ನವದೆಹಲಿ:ಭಾರತದಲ್ಲಿ 6-7 ತಿಂಗಳಲ್ಲಿ 30 ಕೋಟಿ ಮಂದಿಗೆ ಕೊರೊನಾ ಲಸಿಕೆ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭರವಸೆ ನೀಡಿದ್ದಾರೆ.
ನಮ್ಮ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಕೊರೊನಾವೈರಸ್‌ನ ಜೀನೋಮ್ ಅನುಕ್ರಮ ಮತ್ತು ಪ್ರತ್ಯೇಕತೆಯ ಮೂಲಕ ಲಸಿಕೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ, ಸ್ಥಳೀಯ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಮುಂದಿನ 6-7 ತಿಂಗಳಲ್ಲಿ ನಾವು ಸುಮಾರು 30 ಕೋಟಿ ಜನರಿಗೆ ಲಸಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದೇವೆ.
ಈವರೆಗೆ ಭಾರತದಲ್ಲಿ 95 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ. ಇಡೀ ವಿಶ್ವದಲ್ಲೇ ಭಾರತವು ಕೊವಿಡ್ 19 ಚೇತರಿಕೆ ಪ್ರಮಾಣ ಅತಿ ಹೆಚ್ಚು ಅಂದರೆ ಶೇ.95.46ರಷ್ಟಿದೆ.
ಭಾರತದ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದು ಕೋಟಿಯ ಗಡಿ ದಾಟಿದೆ.
ದೇಶದಲ್ಲಿ ಮೊದಲ ಸೋಂಕು ಕಾಣಿಸಿಕೊಂಡ ಹತ್ತು ತಿಂಗಳಲ್ಲಿ ಭಾರತ ಈ ಗಡಿ ತಲುಪಿದೆ. ಕಳೆದ 24 ಗಂಟೆಗಳಲ್ಲಿ 25,153 ಹೊಸ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 10,004,599ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಶುಕ್ರವಾರ 347 ಮಂದಿ ಸೋಂಕಿತರು ವೈರಸ್‌ನಿಂದ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,45,136ಕ್ಕೆ ತಲುಪಿದೆ. ಪ್ರಯೋಗಕ್ಕೆ ಯಾರೂ ಬರ್ತಿಲ್ಲ;
ಕೊರೊನಾ ಲಸಿಕೆ ಸಿಗೋದು ತಡವಾಗುತ್ತಾ? ದೇಶದಲ್ಲಿ ಇದುವರೆಗೂ ಒಟ್ಟು ಬಿಡುಗಡೆಯಾದವರ ಸಂಖ್ಯೆ 95,50,712ಕ್ಕೆ ಏರಿಕೆಯಾಗಿದೆ. ಜತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,08,751ಕ್ಕೆ ತಗ್ಗಿದೆ.
700ಕ್ಕೂ ಅಧಿಕ ಜಿಲ್ಲೆಗಳಿರುವ ಭಾರತದಲ್ಲಿ ಅರ್ಧದಷ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಕೇವಲ 47 ಜಿಲ್ಲೆಗಳಲ್ಲಿಯೇ ವರದಿಯಾಗಿವೆ. ದೇಶದ ಬಹುಪಾಲು ಜಿಲ್ಲೆಗಳಲ್ಲಿ 5,000ಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿವೆ. ಕೇವಲ 11 ಜಿಲ್ಲೆಗಳಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈ 11 ಜಿಲ್ಲೆಗಳು ದೇಶದ ಜನಸಂಖ್ಯೆಯ ಶೇ 7.8ರಷ್ಟು ಜನಸಂಖ್ಯೆ ಇವೆ.