ಕಾಸರಗೋಡು: ಕಾಸರಗೋಡು ಜಿಲ್ಲಾ ಬಾಲವಿಜ್ಞಾನ ಕಾಂಗ್ರೆಡಸ್ ನೋಂದಣಿಯನ್ನು ಆನ್ ಲೈನ್ ರೂಪದಲ್ಲಿ ಡಿ.31 ವರೆಗೆ ನಡೆಸಬಹುದು.
28ನೇ ರಾಷ್ಟ್ರೀಯ ಬಾಲವಿಜ್ಞಾನ ಕಾಂಗ್ರೆಸ್ ನ ಜಿಲ್ಲಾ ಮಟ್ಟದ ಸ್ಪರ್ಧೆ 2021 ಜನವರಿ ತಿಂಗಳ ಮೊದಲ ವಾರದಲ್ಲಿ ಆನ್ ಲೈನ್ ರೂಪದಲ್ಲಿ ಜರುಗಲಿದೆ. ಕಿರಿಯ/ಹಿರಿಯ ವಿಭಾಗಗಳಲ್ಲಿ ಎಷ್ಟು ಮಂದಿ ಬೇಕಿದ್ದರೂ ಭಾಗವಹಿಸಲು ಅವಕಾಶಗಳಿವೆ. ದೈನಂದಿನ ಚಟುವಟಿಕೆಗಳನಡುವೆ ಘಟಿಸುತ್ತಿರುವ ವಿಚಾರಗಳ ಬಗ್ಗೆ ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಿ ನಿಗಾ ವಹಿಸಿ ಸ್ವಯಂ ಪ್ರೇರಣೆಯಲ್ಲಿ ವರದಿ ಸಿದ್ಧಪಡಿಸಿ ಚಾರ್ಟ್ ಗಳ ಸಹಿತ ಆನ್ ಲೈನ್ ನಲ್ಲಿ ಪ್ರಸ್ತುತಗೊಳಿಸಬೇಕು. 8 ನಿಮಿಷ ಅವಧಿಯಲ್ಲಿ ನಿರೂಪಣೆ, 2 ನಿಮಿಷ ಚರ್ಚೆ ಎಂಬ ರೀತಿ ಆಯ್ಕೆಗೊಳ್ಳುವ ಪಾನೆಲ್ನ ಮುಂದೆ ಪ್ರಸ್ತುತಪಡಿಸಬೇಕು. ಮುಂಚಿತವಾಗಿ ರೆಕಾರ್ಡ್ ಬಡೆಸಿ ಪ್ರಸ್ತುತಿ ಮಾಡಬಹುದು. ಇಂಗ್ಲೀಷ್ ನಲ್ಲಿ ಸಿದ್ಧಪಡಿಸಿದ ಅಬ್ ಸ್ಟ್ರಾಕ್ಟ್ ಜೊತೆ ಅರ್ಜಿಗಳನ್ನು ರಾಜ್ಯ ಮಟ್ಟದ ಮುಖ್ಯಸ್ಥರ ಸಹಿ, ಸೀಲ್ ಸಹಿತgoಠಿisಡಿeeಟಿಚಿiಡಿ@gmಚಿiಟ.ಛಿomಎಂಬ ಈ-ಮೇಲ್ ಗೆ ಕಳುಹಿಸಬೇಕು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು(ಅಧ್ಯಕ್ಷ), ಎಡನೀರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ ಪಿ.ಎಸ್.ಸಂತೋಷ್ ಕುಮಾರ್(ಅಕಾಡೆಮಿಕ್ ಸಂಚಾಲಕ), ಪೆÇ್ರ.ವಿ.ಗೋಪಿನಾಥ್(ಜಿಲ್ಲಾ ಬಾಲ ವಿಜ್ಞಾನ ಕಾಂಗ್ರೆಸ್) ಸಂಚಾಲಕರಾಗಿ ಆಯ್ಕೆಯಾಗಿರುವರು ಎಂಬವರು ಸೇರಿರುವ ಜಿಲ್ಲಾ ಸಮಿತಿ ಕಾರ್ಯಕ್ರಮಗಳಿಗೆ ನೇತೃತ್ವ ನೀಡುತ್ತಿದೆ. ನೋಂದಣಿ ಲಿಂಕ್ ಲಭ್ಯವಿದೆ. ದೂರವಾಣಿ ಸಂಖ್ಯೆ:9446281854.