HEALTH TIPS

ರಾಜ್ಯದಲ್ಲಿ ಇಂದು 5376 ಮಂದಿಗೆ ಸೋಂಕು- ಸಂಪರ್ಕದ ಮೂಲಕ 4724 ಮಂದಿಗೆ ಕೋವಿಡ್- 31 ಕೋವಿಡ್ ಸಾವು!

 

       ತಿರುವನಂತಪುರ: ಕೇರಳದಲ್ಲಿ ಇಂದು 5376 ಜನರಿಗೆ ಕೋವಿಡ್ ಬಾಧಿಸಿದೆ. ಮಲಪ್ಪುರಂ 714, ತ್ರಿಶೂರ್ 647, ಕೋಝಿಕ್ಕೋಡ್ 547, ಎರ್ನಾಕುಳಂ 441, ತಿರುವನಂತಪುರಂ 424, ಆಲಪ್ಪುಳ 408, ಪಾಲಕ್ಕಾಡ್ 375, ಕೊಟ್ಟಾಯಂ 337, ಪತ್ತನಂತಿಟ್ಟು 317, ಕಣ್ಣೂರು 288, ಕೊಲ್ಲಂ 285, ಇಡುಕ್ಕಿ 265, ವಯನಾಡ್ 238, ಕಾಸರಗೋಡು 90 ಎಂಬಂತೆ ಸೋಂಕು ಬಾಧಿಸಿದೆ. 

      ಕಳೆದ 24 ಗಂಟೆಗಳಲ್ಲಿ 60,476 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ 8.89 ಶೇ.ಆಗಿದೆ. ನಿಯಮಿತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್ ಎ ಎಂ ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 63,38,754 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

      ಇಂದು, ಕೋವಿಡ್ ಬಾಧಿಸಿ ಅತಿಹೆಚ್ಚು ಎಂದರೆ 31 ಸಾವುಗಳು ದೃಢಪಟ್ಟಿದೆ. ತಿರುವನಂತಪುರ ಮುಕೊಲಕ್ಕಲ್ ನ ತಂಗರಾಜನ್ (80), ಅಟ್ಟಿಂಗಲ್ ನ ಇಂದು ಶೇಖರನ್ (65), ಆಯಿರಾದ ಅಖಿಲ್ (27), ಚಿರಯಿಲ್ ಕುಳಿಯ  ನೀಲಕಂಠನ್ ಆಶಾರಿ (85), ಕಡಕಂಪಲ್ಲಿಯ ಮೋಹನನ್ ನಾಯರ್ (63), ಕೊಲ್ಲಂ ಓಚ್ಚಿರಾದ ಯಶೋದರನ್(85), ಚೆತುವಳಿಯ ಲೈಲಾ(34), ಮೈನಾಗಪ್ಪಳ್ಳಿಯ ರಾಜು(58), ಪರಿಪ್ಪಳ್ಳಿಯ ಪದ್ಮಾಕ್ಷಿ(72), ಮೆಕ್ಕಾಟ್ ನ ವಿವೇಕ್(26), ಪುತ್ತನ್ ಕುಳಂ ನ ತಂಗಯ್ಯ(61), ಮಾನಕ್ಕರದ ಜಯಸುಧಾ(39), ಆಲಪ್ಪುಳ ಚೇರ್ತಲಾದ ಅಗಸ್ಟಿನ್ (76), ಪಳ್ಳಿಕ್ಕಾಲ್ ನ ಸೋಮರಾಜನ್(60), ಚೇರ್ತಲದ ಸೋಮನ್(67), ಚೇರ್ತಲದ ರಾಜಮ್ಮ(91), ತಿರುವಾನ್ ಮೂಡ್ ನ ಹೈಮಾವತಿ(70), ಕಾಯಂಕುಳಂನ ಗೋವಿಂದ ಪಣಿಕ್ಕರ್ (60), ಎರ್ನಾಕುಳಂ ಕರಿಮುಗಳ್ ನ ತಂಗ(79),ತೃಶೂರ್ ಎಡಕ್ಕಾಯೂರ್ ನ  ಅಬ್ದುಲ್ಲಾ ಕುಟ್ಟಿ (70),  ಬ್ಲಾಂಕೋಟ್ ನ  ಶಂಸುದ್ದೀನ್ (72), ಪಳ್ಳಂ ನ ಮಾಲೂಟ್ಟಿ (59), ಚಾವಕ್ಕಾಡ್ ನ ಮುಹಮ್ಮದ್ (65), ಮಲಪ್ಪುರಂ ಕಿಳಿಪರಂಬಿನ ವಿಜಯನ್(60), ಚೀಕ್ಕೋನ್ ನ ಉಮ್ಮಯಾ (70), ಅರಕ್ಕಪ್ಪರಂಬು ಮೊಯ್ದುಟ್ಟಿ(61), ಕೋಝಿಕ್ಕೋಡ್ ಮಲಪ್ಪರಂಬಿನ ಸಿದ್ದಾರ್ಥನ್(72), ಉಳ್ಳಿಯೋರಿಯ ಕುಂಞÂರಾಯನ್(73), ವಯನಾಡ್ ವಿಲಂಗಪುರಂನ ಆಯಿಷಾ (60), ಕಣ್ಣೂರು ಚೆಲಾಡ್ ನ ಅಹ್ಮದ್ ಕುಂಞÂ (77), ತಾವಕ್ಕರದ ನಳಿನಿ (73) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ.  ಒಟ್ಟು ಸಾವಿನ ಸಂಖ್ಯೆ 2329 ಕ್ಕೆ ಏರಿಕೆಯಾಗಿದೆ. 

     ಇಂದು, ಸೋಂಕು  ಪತ್ತೆಯಾದವರಲ್ಲಿ 81 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4724 ಜನರಿಗೆ ಸೋಂಕು ತಗುಲಿತು. 527 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 690, ತ್ರಿಶೂರ್ 624, ಕೋಝಿಕ್ಕೋಡ್ 509, ಎರ್ನಾಕುಳಂ 335, ತಿರುವನಂತಪುರ 314, ಆಲಪ್ಪುಳ 381, ಪಾಲಕ್ಕಾಡ್ 221, ಕೊಟ್ಟಾಯಂ 331, ಪತ್ತನಂತಿಟ್ಟು 225, ಕಣ್ಣೂರು 254, ಕೊಲ್ಲಂ 282, ಇಡುಕ್ಕಿ 220, ವಯನಾಡ್ 222, ಕಾಸರಗೋಡು 86 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. 

      ಕೋವಿಡ್ ಸೋಂಕು ಇಂದು 44 ಮಂದಿ ಆರೋಗ್ಯ ಕಾರ್ಯಕರ್ತರಲ್ಲೂ ದೃಢಪಟ್ಟಿದೆ.  ಕೋಝಿಕ್ಕೋಡ್ ಕಣ್ಣೂರು ತಲಾ 7, ಎರ್ನಾಕುಳಂ, ಮಲಪ್ಪುರಂ ತಲಾ 6, ತ್ರಿಶೂರ್ 5, ತಿರುವನಂತಪುರ 4, ಇಡುಕಿ 3, ಪತ್ತನಂತಿಟ್ಟು 2, ಕೊಟ್ಟಾಯಂ, ಪಾಲಕ್ಕಾಡ್, ವಯನಾಡ್ ಮತ್ತು ಕಾಸರಗೋಡು 1 ತಲಾ ಎಂಬಂತೆ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಕಂಡುಬಂದಿದೆ. 

      ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5590 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುÀಂ 380, ಕೊಲ್ಲಂ 332, ಪತ್ತನಂತಿಟ್ಟು 169, ಆಲಪ್ಪುಳ 537, ಕೊಟ್ಟಾಯಂ 337, ಇಡುಕ್ಕಿ 148, ಎರ್ನಾಕುಳಂ 770, ತ್ರಿಶೂರ್ 734, ಪಾಲಕ್ಕಾಡ್ 397, ಮಲಪ್ಪುರಂ 764, ಕೋಝಿಕ್ಕೋಡ್ ï 629, ವಯನಾಡ್ 97,ಕಣ್ಣೂರು 196, ಕಾಸರಗೋಡು 60 ಎಂಬಂತೆ ನೆಗೆಟಿವ್ ಕಂಡುಬಂದಿದೆ. ಇದರೊಂದಿಗೆ 61,209 ಜನರಿಗೆ ಈ ರೋಗ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 5,56,378 ಮಂದಿ ಈವರೆಗೆ ಕೋವಿಡ್ ನಿಂದ ಮುಕ್ತರಾಗಿದ್ದಾರೆ.

     ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,11,237 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,95,981 ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 15,256 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1716 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.


   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries