ತಿರುವನಂತಪುರ: ಕೇರಳದ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದರೂ ಉದ್ಯೋಗ ಲಭಿಸದೆ 50-65 ವರ್ಷದೊಳಗಿನವರಿಗೆ ಸ್ವ-ಉದ್ಯೋಗ ಉದ್ಯಮಗಳನ್ನು ಪ್ರಾರಂಭಿಸಲು ನವಜೀವನ್ ಯೋಜನೆಯನ್ನು ಜಾರಿಗೆ ತರಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಉದ್ಯಮಗಳನ್ನು ಪ್ರಾರಂಭಿಸಲು ಸರ್ಕಾರ ಸಬ್ಸಿಡಿ ಸಾಲವನ್ನು ನೀಡಲಿದೆ. ವಿವಿಧ ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗುವುದು.
ಇತರ ಕ್ಯಾಬಿನೆಟ್ ನಿರ್ಧಾರಗಳು:
ಕೇರಳ ಮಿನರಲ್ಸ್ ಅಂಡ್ ಮೆಟಲ್ಸ್ ಲಿಮಿಟೆಡ್. ಮೂಲಕ ಹೊದತಾಗಿ 5 ಟಿ.ಪಿ.ಎಚ್. ಒತ್ತಡದ ಶೋಧನೆ ಮತ್ತು ಸ್ಪಿನ್ ಫ್ಲ್ಯಾಷ್ ಒಣಗಿಸುವಿಕೆಯ ವ್ಯವಸ್ಥೆಯನ್ನು ಸ್ಥಾಪಿಸಲು ಅನುಮತಿ ನೀಡಲು ನಿರ್ಧರಿಸಲಾಯಿತು. ಇದರ ವೆಚ್ಚ 65 ಕೋಟಿ ರೂ. ಆಗಲಿದೆ. ಕೆಎಂಎಂಎಲ್‍ನಲ್ಲಿ ಖನಿಜ ವಿಭಜನೆ(ಸೆಫರೇಶನ್) ಘಟಕಕ್ಕೆ 235 ಹುದ್ದೆಗಳನ್ನು ರಚಿಸಲು ಅನುಮತಿ ನೀಡಲಾಗುವುದು.
ಪಾರಂಪರಿಕ ಅಧ್ಯಯನ ಕೇಂದ್ರದಲ್ಲಿ ಅನುಮೋದಿತ ಹುದ್ದೆಗಳಲ್ಲಿ ಕೆಲಸ ಮಾಡುವ ನೌಕರರಿಗೆ 10 ನೇ ವೇತನ ಪರಿಷ್ಕರಣೆ ಜಾರಿಗೆ ತರಲು ನಿರ್ಧರಿಸಲಾಗಿದೆ.
2018 ರಲ್ಲಿ ಪ್ರವಾಹದಿಂದ ಹಾನಿಗೊಳಗಾದ ನೋಂದಾಯಿತ ಅಲಂಕಾರಿಕ ಮೀನು ರೈತರಿಗೆ ಪರಿಹಾರ ನೀಡಲು ಮುಖ್ಯಮಂತ್ರಿಯ ವಿಪತ್ತು ಪರಿಹಾರ ನಿಧಿüಯಿಂದ 7.9 ಲಕ್ಷ ರೂ.ಗಳನ್ನು ಮಂಜೂರು ಮಾಡಲು ನಿರ್ಧರಿಸಲಾಗಿದೆ.
ರಾಜ್ಯದ ವಿವಿಧ ಅನುದಾನಿತ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ 721 ಹುದ್ದೆಗಳನ್ನು ರಚಿಸಲು ನಿರ್ಧರಿಸಲಾಗಿದೆ.
ತಿರುವನಂತಪುರ ಈಸ್ಟ್ ಪೋರ್ಟ್‍ಲ್ಲಿ ರಸ್ತೆ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಒಕ್ಕಲೇಳಬೇಕಾದ 20 ವ್ಯಾಪಾರಿಗಳಿಗೆ ಮಾನವೀಯತೆಯ ಆಧಾರದಲ್ಲಿ ಪುನರ್ವಸತಿ ಕಲ್ಪಿಸಲು ನಿರ್ಧರಿಸಲಾಗಿದೆ. ವಂಚಿಯೂರ್ ಗ್ರಾಮದಲ್ಲಿ 5.9 ಚದರ ಮೀಟರ್ ಭೂಮಿಯನ್ನು ವ್ಯಾಪಾರಿಗಳಿಗೆ ಮೂರು ವರ್ಷಗಳ ಕಾಲ ಗುತ್ತಿಗೆ ನೀಡಲಾಗುವುದು. ಅಭಿವೃದ್ದಿ ಕಾಮಗಾರಿಗಳು ಮುಕ್ತಾಯಗೊಂಡ ನಂತರ ಗುತ್ತಿಗೆಯನ್ನು ಇನ್ನೂ ಮೂರು ಬಾರಿ ನವೀಕರಿಸಲಾಗುತ್ತದೆ. ಮಾರುಕಟ್ಟೆ ಬೆಲೆಯ ಶೇಕಡಾ 5 ಕ್ಕೆ ಭೂಮಿಯನ್ನು ಗುತ್ತಿಗೆಗೆ ನೀಡಲಾಗುವುದು. 12 ವರ್ಷಗಳಲ್ಲಿ ಈ ವ್ಯಾಪಾರಿಗಳನ್ನು ಕೆಎಸ್‍ಆರ್‍ಟಿಸಿ ನಿರ್ಮಿಸಲು ಉದ್ದೇಶಿಸಿರುವ ವ್ಯಾಪಾರ ಸಮುಚ್ಚಯದಲ್ಲಿ ಪುನರ್ವಸತಿಗೆ ವ್ಯವಸ್ಥೆಗೊಳಿಸಲು ನಿರ್ಧರಿಸಲಾಯಿತು.
ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಯೋಗ ಅಧ್ಯಕ್ಷರನ್ನಾಗಿ ಬಿ.ಎಸ್.ಮಾವೋಜಿ ಹಾಗೂ ಸದಸ್ಯರಾಗಿ ಎಸ್. ಅಜಯಕುಮಾರ್ (ಮಾಜಿ ಸಂಸದೆ) ನ್ಯಾಯವಾದಿ. ಸೌಮ್ಯಾ ಸೋಮನ್ (ಇಡುಕ್ಕಿ) ಅವರನ್ನೂ ನೇಮಕ ಮಾಡಲಾಗುವುದು.
ಅವರನ್ನು ಕೇರಳ ರಾಜ್ಯ ನಾಗರಿಕ ಸೇವೆಯಿಂದ ಭಾರತೀಯ ಆಡಳಿತ ಸೇವೆಗೆ ವರ್ಗಾಯಿಸಲಾಯಿತು. ಶಿಬು ಅವರನ್ನು ವಸತಿ ಆಯುಕ್ತರನ್ನಾಗಿ ನೇಮಿಸಲು ನಿರ್ಧರಿಸಲಾಯಿತು. ಅವರು ವಸತಿ ಮಂಡಳಿ ಕಾರ್ಯದರ್ಶಿಯ ಹೆಚ್ಚುವರಿ ಜವಾಬ್ದಾರಿಯನ್ನು ಸಹ ಹೊಂದಿರುತ್ತಾರೆ.
ಕೇರಳ ರಾಜ್ಯ ನಾಗರಿಕ ಸೇವೆಯಿಂದ ಭಾರತೀಯ ಆಡಳಿತ ಸೇವೆಗೆ ವರ್ಗಾಯಿಸಲ್ಪಟ್ಟ ಜಾನ್ ವಿ. ಸ್ಯಾಮ್ಯುಯೆಲ್ ಅವರನ್ನು ಭೂ ಮಂಡಳಿ ಕಾರ್ಯದರ್ಶಿಯಾಗಿ ನೇಮಿಸಲು ನಿರ್ಧರಿಸಲಾಯಿತು.
ಕೇರಳ ರಾಜ್ಯ ನಾಗರಿಕ ಸೇವೆಯಿಂದ ಭಾರತೀಯ ಆಡಳಿತ ಸೇವೆಗೆ ನೇಮಕರಾದ ವಿನೋದ್ ಡಿಸೆಂಬರ್ 31 ಪದೋನ್ನತಿಯಾಗಲಿದ್ದು ಅವರ ಸ್ಥಾನಕ್ಕೆ ಪದ್ಮಕುಮಾರ್ ಅವರನ್ನು ಗ್ರಾಮೀಣಾಭಿವೃದ್ಧಿ ಆಯುಕ್ತರನ್ನಾಗಿ ನೇಮಿಸಲು ನಿರ್ಧರಿಸಲಾಯಿತು. 2021 ರ ವಿಧಾನ ಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕಿರುವ ವಂದನಾ ನಿರ್ಣಯದ ಕರಡಿಗೆ ಅನುಮೋದನೆ ನೀಡಲಾಯಿತು.
ಕಿಲಾದಲ್ಲಿ ಗುತ್ತಿಗೆ / ದಿನ ವೇತನ ಆಧಾರದ ಮೇಲೆ ಕೆಲಸ ಮಾಡುವವರಲ್ಲಿ
10 ವರ್ಷಗಳನ್ನು ಪೂರೈಸಿದ ನೌಕರರನ್ನು ಖಾರ್ಯಗೊಳಿಸಲು ನಿರ್ಧರಿಸಲಾಯಿತು.
ನಯ್ಯಾಟ್ಟಿಂಗರ ಜನರಲ್ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಮತ್ತು ಕ್ಲಿನಿಕಲ್ ಲ್ಯಾಬ್ (ಟ್ರಾನ್ಸ್‍ಫ್ಯೂಷನ್ ಮೆಡಿಸಿನ್) ವಿಭಾಗದಲ್ಲಿ ಜೂನಿಯರ್ ಕನ್ಸಲ್ಟೆಂಟ್ ಹುದ್ದೆಯನ್ನು ರಚಿಸಲು ನಿರ್ಧರಿಸಲಾಗಿದೆ.