ತಿರುವನಂತಪುರ: ಕೋವಿಡ್ ವ್ಯಾಪಕತೆಯ ಕಾರಣ ಕಳೆದ ಒಂಬತ್ತು ತಿಂಗಳಿಂದ ಮುಚ್ಚಲ್ಪಟ್ಟಿರುವ ರಾಜ್ಯದ ವೃತ್ತಿಪರ ಕಾಲೇಜುಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಜನವರಿ 4 ರಂದು ಮತ್ತೆ ತೆರೆಯಲಿವೆ. ಈ ಕುರಿತು ಶೀಘ್ರದಲ್ಲೇ ಅಂತಿಮ ಆದೇಶ ಹೊರಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ತಿಳಿಸಿದ್ದಾರೆ.
ಯಾರಿಗೆಲ್ಲ ತರಗತಿಗಳು:
ಅಧ್ಯಯನದ ನಷ್ಟವನ್ನು ಸರಿಪಡಿಸಲು ಶನಿವಾರ ಹಾಜರಾತಿಯ ದಿನವಾಗಲಿದೆ ಎಂದು ಸಚಿವರು ಹೇಳಿದರು. ಕಾಲೇಜುಗಳನ್ನು ತೆರೆಯುವಾಗ ಗಮನಿಸಬೇಕಾದ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದೆ. ಕಾಲೇಜುಗಳು ಸೆಮಿಷ್ಟರ್ ಆಧಾರದಲಲಿ ಕಾರ್ಯನಿರ್ವಹಿಸುತ್ತವೆ. ಸೆಮಿಸ್ಟರ್ ಆಧಾರದಂತೆ ಶೇ.50 ಕ್ಕಿಂತ ಕಡಿಮೆ ಹಾಜರಾತಿ ಇರುತ್ತದೆ. ಕಾನೂನು, ಸಂಗೀತ, ಕಲೆ ಮತ್ತು ವಿಜ್ಞಾನ, ಲಲಿತಕಲೆ, ದೈಹಿಕ ಶಿಕ್ಷಣ, ಪಾಲಿಟೆಕ್ನಿಕ್ ಕಾಲೇಜುಗಳು ಮತ್ತು ಸಂಬಂಧಿತ ವಿಶ್ವವಿದ್ಯಾಲಯಗಳಲ್ಲಿ ಐದು / ಆರು ಸೆಮಿಸ್ಟರ್ ಪದವಿಪೂರ್ವ / ಪಿಜಿ ತರಗತಿಗಳನ್ನು ಪ್ರಾರಂಭಿಸಲಾಗುವುದು.