ತಿರುವನಂತಪುರ: ರಾಜ್ಯದಲ್ಲಿ ಇಂದು 5711 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಕೊಟ್ಟಾಯಂ 905, ಮಲಪ್ಪುರಂ 662, ಕೋಝಿಕ್ಕೋಡ್ 650, ಎರ್ನಾಕುಳಂ 591, ಕೊಲ್ಲಂ 484, ತ್ರಿಶೂರ್ 408, ಪತ್ತನಂತಿಟ್ಟು 360, ತಿರುವನಂತಪುರ 333, ಕಣ್ಣೂರು 292, ಆಲಪ್ಪುಳ 254, ಪಾಲಕ್ಕಾಡ್ 247, ಇಡುಕ್ಕಿ 225, ವಯನಾಡ್ 206, ಕಾಸರಗೋಡು 94 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 53,858 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.10.60 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್ ಎ ಎಂ ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 73,47,376 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. ತಿರುವನಂತಪುರ ಪೆರುಕಾವು ಮೂಲದ ಥಾಮಸ್ (74), ಕನ್ನಮ್ಮುಲಾದ ಅಬ್ದುಲ್ ಶುಕೂರ್ ಖಾನ್ (79), ಪುನಲಾಲ್ ನ ಯೋಸುದಾನನ್ (56), ಪತ್ತನಂತಿಟ್ಟಿನ ಸರೋಜಿನಿ ಅಮ್ಮ (64), ಆಲಪ್ಪುಳ ಮಾಳಿಗಮುಕ್ಕಿನ ರೆನಾಲ್ಡ್ (61), ಪೂಚ್ಚಕ್ಕಲ್ ನ ಸುಬೈದಾ(68), ನೂರನಾಡಿನ ಕುಂಞÂಕುಟ್ಟಿ(93), ಕೋಟ್ಟಯಂ ವಳವೂರ್ ನ ವಿ.ಜೆ.ಥೋಮಸ್(67), ಕಾತ್ತಿರಪ್ಪಳ್ಳಿಯ ಪುರುಷೋತ್ತಮ ಕುರುಪ್ (84), ಎರ್ನಾಕುಳಂ ಚೆನ್ನೂರ್ ನ ಟಿ.ಡಿ. ಆಂಟನಿ(75), ಕುನ್ನತ್ತನಾಡಿನ ರುಬಿಯ(68), ಎಳಕುನ್ನಪ್ಪುಳದ ನಂದೀಶನ್(67), ತ್ರಿಶೂರಿನ ವೇಳತೂರ್‍ನ ಟಿ.ಪಿ. ರೌಸಫ್(81), ಪುನಯೂರ್ ಕುಳಂ ನ ವಾಸು(53), ಕಾಟೂರಿನ ಭವಾನಿ (86), ತಾಲಿಕುಳಂನ ಮೈಮೂನಾ (67), ಪಾಲಕಡ್ ತಚಂಪಾರದ ಮುಹಮ್ಮದ್ (72), ಪಟ್ಟಾಂಬಿಯ ರಾಜ ಮೋಹನ್ (67), ಎಲವಂಪಾಡ್ ನ ಬಾಬು(42), ಶ್ರೀಕೃಷ್ಣಪುರಂ ನ ಮುಹಮ್ಮದ್ ಹಾಜಿ(82), ಮಲಪ್ಪುರಂ ನೆಲ್ಲಿಕುನ್ನುವಿನ ಆಯಿಷಾ(73), ವಳೀಕ್ಕಡವಿನ ಹಾಜಿರಾ (58), ಅರಿಕೋಡ್ ನ ಮಮ್ಮದ್ (87), ಕೋಝಿಕ್ಕೋಡ್ ತಿರುವಂಗೂರಿನ ಆಯಿಶಾಬಿ (75), ವಡಗರದ ಕುಂಜೈಶಾ (76), ಚೆರುವಟ್ಟದ ಕುಂಞÂ ಮೊಯ್ದೀನ್ ಕುಟ್ಟಿ(68), ಪೆರುಮಣ್ಣದ ಕುಟ್ಟಿಯಥಾ (69), ಅಡಕರಾದ ಮಾಯಿಂಕುಟ್ಟಿ (72), ಚಾಲಿಯಾಂನ ನೌಶಾದ್ (37), ವಯನಾಡ್ ಪಡಿಞರ್ ದ ಮೊಯ್ದು(80) ಎಂಬವರು ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ. ಈವರೆಗೆ ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ 2,816 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 111 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 5058 ಜನರಿಗೆ ಸೋಂಕು ತಗುಲಿತು. 501 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೊಟ್ಟಾಯಂ 853, ಮಲಪ್ಪುರಂ 623, ಕೋಝಿಕ್ಕೋಡ್ 621, ಎರ್ನಾಕುಳಂ 437, ಕೊಲ್ಲಂ 478, ತ್ರಿಶೂರ್ 389, ಪತ್ತನಂತಿಟ್ಟು 297, ತಿರುವನಂತಪುರ 240, ಕಣ್ಣೂರು 249, ಆಲಪ್ಪುಳ 239, ಪಾಲಕ್ಕಾಡ್ 125, ಇಡುಕ್ಕಿ 216, ವಯನಾಡ್ 202, ಕಾಸರಗೋಡು 89 ಮಂದಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ.
41 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಎರ್ನಾಕುಳಂ 9, ಪತ್ತನಂತಿಟ್ಟು, ಕೊಝಿಕ್ಕೋಡ್ ತಲಾ 6, ತ್ರಿಶೂರ್, ಕಣ್ಣೂರು ತಲಾ 5, ತಿರುವನಂತಪುರ 3, ಪಾಲಕ್ಕಾಡ್, ವಯನಾಡ್ ತಲಾ 2, ಕೊಲ್ಲಂ, ಕೊಟ್ಟಾಯಂ ಮತ್ತು ಕಾಸರಗೋಡು 1 ಆರೋಗ್ಯ ಕಾರ್ಯಕರ್ತರಿಗೆ ಸೋಮಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4471 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 315, ಕೊಲ್ಲಂ 298, ಪತ್ತನಂತಿಟ್ಟು 182, ಆಲಪ್ಪುಳ 433, ಕೊಟ್ಟಾಯಂ 415, ಇಡುಕಿ 97, ಎರ್ನಾಕುಳಂ 499, ತ್ರಿಶೂರ್ 279, ಪಾಲಕ್ಕಾಡ್ 267, ಮಲಪ್ಪುರಂ 641, ಕೋಝಿಕ್ಕೋಡ್ 684, ವಯನಾಡ್ 164, ಕಣ್ಣೂರು 160, ಕಾಸರಗೋಡು 37 ಮಂದಿಗಳಿಗೆ ನೆಗೆಟಿವ್ ಆಗಿದೆ. ಇದರೊಂದಿಗೆ 61,604 ಜನರಿಗೆ ಈ ರೋಗ ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 6,41,285 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,87,099 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,73,398 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 13,701 ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 1393 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 2 ಹೊಸ ಹಾಟ್‍ಸ್ಪಾಟ್‍ಗಳಿವೆ. ಪಾಲಕ್ಕಾಡ್ ಜಿಲ್ಲೆಯ ಒಟ್ಟಾಪಲಂ ಪುರಸಭೆ (ಕಂಟೋನ್ಮೆಂಟ್ ವಲಯ ವಾರ್ಡ್ 27) ಮತ್ತು ಇಡುಕಿ ಜಿಲ್ಲೆಯ ಕೊಕ್ಕಾಯರ್ (11) ಹೊಸ ಹಾಟ್‍ಸ್ಪಾಟ್‍ಗಳಾಗಿವೆ.
ಇಂದು 2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ ಒಟ್ಟು 458 ಹಾಟ್‍ಸ್ಪಾಟ್‍ಗಳಿವೆ.