ತಿರುವನಂತಪುರ: ಹೈಕೋರ್ಟ್ ಆದೇಶದಂತೆ ಪ್ರತಿದಿನ ಶಬರಿಮಲೆಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯನ್ನು 5,000 ಕ್ಕೆ ಹೆಚ್ಚಿಸಲಾಗಿದೆ.
ಆನ್‍ಲೈನ್ ಬುಕಿಂಗ್ ಮಂಗಳವಾರ ಸಂಜೆ 6 ಗಂಟೆಗೆ ಪ್ರಾರಂಭವಾಯಿತು. ಭಕ್ತರು https://sabarimalaonline.org ಎಂಬ ವೈಬ್ ಸೈಟ್ ಮೂಲಕ ಬುಕ್ ಮಾಡಲು ಸಾಧ್ಯವಿದೆ.
ಯಾತ್ರೆ ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಲಿದೆ. ಎಲ್ಲಾ ಯಾತ್ರಿಗಳು ನೀಲಕ್ಕಲ್ ತಲುಪಿದ 24 ಗಂಟೆಗಳಲ್ಲಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿರಬೇಕು.
ಡಿಸೆಂಬರ್ 26 ರ ನಂತರ ಆಗಮಿಸುವವರಿಗೆ 48 ಗಂಟೆಗಳ ಒಳಗೆ ನೀಡಲಾದ ಆರ್ಟಿ ಪಿಸಿಆರ್ ನಕಾರಾತ್ಮಕ ಪ್ರಮಾಣಪತ್ರದ ಅಗತ್ಯವಿದೆ.
ಇದಕ್ಕಾಗಿ ಸೌಲಭ್ಯಗಳನ್ನು ಪಾಕಿರ್ಂಗ್ ಸ್ಥಳದಲ್ಲಿ ಸ್ಥಾಪಿಸಲಾಗಿದೆ. ಪರ್ಯಾಯವಾಗಿ, ಯಾತ್ರಿಕರು ಶಬರಿಮಲೆಗೆ ಪ್ರಯಾಣದುದ್ದಕ್ಕೂ ವ್ಯವಸ್ಥೆಗೊಳಿಸಿದ ಸರ್ಕಾರಿ ಅಥವಾ ಖಾಸಗಿ ಏಜೆನ್ಸಿಗಳು ನಡೆಸುವ ಯಾವುದೇ ಅಧಿಕೃತ ಕೋವಿಡ್ ಕಿಯೋಸ್ಕ್ನಲ್ಲಿ ಪರಿಶೀಲಿಸಬಹುದು.