ತಿರುವನಂತಪುರ: ಕೇರಳದಲ್ಲಿ ವಿಧಾನಸಭಾ ಚುನಾವಣೆ ಮೇ ಆರಂಭದಲ್ಲಿ ನಡೆಯಲಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಟೀಕಾರಂ ಮೀನಾ ಹೇಳಿದ್ದಾರೆ. ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಮೇ 31 ರೊಳಗೆ ಫಲಿತಾಂಶ ಪ್ರಕಟವಾಗಲಿದ್ದು, ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದಿರುವರು.
ಕಳೆದ ಬಾರಿಗಿಂತ 15,000 ಹೆಚ್ಚು ಮತದಾನ ಕೇಂದ್ರಗಳು ಇರಲಿವೆ. ಒಂದೇ ಹಂತದಲ್ಲಿ ಇದನ್ನು ಮಾಡಿದರೆ ಅಧಿಕಾರಿಗಳ ನಿಯೋಜನೆ ಕಷ್ಟವಾಗುತ್ತದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಹೇಳಿದರು.
ಕೇಂದ್ರ ಚುನಾವಣಾ ಆಯೋಗದ ಪ್ರಸ್ತುತ ಆದೇಶದಂತೆ ರಾಜ್ಯ ಪೋಲೀಸ್ ವರಿಷ್ಠ ಲೋಕನಾಥ ಬೆಹ್ರಾ ಅವರನ್ನು ವರ್ಗಾಯಿಸಬಾರದೆಂದು ಮೀನಾ ಹೇಳಿದ್ದಾರೆ. ಕೇಂದ್ರ ನಿರ್ದೇಶನದಂತೆ, ಒಂದೇ ಹುದ್ದೆಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದ ಅಧಿಕಾರಿಗಳನ್ನು ಐಜಿಗೆ ವರ್ಗಾಯಿಸುವುದು ರೂಢಿ. ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೀನಾ ಹೇಳಿರುವರು.