ತಿರುವನಂತಪುರ: ರಾಜ್ಯದಲ್ಲಿ ಇಂದು 4642 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆ. ಕೋಝಿಕ್ಕೋಡ್ 626, ಮಲಪ್ಪುರಂ 619, ಕೊಲ್ಲಂ 482, ಎರ್ನಾಕುಳಂ 409, ಆಲಪ್ಪುಳ 396, ಪತ್ತನಂತಿಟ್ಟು 379, ಕೊಟ್ಟಾಯಂ 326, ಕಣ್ಣೂರು 286, ತಿರುವನಂತಪುರ 277, ತ್ರಿಶೂರ್ 272, ಪಾಲಕ್ಕಾಡ್ 257, ಇಡುಕ್ಕಿ 255, ವಯನಾಡ್ 87, ಕಾಸರಗೋಡು 71, ಎಂಬಂತೆ ಸೋಂಕು ಪಾಸಿಟಿವ್ ಆಗಿದೆ.
ಕಳೆದ 24 ಗಂಟೆಗಳಲ್ಲಿ 53,508 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.8.68 ಆಗಿದೆ. ನಿಯಮಿತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್ ಎ ಎಂ ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 68,61,907 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ ಕೆಲವು ದಿನಗಳಲ್ಲಿ 29 ಮಂದಿ ಮೃತಪಟ್ಟಿದ್ದಾರೆ. ತಿರುವನಂತಪುರಂನ ಪೂಜಾಪ್ಪುರದ ಕೆ.ಸಿ. ನಾಯರ್ (86), ನೆಡುಮಾಂಗಾಡ್ ನ ಅನಾ ಕ್ಲೆಟಸ್ (62), ಪಯಾದ್‍ನ ಭಾರ್ಗವಿ (88), ಬಾಲರಾಮಪುರಂ ನ ಫ್ರಾನ್ಸಿಸ್ (60), ಮನಕ್ಕಾಡ್‍ನ ಗೋಪಾಕುಮಾರ್ (65), ಕೊಲ್ಲಂ ನ ಪೂಯಪ್ಪಳ್ಳಿಯ ಸಲೀಂಕುಮಾರ್ (68), ಕುಳತ್ತುಪುಳದ ಮಿನಿ ರಘು (42), ಆಲಪ್ಪುಳ ಪಾತಿರಂಪುಳಿಯ ಅರುಲಪ್ಪನ್ (79), ಕೊಟ್ಟಾಯಂನ ವೈಕಂನ ವೆರೋನಿ (76), ಚೆಂಗನಾಶ್ಚೇರಿಯ ಅಜಯನ್ (52), ಎರ್ನಾಕುಳಂ ತಟ್ಟುಳಂ ನ ಪಾರ್ಥಸಾರಥಿ(76), ತೃಶೂರ್ ಕೋಂಗೋಳಿಯ ಸುಕುಮಾರಿಯಮ್ಮ(79), ಪಾಲಕ್ಕಾಡ್ ಕೊಟ್ಟಾಯಿಯ ಕೃಷ್ಣನ್(60), ಮುಂಡೂರ್ ನ ಮಯ್ಯಾಟಿ(80), ಶೋರ್ನೂರ್ ನ ಝೀನತ್(45), ಕರಿಬ್ರದ ಮುಹಮ್ಮದ್ ಹಾಜಿ(88), ಚೋಯಿಪ್ಪುಳ್ಳಿಯ ಕರೀಂ(81),ಕಣ್ಣಾಡಿಯ ಮೋಹನನ್(43), ಮಲಪ್ಪುರಂ ಈರ್ಕಡವಿನ ಮುಹಮ್ಮದ್(78), ನಂಞಆ ಮುಕ್ ನ ಸುಬ್ರಹ್ಮಣ್ಯನ್(53), ಮಾಂಬಾಟ್ ನ ಅಬ್ದುಲ್ ಮಜೀದ್(67), ಚೀಕ್ಕೋಡ್(ಖದೀಜ(65), ವೇಟ್ಟಂ ನ ಕರುಪ್ಪನ್(61), ಪೊನ್ನಾನಿಯ ಮುಹಮ್ಮದ್(70), ಕೋಝಿಕ್ಕೋಡ್ ವಲಿಯಪರಂಬಿನ ಮುಹಮ್ಮದ್(55), ಮಡಪ್ಪಳ್ಳಿಯ ಬಾಲನ್(67), ಮಣಿಪುರಂ ನ ಕೊಯಾಕುಟ್ಟಿ (70), ವಯನಾಡ್ ಚೆಟ್ಟಪಲಂನ ರಾಧಾಕೃಷ್ಣನ್ (52), ಕಣ್ಣೂರು ಚಿತ್ತಾರಿಪರಂಬದ ರಾಮಕೃಷ್ಣನ್ (72) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಈವರೆಗೆ ಒಟ್ಟು 2,562 ಮಂದಿ ಬಲಿಯಾಗಿದ್ದಾರೆ.
ಇಂದು, ಸೋಂಕು ಪತ್ತೆಯಾದವರಲ್ಲಿ 73 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4029 ಜನರಿಗೆ ಸೋಂಕು ತಗುಲಿತು. 496 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ 608, ಮಲಪ್ಪುರಂ 595, ಕೊಲ್ಲಂ 475, ಎರ್ನಾಕುಳಂ 309, ಆಲಪ್ಪುಳ 372, ಪತ್ತನಂತಿಟ್ಟು 287, ಕೊಟ್ಟಾಯಂ 291, ಕಣ್ಣೂರು 249, ತಿರುವನಂತಪುರ 183, ತ್ರಿಶೂರ್ 265, ಪಾಲಕ್ಕಾಡ್ 117, ಇಡುಕ್ಕಿ 127, ವಯನಾಡ್ 81, ಕಾಸರಗೋಡು 70 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದವರಾಗಿದ್ದಾರೆ.
44 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 10, ಪತ್ತನಂತಿಟ್ಟು 9, ತಿರುವನಂತಪುರ 7, ಎರ್ನಾಕುಳಂ 5, ಕೋಝಿಕ್ಕೋಡ್ 4, ಕೊಲ್ಲಂ 3, ವಯನಾಡ್ 2, ಕೊಟ್ಟಾಯಂ, ಇಡುಕ್ಕಿ, ತ್ರಿಶೂರ್ ಮತ್ತು ಪಾಲಕ್ಕಾಡ್ 1 ತಲಾ ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4748 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 392, ಕೊಲ್ಲಂ 554, ಪತ್ತನಂತಿಟ್ಟು 150, ಆಲಪ್ಪುಳ 249, ಕೊಟ್ಟಾಯಂ 243, ಇಡಕ್ಕಿ 176, ಎರ್ನಾಕುಳಂ 592, ತ್ರಿಶೂರ್ 500, ಪಾಲಕ್ಕಾಡ್ 243, ಮಲಪ್ಪುರಂ 790, ಕೊಝಿಕ್ಕೋಡ್ 450, ವಯನಾಡ್ 149, ಕಣ್ಣೂರು 206, ಕಾಸರಗೋಡು 54 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 59,380 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 5,96,593 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,15,644 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,02,102 ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 13,542 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1379 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಹೊಸ ಹಾಟ್‍ಸ್ಪಾಟ್‍ಗಳಿಲ್ಲ. ಒಂದು ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪತ್ತನಂತಿಟ್ಟು ಜಿಲ್ಲೆಯ ಕುಟ್ಟೂರು (ಸಬ್ ವಾರ್ಡ್ 2) ಅನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ ಒಟ್ಟು 440 ಹಾಟ್‍ಸ್ಪಾಟ್‍ಗಳಿವೆ.