ತಿರುವನಂತಪುರ: ರಾಜ್ಯದಲ್ಲಿ ಇಂದು 5848 ಜನರಿಗೆ ಕೋವಿಡ್ ಬಾಧಿಸಿರುವುದು ದೃಢಪಟ್ಟಿದೆ. ಮಲಪ್ಪುರಂ 920, ಕೋಝಿಕ್ಕೋಡ್ 688, ಎರ್ನಾಕುಳಂ 655, ಕೊಟ್ಟಾಯಂ 567, ತ್ರಿಶೂರ್ 536, ಕೊಲ್ಲಂ 405, ಪಾಲಕ್ಕಾಡ್ 399, ಆಲಪ್ಪುಳ 365, ತಿರುವನಂತಪುರ 288, ಕಣ್ಣೂರು 280, ವಯನಾಡ್ 258, ಪತ್ತನಂತಿಟ್ಟು 208, ಇಡುಕ್ಕಿ 157, ಕಾಸರಗೋಡು 112 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 60,503 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 9.67.ಶೇ ದಷ್ಟಿದೆ. ನಿಯಮಿತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 65,56,713 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕೋವಿಡ್ ಬಾಧಿಸಿ 32 ಮಂದಿ ಸಾವನ್ನಪ್ಪಿದ್ದಾರೆ. ತಿರುವನಂತಪುರ ವೆಂಗಮಲದ ವಸಂತಿ (60), ಕಲ್ಲಂಬಲಂನ ಸೆಲ್ವರಾಜ್ (51), ಪೂಂತುರಾದ ಶಾಹುಲ್ ಹಮೀಡಿ (64),ಕೊಲ್ಲಂ ಪೆÇರುವಾಜಿಯ ರಮ್ಲಾ (46),ಪತ್ತನಂತಿಟ್ಟು ಪೆರುಮಲದ ಚೆಲ್ಲಮ್ಮಲ್ (69) ಎರ್ನಾಕುಳಂನ ವೆಲಂಗಾಡ್ ನ ಅನ್ನಿ ಜೋಸೆಫ್ (70),ಕಡಕ್ಕನ್ನಾಡ್ ನ ಕೆ.ಎ.ಪತ್ರೋಸ್(65), ಅಯಂಪುಳದ ಕೆ.ವಿ.ವರ್ಗೀಸ್(65), ಪಳ್ಳಿಕ್ಕರದ ನೀತಿ ವರ್ಕಿ(88), ತೃಶೂರ್ ಅಮ್ಮಾಟನಂ ಜೋಸ್(65), ಚಿಟ್ಟಿಲಪ್ಪುಳ್ಳಿಯ ಸುಬ್ರಹ್ಮಣ್ಯನ್(84), ಎರಮಪ್ಪೆಟ್ಟಿಯ ರವೀಂದ್ರನ್ (65), ರಾಮವರ್ಮಪುರಂನ ವಿಜಿ ಒಮಾನಾ (56), ವೆಳ್ಳಕ್ಕಲ್ ನ ಉನ್ನಿಕೃಷ್ಣನ್ ಮೆನನ್ (77), ಕೂಕರ್ಂಚೇರಿಯ ಶಹೀದಾ (69), ಕೀಲೀಪಡಂನ ರಾಮಕೃಷ್ಣನ್ (78), ಚಾವಕ್ಕಾಡ್ ನ ಅಸೈನಾರ್ (70), ವಾಳೆನಿಯ ಜಾನ್ (60), ಕೊಟ್ಟಪಾಡಿಯ ಜಿನಿ (33),ಪಾಲಕ್ಕಾಡ್ ಮುತ್ತುಲಾದ ಮಣಿಕಂಠನ್ (52), ಮಲಪ್ಪುರಂ ಮುನ್ನಿಯೂರ್ ನ ಉಮ್ಮಚ್ಚುಟ್ಟಿ(66), ಪಳ್ಳಿಕ್ಕಾಲ್ ನ ಕುಂಞÂ ಮುಹಮ್ಮದ್ (62), ಕೋಝಿಕ್ಕೋಡ್ ವೇಳಂನ ಅಬ್ದುರಹ್ಮಾನ್ (72), ತಾಮರಶ್ಚೇರಿಯ ಪಾತುಮ್ಮ (85), ಕರಪರಂಬುವಿನ ಬಾಲಕೃಷ್ಣನ್ (77), ವಡಗರದ ಅಬ್ದುಲ್ಲಾ (88), ವಡಗರದ ಉಮ್ಮರ್ ಕುಟ್ಟಿ (70)ವಯನಾಡ್ ವಾಲಮ್ಮುಕ್ಕ್ ನ ಅಹಮ್ಮದ್(60), ಕಣ್ಣೂರು ವಾಲಾರಿಯ ಕುಂಞÂ ಪಾತು(60), ಪಯ್ಯನ್ನೂರಿನ ಅಬ್ದುಲ್ಲ(59) ಎಂಬಂತೆ ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಈವರೆಗೆ ಒಟ್ಟು 2390 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿರುವರು.
ಇಂದು, ರೋಗ ಸೋಂಕು ಪತ್ತೆಯಾದವರಲ್ಲಿ 53 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 5137 ಜನರಿಗೆ ಸೋಂಕು ತಗಲಿತು. 613 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 880, ಕೋಝಿಕ್ಕೋಡ್ 645, ಎರ್ನಾಕುಳಂ 509, ಕೊಟ್ಟಾಯಂ 561, ತ್ರಿಶೂರ್ 518, ಕೊಲ್ಲಂ 400, ಪಾಲಕ್ಕಾಡ್ 198, ಆಲಪ್ಪುಳ 338, ತಿರುವನಂತಪುರ 195, ಕಣ್ಣೂರು 244, ವಯನಾಡ್ 246, ಪತ್ತನಂತಿಟ್ಟು 173, ಇಡುಕ್ಕಿ 121, ಕಾಸರಗೋಡು 109 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದವರಾಗಿದ್ದಾರೆ.
ನಲವತ್ತೈದು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ. ತಿರುವನಂತಪುರ 7, ಎರ್ನಾಕುಳಂ, ಕಣ್ಣೂರು 6, ತ್ರಿಶೂರ್, ಕೋಝಿಕ್ಕೋಡ್, ವಯನಾಡ್ 5, ಪಾಲಕ್ಕಾಡ್ 4, ಮಲಪ್ಪುರಂ 3, ಕೊಲ್ಲಂ ಮತ್ತು ಕಾಸರಗೋಡು 2 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5820 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 337, ಕೊಲ್ಲಂ 410, ಪತ್ತನಂತಿಟ್ಟು 268, ಆಲಪ್ಪುಳ 551, ಕೊಟ್ಟಾಯಂ 588, ಇಡುಕಿ 88, ಎರ್ನಾಕುಳಂ 492, ತ್ರಿಶೂರ್ 590, ಪಾಲಕ್ಕಾಡ್ 405, ಮಲಪ್ಪುರಂ 1023, ಕೊಝಿಕ್ಕೋಡ್ 460, ವಯನಾಡ್ 148, ಕಣ್ಣೂರು 288, ಕಾಸರಗೋಡು 172 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 61,393 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ನಿಂದ ಈವರೆಗೆ 5,67,694 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,15,024 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,99,962 ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 15,062 ಆಸ್ಪತ್ರೆಗಳಲ್ಲಿರುವರು. ಒಟ್ಟು 1721 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 2 ಹೊಸ ಹಾಟ್ಸ್ಪಾಟ್ಗಳಿವೆ. ಹೊಸ ಹಾಟ್ಸ್ಪಾಟ್ಗಳು ಅಲಪ್ಪುಳ ಜಿಲ್ಲೆಯ ದೇವಿಕುಲಂ (ಕಂಟೋನ್ಮೆಂಟ್ ವಲಯ ಉಪ ವಾರ್ಡ್ 2) ಮತ್ತು ವಯನಾಡ್ ಜಿಲ್ಲೆಯ ತರಿಯೋಡ್ (9). 2 ಪ್ರದೇಶಗಳನ್ನು ಹಾಟ್ಸ್ಪಾಟ್ನಿಂದ ಹೊರಗಿಡಲಾಗಿದೆ. ಇದರೊಂದಿಗೆ ಒಟ್ಟು 444 ಹಾಟ್ಸ್ಪಾಟ್ಗಳಿವೆ.