ತಿರುವನಂತಪುರ: ಕೇರಳದಲ್ಲಿ ಇಂದು 5887 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಕೊಟ್ಟಾಯಂ 777, ಎರ್ನಾಕುಳಂ 734, ತ್ರಿಶೂರ್ 649, ಮಲಪ್ಪುರಂ 610, ಪತ್ತನಂತಿಟ್ಟು 561, ಕೋಝಿಕೋಡ್ 507, ಕೊಲ್ಲಂ 437, ತಿರುವನಂತಪುರ 414, ಆಲಪ್ಪುಳ 352, ಪಾಲಕ್ಕಾಡ್ 249, ಕಣ್ಣೂರು 230, ವಯನಾಡ್ 208,ಇಡುಕ್ಕಿ 100, ಕಾಸರಗೋಡು 59 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 61,778 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ಪ್ರಮಾಣ ಶೇ.9.53.ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ. ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 77,89,764 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 24 ಸಾವುಗಳು ಉಂಟಾಗಿವೆ. ಇದು ಒಟ್ಟು ಸಾವಿನ ಸಂಖ್ಯೆ 3,014 ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 89 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 5180 ಜನರಿಗೆ ಸೋಂಕು ತಗುಲಿತು. 555 ರ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ಕೊಟ್ಟಾಯಂ 728, ಎರ್ನಾಕುಳಂ 651, ತ್ರಿಶೂರ್ 629, ಮಲಪ್ಪುರಂ 586, ಪತ್ತನಂತಿಟ್ಟು 446, ಕೋಝಿಕೋಡ್ 467, ಕೊಲ್ಲಂ 431, ತಿರುವನಂತಪುರ 293, ಆಲಪ್ಪುಳ 324, ಪಾಲಕ್ಕಾಡ್ 91, ಕಣ್ಣೂರು 194, ವಯನಾಡ್ 195, ಇಡುಕ್ಕಿ 95, ಕಾಸರಗೋಡು 50 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ.
63 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 11, ಪತ್ತನಂತಿಟ್ಟು 10, ಕೋಝಿಕೋಡ್ 8, ತಿರುವನಂತಪುರ 7, ಎರ್ನಾಕುಳಂ 6, ತ್ರಿಶೂರ್ 5, ಕೊಲ್ಲಂ 4, ಪಾಲಕ್ಕಾಡ್, ವಯನಾಡ್ ತಲಾ 3, ಕೊಟ್ಟಾಯಂ, ಕಾಸರಗೋಡು 2, ಆಲಪ್ಪುಳ ಮತ್ತು ಮಲಪ್ಪುರಂ 1 ಎಂಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ಸೋಂಕು ನಿರ್ಣಯ ಮತ್ತು ಚಿಕಿತ್ಸೆ ಪಡೆದ 5029 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 375, ಕೊಲ್ಲಂ 348, ಪತ್ತನಂತಿಟ್ಟು 242, ಆಲಪ್ಪುಳ 237, ಕೊಟ್ಟಾಯಂ 581, ಇಡುಕ್ಕಿ 303, ಎರ್ನಾಕುಳಂ 377, ತ್ರಿಶೂರ್ 604, ಪಾಲಕ್ಕಾಡ್ 379, ಮಲಪ್ಪುರಂ 475, ಕೋಝಿಕೋಡ್ 645, ವಯನಾಡ್ 223, ಕಣ್ಣೂರು 203, ಕಾಸರಗೋಡು 37 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 64,861 ಜನರಿಗೆ ಈ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 6,81,397 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.