HEALTH TIPS

ಶಬರಿಮಲೆಯಲ್ಲಿ ಕರ್ತವ್ಯದಲ್ಲಿರುವ 61 ಪೆÇಲೀಸರಿಗೆ ಕೋವಿಡ್!- ಮುಂದಿನ ದಿನಗಳಲ್ಲಿ ಹೆಚ್ಚಳಗೊಳ್ಳುವ ಸಾಧ್ಯತೆ-ವರದಿ

                

          ಕೊಚ್ಚಿ: ಶಬರಿಮಲೆಯಲ್ಲಿ ಕರ್ತವ್ಯದಲ್ಲಿದ್ದ 61 ಪೆÇಲೀಸ್ ಅಧಿಕಾರಿಗಳಿಗೆ ಕೋವಿಡ್ ದೃಢಪಡಿಸಲಾಗಿದೆ. ತೀರ್ಥಯಾತ್ರೆ ಪ್ರಾರಂಭವಾದ ಸುಮಾರು 25 ದಿನಗಳ ನಂತರ 183 ಜನರು ಕೋವಿಡ್ ಸೋಂಕಿಗೆ ಒಳಗಾದರು. ಅವರಲ್ಲಿ ಶೇ.75 ಕರ್ತವ್ಯದಲ್ಲಿರುವ ಪೆÇಲೀಸ್ ಅಧಿಕಾರಿಗಳಾಗಿದ್ದಾರೆ. ಕೋವಿಡ್ ಇದುವರೆಗೆ 61 ಉದ್ಯೋಗಿಗಳಿಗೆ ಬಾಧಿಸಿದೆ. 

      ಮಕರವಿಳಕ್ಕುವಿನ ಹಿನ್ನೆಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಪರಾವರ್ಶೆ ನಡೆಸಿ ಡಿಸೆಂಬರ್ 9 ರಂದು ಆರೋಗ್ಯ ಇಲಾಖೆಗೆ ಸಲ್ಲಿಸಿದ ಪರಿಶೀಲನಾ ವರದಿಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಕಳೆದ ಏಳು ದಿನಗಳಲ್ಲಿ 90 ಪ್ರಕರಣಗಳು ವರದಿಯಾಗಿವೆ. ವರದಿಯು ನವೆಂಬರ್ 14 ರಿಂದ ಡಿಸೆಂಬರ್ 9 ಮಧ್ಯೆ ಉಂಟಾಗಿರುವುದನ್ನು ಗುರುತಿಸಲಾಗಿದೆ. ಇಲ್ಲಿಯವರೆಗೆ ಶಬರಿಮಲೆಯಲ್ಲಿ 16,205 ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಯಾತ್ರಿಕರು (13,632 ಮಂದಿ).

           ಆದರೆ ಕೋವಿಡ್ ಸೋಂಕು ಕೇವಲ 47 ಯಾತ್ರಾರ್ಥಿಗಳಿಗೆ ಮಾತ್ರ ಧನಾತ್ಮಕ ವರದಿಯಾಗಿದೆ. ಇದೇ ವೇಳೆ ಪರೀಕ್ಷಿಸಿದ 2,573 ಉದ್ಯೋಗಿಗಳಲ್ಲಿ 136 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಕಂಡುಬಂದಿದೆ. ಪರೀಕ್ಷಾ ಸಕಾರಾತ್ಮಕತೆ ದರ (ಟಿಪಿಆರ್) 5.3 ಶೇ.ದಷ್ಟಿದೆ. ಕೋವಿಡ್ ಡಿಸೆಂಬರ್‍ನಲ್ಲಿ ನಿಯಮಿತ ಹೆಚ್ಚಳವನ್ನು ತೋರಿಸುತ್ತಿದ್ದು ವಿಶೇಷವಾಗಿ ಉದ್ಯೋಗಿಗಳಲ್ಲಿ ಸೋಂಕು ಕಂಡುಬರುತ್ತಿದೆ.

          ಕೋವಿಡ್ ಪೀಡಿತ ಪೆÇಲೀಸ್ ಸಿಬ್ಬಂದಿಗಳಲ್ಲಿ 47 ಮಂದಿ ಪಂಪಾದಲ್ಲಿ, 11 ಮಂದಿ ಸನ್ನಿಧಾನಂ ಮತ್ತು ಮೂವರನ್ನು ನೀಲಕ್ಕಲ್‍ನಲ್ಲಿ ಇರಿಸಲಾಗಿದೆ. ಕೋವಿಡ್ 58 ದೇವಸ್ವಂ ಸಿಬ್ಬಂದಿಗಳಲ್ಲೂ ಕಂಡುಬಂದಿದೆ. ನೀಲಕ್ಕಲ್ -1, ಪಂಪಾ -8 ಮತ್ತು ಸನ್ನಿಧಾನಂ -49 ಮಂದಿ ಸಿಬ್ಬಂದಿಗಳಲ್ಲಿ ಕಂಡುಬಂದಿದೆ. ಒಬ್ಬ ಆರೋಗ್ಯ ಅಧಿಕಾರಿ ಮಾತ್ರ ಈವರೆಗೆ ಸೋಂಕನ್ನು ದೃಢಪಟ್ಟಿದೆ.

        ಈ ಎಲ್ಲ ಸನ್ನಿವೇಶಗಳನ್ನು ಗಮನಿಸಿದರೆ, ಶಬರಿಮಲೆಯ ಭೂಪ್ರದೇಶವನ್ನು ಪರಿಗಣಿಸಿ ಪ್ರಸ್ತುತ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಮುಂದಿನ ದಿನಗಳಲ್ಲಿ ಪ್ರಕರಣಗಳಲ್ಲಿ ಭಾರಿ ಏರಿಕೆ ನಿರೀಕ್ಷಿಸಲಾಗಿದೆ ಎಂದು ವರದಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries