ತಿರುವನಂತಪುರ: ರಾಜ್ಯದಲ್ಲಿ ಇಂದು 4698 ಮಂದಿಗೆ ಕೋವಿಡ್ ಖಚಿತವಾಗಿದೆ. ಮಲಪ್ಪುರಂ 649, ಕೋಝಿಕ್ಕೋಡ್ 612, ಎರ್ನಾಕುಳಂ 509, ತ್ರಿಶೂರ್ 438, ಕೊಟ್ಟಾಯಂ 416, ಪಾಲಕ್ಕಾಡ್ 307, ಕೊಲ್ಲಂ 269, ಕಣ್ಣೂರು 267, ತಿರುವನಂತಪುರ 254, ವಯನಾಡ್ 234, ಪತ್ತನಂತಿಟ್ಟು 229, ಇಡುಕ್ಕಿ 222, ಆಲಪ್ಪುಳ 218, ಕಾಸರಗೋಡು 74 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 46,375 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು 10.13ಶೇ. ರಷ್ಟಿದೆ.ಆಗಿದೆ. ನಿಯಮಿತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 69,67,972 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಒಟ್ಟು 29 ಮಂದಿ ಸಾವನ್ನಪ್ಪಿದ್ದಾರೆ. ತಿರುವನಂತಪುರ ವಲ್ಲಕ್ಕಡವದ ಮಧುಸೂದನನ್ (63),, ಕಟ್ಟಚಲ್ಕುಳಿಯ ಕುಂಞÂ ಕೃಷ್ಣನ್ (75), ನೆಲ್ಲಿಕುನ್ನಿನ ಕೇಶವನ್ ಆಶಾರಿ (82), ತಚಂಕೋಡ್ ನ ಜಯ (60), ಪತ್ತನಂತಿಟ್ಟು ಪರಕೋಡ್ ನ ಆಶಾ ಬೀವಿ (62), ತಿರುಕ್ಕುನ್ನುಂ ನ ನಾಸರ್(57), ಇಡುಕ್ಕಿಯ ಅನ್ನಕ್ಕುಟ್ಟಿ(80), ಎರ್ನಾಕುಳಂ ಪನಂಗಾಡ್ ನ ಅನಿರುದ್ದನ್(54), ಪಪ್ಪೆಟ್ಟಿಯ ಮಾರ್ಕೋಸ್(82), ತೃಶೂರ್ ಶೋಭನ(65), ಪರಂಚಪ್ಪಳ್ಳಿಯ ಆಂಟ್(64), ಮಡಯಿಂಕಾನಂ ಹಣಿ ಚುಮ್ಮಾರ್(18), ಪಾಲಕ್ಕಾಡ್ ವಡಂಕಚ್ಚೇರಿಯ ಡೈಸಿ(66), ಮಲಪ್ಪುರಂ ಪಳ್ಳಿವೆಂಗಾಡ್ ನ ಇಬ್ರಾಹಿಂ(52), ಮಂಜೇರಿಯ ಅಬ್ದುಲ್ ಲತೀಫ್ (72), ತಾರೀಶ್ ನ ಕುಂಞಳನ್ (75), ಪಳಮಲ್ಲೂರ್ ನ ಅಬ್ದುರಹ್ಮಾನ್ (72), ಚೆರಕ್ಕಪ್ಪರಂಬಿನ ಜಜೀರಾ(30), ಕೋಝಿಕ್ಕೋಡ್ ಚೆರುಕುಲ್ಲತ್ತೂರ್ ನ ಚಂದ್ರನ್ (68), ಕುತ್ತಾಳಿಯ ಕುಂಞÂ ಕೃಷ್ಣನ್ ನಾಯರ್ (82), ಕಳರಂತ್ತಿರಿ ಮೊಯಿದೀನ್ ಕೋಯಾ (61), ವಯನಾಡ್ ನ ಕೊನಿಚಿರಾದ ಕುಮಾರನ್ (90), ಕಣ್ಣೂರು ಚೇಡಿಕುಂಡಿನ ಎ.ಎಂ. ರಾಜೇಂದ್ರನ್(69), ಮೆಲೂರ್ ನ ಎಂ.ಸದಾನಂದನ್(70), ಇಳಿಕ್ಕಲ್ ನ ತಂಕಮಣಿ (55), ಕೂತುಪರಂಬಿನ ಒ.ವಿ.ನಬೀಸಾ(74), ಕಾಸರಗೋಡು ಅಮೃತನಾಥ್(80) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಇದು ಒಟ್ಟು ಸಾವಿನ ಸಂಖ್ಯೆ 2623 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 93 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4034 ಜನರಿಗೆ ಸೋಂಕು ತಗುಲಿತು. 528 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 608, ಕೋಝಿಕ್ಕೋಡ್ 594, ಎರ್ನಾಕುಳಂ 360, ತ್ರಿಶೂರ್ 417, ಕೊಟ್ಟಾಯಂ 397, ಪಾಲಕ್ಕಾಡ್ 156, ಕೊಲ್ಲಂ 262, ಕಣ್ಣೂರು 228, ತಿರುವನಂತಪುರ 164, ವಯನಾಡ್ 222, ಪತ್ತನಂತಿಟ್ಟು 145, ಇಡುಕ್ಕಿ 209, ಅಲಪ್ಪುಳ 203, ಕಾಸರಗೋಡು 69 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ.
43 ಮಂದಿ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಬಾಧಿಸಿದೆ. ಎರ್ನಾಕುಳಂ, ಕಣ್ಣೂರು ತಲಾ 7, ತ್ರಿಶೂರ್ 6, ಪಾಲಕ್ಕಾಡ್ 5, ಪತ್ತನಂತಿಟ್ಟು, ಕೋಝಿಕ್ಕೋಡ್, ವಯನಾಡ್ ತಲಾ 4, ತಿರುವನಂತಪುರ 3, ಕೊಲ್ಲಂ 2 ಮತ್ತು ಕೊಟ್ಟಾಯಂ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಇಂದು ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5258 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 342, ಕೊಲ್ಲಂ 347, ಪತ್ತನಂತಿಟ್ಟು 198, ಆಲಪ್ಪುಳ 425, ಕೊಟ್ಟಾಯಂ 455, ಇಡುಕ್ಕಿ 99, ಎರ್ನಾಕುಳಂ 804, ತ್ರಿಶೂರ್ 276, ಪಾಲಕ್ಕಾಡ್ 381, ಮಲಪ್ಪುರಂ 886, ಕೋಝಿಕ್ಕೋಡ್ 686, ವಯನಾಡ್ 201, ಕಣ್ಣೂರು 111, ಕಾಸರಗೋಡು 47 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 59,438 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 6,07,119 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,16,547 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,03,150 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 13,397 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1680 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 4 ಹೊಸ ಹಾಟ್‍ಸ್ಪಾಟ್‍ಗಳಿವೆ. ಹೊಸ ಹಾಟ್‍ಸ್ಪಾಟ್‍ಗಳೆಂದರೆ ಕೊಟ್ಟೊಪಾಡಮ್ (ಕಂಟೋನ್ಮೆಂಟ್ ವಲಯ ವಾರ್ಡ್ 17), ಪಾಲಕ್ಕಾಡ್ ಜಿಲ್ಲೆಯ ಎಲಪ್ಪುಲ್ಲಿ (1), ಕೊಲ್ಲಂ ಜಿಲ್ಲೆಯ ಚಡಯಮಂಗಲಂ (13) ಮತ್ತು ಎರ್ನಾಕುಲಂ ಜಿಲ್ಲೆಯ ವಲಕಂ (1). 5 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ ಒಟ್ಟು 436 ಹಾಟ್‍ಸ್ಪಾಟ್‍ಗಳಿವೆ.