HEALTH TIPS

5 ಸಾವಿರಕ್ಕೂ ಅಧಿಕ ಕೌಟುಂಬಿಕ ದೌರ್ಜನ್ಯ ದೂರು ದಾಖಲು: ಕೇಂದ್ರ

           ನವದೆಹಲಿ: ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಪ್ರಸಕ್ತ ವರ್ಷದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಳವಳಕ್ಕೆ ಕಾರಣವಾಗಿದ್ದು, ಇಲ್ಲಿಯವರೆಗೂ ದೌರ್ಜನ್ಯಕ್ಕೆ ಸಂಬಂಧಿಸಿ 5 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ.

        ಕೋವಿಡ್‌-19 ಕಾರಣದಿಂದಾಗಿ ಮಾರ್ಚ್‌ನಿಂದ ಹೇರಲಾಗಿದ್ದ ಲಾಕ್‌ಡೌನ್‌, ಮಹಿಳೆಯರು ಅನಿವಾರ್ಯವಾಗಿ ಅವರಿಗೆ ಕಿರುಕುಳ ನೀಡುವವರ ಜೊತೆ ಮನೆಯಲ್ಲಿಯೇ ಇರುವಂತೆ ಮಾಡಿದೆ. ಇದರಿಂದಾಗಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೌಟುಂಬಿಕ ದೌರ್ಜನ್ಯದ ಬಗ್ಗೆ ಹೆಚ್ಚಿನ ದೂರುಗಳು ಬಂದಿವೆ. ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಕೌಟುಂಬಿಕ ದೌರ್ಜನ್ಯದ ದೂರುಗಳು ಏರಿಕೆಯಾಗಿದ್ದು, ಜುಲೈನಲ್ಲಿ ಅತ್ಯಧಿಕ(660) ದೂರುಗಳು ದಾಖಲಾಗಿವೆ.

        'ಲಾಕ್‌ಡೌನ್‌ ಕಾರಣದಿಂದಾಗಿ ಸಂತ್ರಸ್ತರು ಸಹಾಯಕ್ಕಾಗಿ ತಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸುವುದು ಕಷ್ಟವಾಯಿತು. ಸರಣಿ ಲಾಕ್‌ಡೌನ್‌ಗಳು ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವುದಕ್ಕೂ ಅಡ್ಡಿಯಾಯಿತು' ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದರು.

'ಮಹಿಳೆಯರು ದೌರ್ಜನ್ಯ ಹಾಗೂ ಕಿರುಕುಳ ಆಗುತ್ತಿದ್ದ ಸ್ಥಳದಿಂದ ಸುರಕ್ಷಿತವಾದ ಸ್ಥಳಗಳಿಗೆ ತೆರಳಲು ಲಾಕ್‌ಡೌನ್‌ ಅಡ್ಡಿಯಾಯಿತು. ಸಂತ್ರಸ್ತೆ ತನಗಾದ ನೋವನ್ನು ಮೊದಲು ಹೇಳಿಕೊಳ್ಳುವುದು ಪಾಲಕರು ಹಾಗೂ ಕುಟುಂಬದ ಬಳಿ. ಲಾಕ್‌ಡೌನ್‌ ಕಾರಣದಿಂದಾಗಿ ಈ ಸಂಪರ್ಕವೂ ಕಡಿತವಾಗಿತ್ತು. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯಸೇವೆಗಳಡಿ ಪರಿಗಣಿಸಲಾಗಿರಲಿಲ್ಲ. ಹೀಗಾಗಿ ರಕ್ಷಣಾ ಅಧಿಕಾರಿಗಳು, ಎನ್‌ಜಿಒಗಳು ಸಂತ್ರಸ್ತೆಯನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಪೊಲೀಸರು ಕೋವಿಡ್‌-19 ನಿಯಂತ್ರಣ ಕರ್ತವ್ಯದಲ್ಲಿದ್ದರು' ಎಂದು ಅವರು ಹೇಳಿದರು.

        ಮಕ್ಕಳ ಮೇಲಿನ ಅಪರಾಧ ಕೃತ್ಯಗಳೂ ಏರಿಕೆಯಾಗುತ್ತಿರುವುದು ಸಚಿವಾಲಯದ ಕಳವಳಕ್ಕೆ ಕಾರಣವಾಗಿದ್ದು, ಮಾ.1ರಿಂದ ಸೆ.18ರವರೆಗೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಸೇರಿ 13,244 ಪ್ರಕರಣಗಳು ದಾಖಲಾಗಿವೆ ಎಂದು ಸಚಿವಾಲಯವು ಸಂಸತ್‌ಗೆ ತಿಳಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries