ತಿರುವನಂತಪುರ:ಕೇರಳದಲ್ಲಿ ಇಂದು 6293 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಎರ್ನಾಕುಳಂ 826, ಕೋಝಿಕೋಡ್ 777, ಮಲಪ್ಪುರಂ 657, ತ್ರಿಶೂರ್ 656, ಕೊಟ್ಟಾಯಂ 578, ಆಲಪ್ಪುಳ 465, ಕೊಲ್ಲಂ 409, ಪಾಲಕ್ಕಾಡ್ 390, ಪತ್ತನಂತಿಟ್ಟು 375, ತಿರುವನಂತಪುರ 363, ಕಣ್ಣೂರು 268, ವಯನಾಡ್ 239, ಇಡುಕ್ಕಿ 171, ಕಾಸರಗೋಡು 119 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 59,995 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.10.49 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎನ್ಎಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 72,93,518 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದ 29 ಮಂದಿ ಸಾವನ್ನಪ್ಪಿದ್ದಾರೆ. ತಿರುವನಂತಪುರ ಕಿಲಿಮಾನೂರು ನ ಅಶ್ರಫ್ (62), ವರ್ಕಲಾ ಮೂಲದ ಅಬ್ದುಲ್ ಮಜೀದ್ (80), ವೆಂಬಾಯಂನ ಲೀಲಾ (65), ಕಾಟ್ಟಕಡದ ಸ್ಮಿತಮ್ಮ (75) , ಕೊಲ್ಲಂನ ಮದನ್ನಡದ ಎ.ಕೆ.ಸುಮತಿ(88), ಪತ್ತನಂತಿಟ್ಟು ಕೊನ್ನಿಯ ಚೆಲ್ಲಪ್ಪನ್ ಆಚಾರಿ (86), ಕೋಟಂಕುಲಂಗಾರದ ರಶೀದಾ ಬೀವಿ (59), ಆಲಪ್ಪುಳಚೆಂಗನ್ನೂರಿನ ರವಿ (64), ಚೆರ್ತಾಲಾದ ರಾಜಮ್ಮ (82), ಪಂಕಜಾಕ್ಷಿ ಅಮ್ಮ (90) ,ತಲವಾಡಿಯ ಥೋಮಸ್ದಂ ಡೇನಿಯಲ್ (90),ಮುಳ್ಳಂಕಳದ ಗಂಗಾಧರನ್ ನಾಯರ್(73),ಕೋಟ್ಟಯಂ ಎಟ್ಟಮಾವೂರ್ ನ ಲ್ಯೆಲಾಮ್ಮ(41), ಆನಿಕ್ಕೋಡ್ನ ರಾಮಚಂದ್ರನ್ ನಾಯರ್(70),ಎರ್ನಾಕುಳಂ ನೆರಿಯ ಮಂಗಲದ ಬಾಲಕ್ರಷ್ಣನ್ (80),ಮುಳಲಂಗಾಡಿಯ ವಿ.ಅರ್. ಜೋಶಿ (55); ಕೋಝಿಕೋಡ್ ಕಲಾ ಕಾಲೇಜಿನ ಅಮಿನಾಬಿ (75), ವಡಕರ ಮೂಲದ ಬಾಲನ್ (80), ವಯನಾಡದ ಪೂತಡಿಯ ಕೆ.ಪಿ. ವಾಸುದೇವನ್(70)ಕಣ್ಣೂರಿನ ತಲಶೇರಿಯ ಅಬೂಬ್ಯಾಕರ್ (65), ಪನೂರ್ ಮೂಲದ ಶಮೀಮ್ (35) ಚೆಲೇರಿಯ ಸಿ.ವಿ ಇಬ್ರಾಹಿಂ(75),ಅಳಿಕ್ಕೋಡ್ ನ ಸಾಯಿರಾ (60) ಎಂಬವರು ಕೋವಿಡ್ ಬಾಧಿಸಿ ಮ್ರತಪಟ್ಟವರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 2,786 ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 73 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 5578 ಜನರಿಗೆ ಸೋಂಕು ತಗುಲಿತು. 593 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಲಂ 644, ಕೋಝಿಕ್ಕೋಡ್ 753, ಮಲಪ್ಪುರಂ 616, ತ್ರಿಶೂರ್ 640, ಕೊಟ್ಟಾಯಂ 560, ಆಲಪ್ಪುಳ 447, ಕೊಲ್ಲಂ 400, ಪಾಲಕ್ಕಾಡ್ 208, ಪತ್ತನಂತಿಟ್ಟು 289, ತಿರುವನಂತಪುರ 291, ಕಣ್ಣೂರು 218, ವಯನಾಡ್ 237, ಇಡುಕ್ಕಿ 164, ಕಾಸರಗೋಡು 111 ಎಂಬಂತೆಚ ಸಂಪರ್ಕದಿಂದ ಸೋಂಕು ಬಾಧಿಸಿದವರಾಗಿದ್ದಾರೆ.
49 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ. ಎರ್ನಾಕುಳಂ 9, ಕಣ್ಣೂರು 8, ತ್ರಿಶೂರ್ 7, ಕೋಝಿಕ್ಕೋಡ್ 5, ತಿರುವನಂತಪುರ 4, ಕೊಲ್ಲಂ, ಪತ್ತನಂತಿಟ್ಟು, ಕಾಸರಗೋಡು ತಲಾ 3, ಪಾಲಕ್ಕಾಡ್, ವಯನಾಡ್ ತಲಾ 2, ಆಲಪ್ಪುಳ, ಕೊಟ್ಟಾಯಂ ಮತ್ತು ಮಲಪ್ಪುರಂ ತಲಾ 1 ತಲಾ ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4749 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 315, ಕೊಲ್ಲಂ 309, ಪತ್ತನಂತಿಟ್ಟು 185, ಆಲಪ್ಪುಳ 262, ಕೊಟ್ಟಾಯಂ 462, ಇಡುಕಿ 93, ಎರ್ನಾಕುಳಂ 606, ತ್ರಿಶೂರ್ 442, ಪಾಲಕ್ಕಾಡ್ 238, ಮಲಪ್ಪುರಂ 664, ಕೊಝಿಕ್ಕೋಡ್ 618, ವಯನಾಡ್ 157, ಕಣ್ಣೂರು 330, ಕಾಸರಗೋಡು 68 ಎಂಬಂತೆ ಪರೀಕ್ಷೆಗಳು ನೆಗೆಟಿವ್ ಆಗಿದೆ. ಇದರೊಂದಿಗೆ 60,396 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 6,36,814 ಜನರನ್ನು ಕೋವಿಡ್ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,89,910 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,76,377 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 13,533 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1474 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 4 ಹೊಸ ಹಾಟ್ಸ್ಪಾಟ್ಗಳಿವೆ. ಕೊಲ್ಲಂ ಜಿಲ್ಲೆಯ ಶೂರನಾಡ್ ನಾರ್ತ್ (ಕಂಟೋನ್ಮೆಂಟ್ ವಲಯ ವಾರ್ಡ್ 18), ಕೊಟ್ಟಾಯಂ ಜಿಲ್ಲೆಯ ವೆಲಿಯನ್ನೂರ್ (4), ಕಲ್ಲಾರ (9) ಮತ್ತು ಕೊಟ್ಟಾಯಂ ಜಿಲ್ಲೆಯ ಕೊಳಿವನಾಲ್ (1) ಹೊಸ ಹಾಟ್ಸ್ಪಾಟ್ಗಳಾಗಿವೆ.