ನಿರ್ಣಾಯಕವಾಯಿತು.
ಸ್ಥಳೀಯ ಪೋಲೀಸರು ಮತ್ತು ಅಪರಾಧ ವಿಭಾಗವು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ತಳ್ಳಿಹಾಕಿದ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ 1993 ರ ಮಾರ್ಚ್ 23 ರಂದು ಸಿಬಿಐ ಈ ಪ್ರಕರಣವನ್ನು ದಾಖಲಿಸಿತು. ಮೂರು ಬಾರಿ ಸಿಬಿಐ ವರದಿಯನ್ನು ತಿರಸ್ಕರಿಸಲಾಗಿತ್ತು. ಮತ್ತು ಮರು ವಿಚಾರಣೆಗೆ ಆದೇಶಿಸಿತ್ತು. 2008 ರ ನವೆಂಬರ್ 19 ರಂದು ಫಾದರ್. ಥಾಮಸ್ ಕೊಟ್ಟೂರ್, ಸಿಸ್ಟರ್ ಸೆಫಿ ಮತ್ತು ಫಾ. ಜೋಸ್ ಪುತ್ತುಕ್ಕಾಯಿಲ್ ಅವರನ್ನು ಬಂಧಿಸಲಾಯಿತು.
ಈ ಪ್ರಕರಣದಲ್ಲಿ ಯಾವುದೇ ಪುರಾವೆಗಳಿಲ್ಲ ಎಂಬ ಕಾರಣಕ್ಕೆ ಜೋಸ್ ಪುತ್ರಿಕ್ಕಾಯಲ್ ಅವರನ್ನು ಖುಲಾಸೆಗೊಳಿಸಲಾಯಿತು. ಸಾಕ್ಷ್ಯಗಳನ್ನು ನಾಶಪಡಿಸಲು ಆರೋಪಿತರೊಂದಿಗೆ ಶಾಮೀಲಾದ ಅಪರಾಧ ವಿಭಾಗದ ಎಸ್‍ಪಿ, ಕೆ.ಟಿ.ಮೈಕಲ್ ರನ್ನು ವಿಚಾರಣೆಯ ಹಂತದಲ್ಲಿ ಸಾಕ್ಷ್ಯಗಳು ದೊರೆತರೆ ಪ್ರತಿಕ್ರಿಯಿಸಬಹುದು ಎಂಬ ಷರತ್ತಿನ ಮೇರೆಗೆ ಅವರನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ. 49 ಸಾಕ್ಷ್ಯಗಳನ್ನು ದಾಖಲಿಸಲಾಗಿದೆ.
ಸಿಬಿಐ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಿದ ಸಮಯದಿಂದ ಇಂದಿನವರೆಗೂ ಸಾರ್ವಜನಿಕ ಕಾರ್ಯಕರ್ತ ಜೋಮನ್ ಪುತ್ತನ್‍ಪುರಕ್ಕಲ್ ಈ ಪ್ರಕರಣದ ಹಿಂದೆ ನ್ಯಾಯಕ್ಕಾಗಿ ಅವಿರತ ಶ್ರಮಿಸಿದ್ದರು. ರಾಜ್ಯವು ಅತ್ಯಂತ ಕುತೂಹಲದಿಂದ ಗಮನಿಸುತ್ತಿದ್ದಾಗ ಪ್ರಕರಣ ನಿರಂತರವಾಗಿ ಅಂತಿಮ ಹಂತಕ್ಕೆ ತಲಪಲು ಹೋರಾಡಿದ್ದ ಸಿಸ್ಟರ್ ಅಭಯಳ ತಂದೆ ಥೋಮಸ್ ಹಾಗೂ ತಾಯಿ ಲೀಲಾಮ್ಮ 2016ರಲ್ಲೇ ಕೊನೆಯುಸಿರೆಳೆದಿದ್ದಾರೆ.