ಗುರುವಾಯೂರ್: ದೇವಾಲಯದ 46 ಉದ್ಯೋಗಿಗಳಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಇಂದಿನಿಂದ ಭಕ್ತರಿಗೆ ಗುರುವಾಯೂರ್‍ಗೆ ಭೇಟಿ ನಿಷೇಧಿಸಲಾಗಿದೆ. ದೇವಾಲಯ ಸಂದರ್ಶನಕ್ಕೆ ಭಕ್ತರಿಗೆ ನಿಷೇಧ ಹೇರಿರುವ ಜೊತೆಗೆ ದೇವಾಲಯದ ಆವರಣವನ್ನು ಕಂಟೋನ್ಮೆಂಟ್ ವಲಯವನ್ನಾಗಿ ಮಾಡಲಾಗಿದೆ. ಆದರೆ ಪೂಜೆಗಳ ಸಹಿತ ವೈಧಿಕ ಸಮಾರಂಭಗಳು ನಿರಂತರವಾಗಿ ನಡೆಯಲಿವೆ.
ಈ ಹಿಂದೆ ದೇವಾಲಯದ ಸಿಬ್ಬಂದಿ ಮತ್ತು ಸಹ ಪುರೋಹಿತರಿಗೆ ಕೋವಿಡ್ ದೃಢಪಟ್ಟಿತ್ತು. ಆ ಬಳಿಕ ನಡೆಸಿದ ಪರೀಕ್ಷೆಯಲ್ಲಿ 46 ಉದ್ಯೋಗಿಗಳಲ್ಲಿ ಸೋಂಕಿರುವುದು ದೃಢಪಟ್ಟಿದೆ.