ತಿರುವನಂತಪುರ: ರಾಜ್ಯದಲ್ಲಿ ಇಂದು 4777 ಜನರಿಗೆ ಕೋವಿಡ್ ಖಚಿತವಾಗಿದೆ. ಮಲಪ್ಪುರಂ 664, ಕೋಝಿಕ್ಕೋಡ್ 561, ತ್ರಿಶೂರ್ 476, ಎರ್ನಾಕುಳಂ 474, ಕೊಟ್ಟಾಯಂ 387, ಕೊಲ್ಲಂ 380, ತಿರುವನಂತಪುರ 345, ಪಾಲಕ್ಕಾಡ್ 341, ಆಲಪ್ಪುಳ 272, ಕಣ್ಣೂರು 223, ವಯನಾಡ್ 213, ಪತ್ತನಂತಿಟ್ಟು 197, ಇಡುಕ್ಕಿ 169, ಕಾಸರಗೋಡು 75 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 51,893 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 9.21.ಶೇ.ಇದೆ. ನಿಯಮಿತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 66,08,606 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ ಕೆಲವು ದಿನಗಳಲ್ಲಿ 28 ಮಂದಿಗಳು ಸಾವನ್ನಪ್ಪಿದ್ದಾರೆ. ತಿರುವನಂತಪುರ ಕೊಯ್ತುಕೋಣಂನ ಕೋಲಮ್ಮ (80), ಪೆರುಮಣ್ಣೂರಿನ ಗೋಪಾಕುಮಾರ್ (49), ತಿರುಮುಲ್ಲವರದ ಗೋಪನ್ (55),ಆಲಪ್ಪುಳ ಪುಲಿಂಕುನ್ನಿನ ಮಣಿಯನ್ (74), ಕಲ್ಲುಪಳಂನ ಸೂಪಿ (49) ), ಕೊಟ್ಟಾಯಂ ಮೀನಾಚಿಲ್ ಮೂಲದ ಅಬ್ದುಲ್ ಸಮದ್ (65), ಎರ್ನಾಕುಳಂ ಪಿರಾವೋಮ್‍ನ ಭವಾನಿ ರವೀಂದ್ರನ್ (62), ತೋಪುಂಪಡಿಯ ಕೆ.ಜಿ. ನಾರ್ಬರ್ಟ್ (80), ತಿರುವಾಳ್ಳೂರ್ ನ ರಾಜನ್(74), ತ್ರಿಶೂರ್ ಗುರುವಾಯೂರ್ ನ ಫಾತಿಮಾ ಬೀವಿ(77), ಪರಪೂಕ್ಕರದ ಕುಟ್ಟನ್ (72), ಪರವತ್ತಿಯ ಫಾತಿಮಾ (88), ಮಲಪ್ಪುರಂ ತಾಳೆಕ್ಕೋಟ್ ನ ಮುಹಮ್ಮದ್ (82), ಎ.ಆರ್ ನಗರದ ಕುಂಞÂ ಕಣ್ಣನ್(63), ಅಕ್ಕಪರಂಬುವಿನ ಮರಕ್ಕಾರ್ (83), ಕೋಝಿಕ್ಕೋಡ್ ಮುಚ್ಚಕುನ್ನಿನ ಗೋಪಾಲನ್ (71)ಫೆರೂಕ್ ನ ಬಿಚ್ಚಿಕ್ಕೋಯ(68), ಕಣ್ಣೂರು ಕೂತುಪರಂಬಿನ ಮಣಿ(65), ವೆಸ್ಟ್ ಹಿಲ್ ನ ಶಾಂತಾ(82), ಪೆರುವಣ್ಣಾಮುಳಿಚ್ಚಿಯ ಜಾನಕಿ(69), ವಡಗರದ ಅಸೀಸ್(62), ತಳಿಪರಂಬದ ಪವಿತ್ರನ್ (60), ಕಾಟ್ಟಾಚಿರದ ಸಿ.ಕೆ. ಆಯಿಷಾ(68), ಕಣ್ಣೂರು ನಿವಾಸಿ ಅಬ್ದುಲ್ ಖಾದಿರ್ (77), ಕಾಸರಗೋಡು ತೆಕ್ಕಿಲ್ ನ ಕಣ್ಣನ್ (68), ಸಿರಾಮಿಕ್ ರೋಡ್ ನ ನಫೀಸಾ(72) ಎಂಬಂತೆ ಸೋಂಕು ಬಾಧಿಸಿ ಮೃತಪಟ್ಟವರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 2,418 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 84 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4120 ಜನರಿಗೆ ಸೋಂಕು ತಗಲಿತು. 534 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 623, ಕೋಝಿಕ್ಕೋಡ್ 534, ತ್ರಿಶೂರ್ 461, ಎರ್ನಾಕುಳಂ 360, ಕೊಟ್ಟಾಯಂ 386, ಕೊಲ್ಲಂ 378, ತಿರುವನಂತಪುರ 204, ಪಾಲಕ್ಕಾಡ್ 178, ಆಲಪ್ಪುಳ 256, ಕಣ್ಣೂರು 176, ವಯನಾಡ್ 201, ಪತ್ತನಂತಿಟ್ಟು 146, ಇಡುಕ್ಕಿ 145, ಕಾಸರಗೋಡು 72 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ.
39 ಆರೋಗ್ಯ ಕಾರ್ಯಕರ್ತರಿಗೂ ಸೋಂಕು ದೃಢಪಡಿಸಲಾಗಿದೆ. ತಿರುವನಂತಪುರ, ಕೋಝಿಕ್ಕೋಡ್ ತಲಾ 6, ಕಣ್ಣೂರು 5, ಇಡುಕಿ, ಎರ್ನಾಕುಳಂ, ತ್ರಿಶೂರ್, ವಯನಾಡ್ ತಲಾ 4, ಪತ್ತನಂತಿಟ್ಟು, ಪಾಲಕ್ಕಡ್ 2, ಕೊಟ್ಟಾಯಂ, ಮಲಪ್ಪುರಂ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ದೃಢಪಟ್ಟಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5217 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 377, ಕೊಲ್ಲಂ 336, ಪತ್ತನಂತಿಟ್ಟು 172, ಆಲಪ್ಪುಳ 468, ಕೊಟ್ಟಾಯಂ 613, ಇಡುಕಿ 64, ಎರ್ನಾಕುಳಂ 685, ತ್ರಿಶೂರ್ 270, ಪಾಲಕ್ಕಾಡ್ 397, ಮಲಪ್ಪುರಂ 852, ಕೋಝಿಕ್ಕೋಡ್ 599, ವಯನಾಡ್ 80, ಕಣ್ಣೂರು 197, ಕಾಸರಗೋಡು 107 ಮಂದಿಗೆ ನೆಗೆಟಿವ್ ಆಗಿದೆ. ಇದರೊಂದಿಗೆ 60,924 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 5,72,911 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,14,400 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,99,469 ಮನೆ / ಸಾಂಸ್ಥಿಕ ಸಂಪರ್ಕತಡೆಯಲ್ಲಿ ಮತ್ತು 14,931 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1643 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 3 ಹೊಸ ಹಾಟ್‍ಸ್ಪಾಟ್‍ಗಳಿವೆ. ಹೊಸ ಹಾಟ್‍ಸ್ಪಾಟ್‍ಗಳು ಇಡುಕಿ ಜಿಲ್ಲೆಯ ಮುನ್ನಾರ್ (ಕಂಟೋನ್ಮೆಂಟ್ ವಲಯ ಉಪ-ವಾರ್ಡ್‍ಗಳು 17 ಮತ್ತು 19), ಎರ್ನಾಕುಳಂ ಜಿಲ್ಲೆಯ ಇಕರಾನಾದ್ (ಉಪ-ವಾರ್ಡ್ 12) ಮತ್ತು ಪಾಲಕ್ಕಾಡ್ ಜಿಲ್ಲೆಯ ಚಾಲಿಸ್ಸೆರಿ (7).
ಒಂದು ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ ಒಟ್ಟು 446 ಹಾಟ್‍ಸ್ಪಾಟ್‍ಗಳಿವೆ.