ತಿರುವನಂತಪುರ: ಕೇರಳದಲ್ಲಿ ಇಂದು 5949 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆ. ಕೋವಿಡ್ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಮಾಹಿತಿಯನ್ನು ಹಂಚಿಕೊಂಡರು.
ಕೋವಿಡ್ ಧನಾತ್ಮಕ ವಿವರಗಳು-ಜಿಲ್ಲಾವಾರು:
ಇಂದು ಸೋಂಕು ದೃಢಪಟ್ಟ ಜಿಲ್ಲೆಗಲಲಿ ಹೆಚ್ಚಿನವು ಮಲಪ್ಪುರಂ ಜಿಲ್ಲೆಯಲ್ಲಿವೆ. ಮಲಪ್ಪುರಂ 765, ಕೋಝಿಕ್ಕೋಡ್ 763, ಎರ್ನಾಕುಳಂ 732, ಕೊಟ್ಟಾಯಂ 593, ತ್ರಿಶೂರ್ 528, ಆಲಪ್ಪುಳ 437, ಪಾಲಕ್ಕಾಡ್ 436, ತಿರುವನಂತಪುರ 373, ಕೊಲ್ಲಂ 354, ಪತ್ತನಂತಿಟ್ಟು 333, ವಯನಾಡ್ 283,ಕಣ್ಣೂರು 169, ಇಡುಕ್ಕಿ 123, ಕಾಸರಗೋಡು 60 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಗುಣಮುಖರಾದವರ ವಿವರ:
ಚಿಕಿತ್ಸೆಗೆ ಒಳಗಾಗಿರುವ 5268 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 529, ಕೊಲ್ಲಂ 447, ಪತ್ತನಂತಿಟ್ಟು 204, ಆಲಪ್ಪುಳ 425, ಕೊಟ್ಟಾಯಂ 387, ಇಡುಕ್ಕಿ 160, ಎರ್ನಾಕುಳಂ 510, ತ್ರಿಶೂರ್ 570, ಪಾಲಕ್ಕಾಡ್ 285, ಮಲಪ್ಪುರಂ 611, ಕೊಝಿಕ್ಕೋಡ್ 619, ವಯನಾಡ್ 320, ಕಣ್ಣೂರು 110, ಕಾಸರಗೋಡು 91 ಎಂಬಂತೆ ಗುಣಮುಖರಾಗಿದ್ದಾರೆ.
ಇಂದು 32 ಮಂದಿ ಮೃತ್ಯು:
ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದ 32 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ತಿರುವನಂತಪುರ ಅಝಿಕ್ಕೋಡ್ ನ ಲೀಲಾ ವಿಜಯನ್ (75), ಕರಮನದ ರಂಜಿತ್ (57), ಕೊಲ್ಲಂ ಕುನ್ನಿಕೋಡ್‍ನ ಪೂಕುಂಜು (73), ಕರುನಾಗಪಳ್ಳಿಯ ಮುಹಮ್ಮದ್ ಇಕ್ಬಾಲ್ (63), ಪತ್ತನಂತಿಟ್ಟು ಅಡೂರಿನ ಯಶೋಧರನ್ (50), ಆಲಪ್ಪುಳ ಕುಮಾರನ್‍ಕಳಿಯ ರತಿಯಮ್ಮ ಶಾಜಿ(50), ಕೋಟ್ಟಯಂ ಆಯರ್ಕುನ್ನಂನ ಮೇರಿಕುಟ್ಟಿ (69), ಚಿಂಗವನಂನ ಕುನ್ಹಮ್ಮ ರಾಜು (73), ಎರ್ನಾಕುಳಂ ಚೆಲಮಟ್ಟಂನ ಜೆಸ್ಸಿ ಥಾಮಸ್ (43), ಕೂವಪ್ಪಡಿಯ ರಾಂಚಂದ್ ಶೇಖರ್ (73), ರಾಕ್ಕೋಟ್ ನ ಸಿ.ಕೆ.ಶಶಿಕುಮಾರ್(65), ಮುವಾಟ್ಟುಪುಳದ ದೇವಸ್ಯ (70), ಚೆರಾಯಿಯ ಕೃಷ್ಣಂಕುಟ್ಟಿ (75), ಕಿಳಿಕಂಬಲಂನ ಹಸನ್ ಕುಂಜು (73), ಕಲೂರಿನ ಟಿ.ಪಿ.ವಲ್ಸನ್(80), ತೃಶೂರ್ ಮುಲ್ಲಶೇರಿಯ ಜೋಸ್(56), ಕಾರ್ಯವಟ್ಟಂನ ಭಾನು (70), ಕುನ್ನಂಕುಳಂನ ಶಶಿ(66), ಪಳಯನ್ನೂರ್ ನ ಮಧುಸೂದನನ್ (60), ಪಾಲಕ್ಕಾಡ್ ಕೊಟ್ಟಾಯಿಯ ವೇಲಾಯುಧನ್ (72), ಮಲಪ್ಪುರಂ ಮಯ್ಯವಟ್ಟಂ ನ ರವೀಂದ್ರನ್ (50), ತಿರುವಾಯದ ಅಲವಿಕುಟ್ಟಿ (59), ಪುಳಿಕಲ್‍ನ ವೇಲಾಯುಧನ್ (94), ಮಂಜೇರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರಿನ ಸೆಲ್ವಂ ಸ್ವಾಮಿನಾಥನ್ (57), ವಯನಾಡ್ ಪನಮರಂನ ಇಸ್ಮಾಯಿಲ್ (63), ಎಡವಕಂ ನ ಅಂದ್ರು ಹಾಜಿ (85),ಕರ್ವಟ್ಟಂ ನ ಮಮ್ಮುಣಿ ಹಾಜಿ(89)ಕಣ್ಣೂರು ಕದಿರೂರಿನ ಆಯಿಷ(78), ಪೆರಿಞತ್ತೂರ್ ನ ಅಬ್ದುಲ್ಲ(75), ಇರಿಟ್ಟಿಯ ಮಮ್ಮಟ್ಟಿ ಹಾಜಿ(93), ಪಳ್ಳಿಕ್ಕುನ್ನಿನ ಮುಹಮ್ಮದ್ ಕುಂಞÂ(70), ಲಕ್ಷದ್ವೀಪ ಕವರಟ್ಟಿಯ ಅಬ್ದುಲ್ ಫತ್ತಾಹ್ (26) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಒಟ್ಟು ಕೋವಿಡ್ ಸಾವಿನ ಸಂಖ್ಯೆ 2,594 ಕ್ಕೆ ಏರಿಕೆಯಾಗಿದೆ.
ಸಂಪರ್ಕದ ಪ್ರಕರಣಗಳು:
ಸಂಪರ್ಕದ ಮೂಲಕ 5173 ಜನರಿಗೆ ಸೋಂಕು ತಗುಲಿತು. 646 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 737, ಕೋಝಿಕ್ಕೋಡ್ 731, ಎರ್ನಾಕುಳಂ 576, ಕೊಟ್ಟಾಯಂ 563, ತ್ರಿಶೂರ್ 520, ಆಲಪ್ಪುಳ 416, ಪಾಲಕ್ಕಾಡ್ 208, ತಿರುವನಂತಪುರ 269, ಕೊಲ್ಲಂ 347, ಪತ್ತನಂತಿಟ್ಟು 235, ವಯನಾಡ್ 277, ಕಣ್ಣೂರು 123, ಇಡುಕ್ಕಿ 114, ಕಾಸರಗೋಡು 57 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಸೋಂಕು ಪತ್ತೆಯಾದವರಲ್ಲಿ 83 ಮಂದಿ ರಾಜ್ಯದ ಹೊರನಿಂದ ಬಂದವರು.
59,690 ಮಾದರಿಗಳ ಪರೀಕ್ಷೆ:
ಕಳೆದ 24 ಗಂಟೆಗಳಲ್ಲಿ 59,690 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.9.97. ನಿಯಮಿತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ, ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 69,21,597 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,15,167 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,01,833 ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 13,334 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1426 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರೊಂದಿಗೆ, 60,029 ಜನರನ್ನು ಕೋವಿಡ್ ದೃಢಪಡಿಸಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 6,01,861 ಜನರನ್ನು ರೋಗಮುಕ್ತರಾಗಿ ಬಿಡುಗಡೆ ಮಾಡಲಾಗಿದೆ.
47 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು:
ರಾಜ್ಯದಲ್ಲಿ ಇಂದು 47 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಎರ್ನಾಕುಳಂ 12, ಕೋಝಿಕ್ಕೋಡ್ 7, ಕಣ್ಣೂರು 6, ತಿರುವನಂತಪುರ, ತ್ರಿಶೂರ್, ಪಾಲಕ್ಕಾಡ್ ತಲಾ 4, ವಯನಾಡ್ 3, ಇಡುಕ್ಕಿ 2, ಕೊಲ್ಲಂ, ಪತ್ತನಂತಿಟ್ಟು, ಕೊಟ್ಟಾಯಂ, ಮಲಪ್ಪುರಂ ಮತ್ತು ಕಾಸರಗೋಡು 1 ಎಂಬಂತೆ ಇಂದು ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಕಂಡುಬಂದಿದೆ.