HEALTH TIPS

ತೀವ್ರ ಕಳವಳದಲ್ಲಿ ರಾಜ್ಯ-ಮತ್ತೆ-ಮತ್ತೆ ಏರಿಳಿತ- ಇಂದು 6316 ಮಂದಿಗೆ ಸೋಂಕು

        ತಿರುವನಂತಪುರ: ಕೇರಳದಲ್ಲಿ ಇಂದು 6316 ಜನರಿಗೆ ಕೋವಿಡ್ ಖಚಿತವಾಗಿದೆ. ಕೋವಿಡ್ ಪರಿಶೀಲನಾ ಸಭೆಯ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಕೋವಿಡ್ ಮಾಹಿತಿಗಳನ್ನು ನೀಡಿ ಮಾತನಾಡಿದರು. 

       ಇಂದು 5924 ಜನರನ್ನು ಗುಣಪಡಿಸಲಾಗಿದೆ. 5539 ಜನರಿಗೆ ಸಂಪರ್ಕದ ಮೂಲಕ ಸೋಂಕು ಪತ್ತೆಯಾಗಿದೆ. ಈ ಪೈಕಿ 634 ಪ್ರಕರಣ ಮೂಲ ಸ್ಪಷ್ಟವಾಗಿಲ್ಲ. 45 ಮಂದಿ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಬಾಧಿಸಿದೆ.  ಕಳೆದ 24 ಗಂಟೆಗಳಲ್ಲಿ 56993 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಸಿಎಂ ಹೇಳಿದರು.

        ಜಿಲ್ಲಾವಾರು ವಿವರ:

      ಮಲಪ್ಪುರಂ 822, ಕೋಝಿಕ್ಕೋಡ್ 734, ಎರ್ನಾಕುಳಂ 732, ತ್ರಿಶೂರ್ 655, ಕೊಟ್ಟಾಯಂ 537, ತಿರುವನಂತಪುರ 523, ಆಲಪ್ಪುಳ 437, ಪಾಲಕ್ಕಾಡ್ 427, ಕೊಲ್ಲಂ 366, ಪತ್ತನಂತಿಟ್ಟು 299, ವಯನಾಡ್ 275, ಕಣ್ಣೂರು 201, ಇಡುಕ್ಕಿ 200, ಕಾಸರಗೋಡು 108 ಎಂಬಂತೆ ಸೋಂಕು ಬಾಧಿಸಿದೆ. 

       ಕಳೆದ 24 ಗಂಟೆಗಳಲ್ಲಿ 56,993 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 11.08.ಶೇ.ರಷ್ಟಿದೆ. ನಿಯಮಿತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್ ಎ ಎಂ ವಿ  ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 63,78,278 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

     ಇಂದು ಕೋವಿಡ್ ಬಾಧಿಸಿ 28 ಮಂದಿ ಮೃತಪಟ್ಟಿದ್ದಾರೆ. ತಿರುವನಂತಪುರ ಕುಡಪ್ಪನಕುನ್ನಿನ ಸುಮತಿ (65), ಪುಲ್ಕುಲಂಗರ ಗಣೇಶ ಪಿಳ್ಳೈ (82), ಶ್ರೀಕಾಯರ್ಂನ ತುಳಸೀಧರನ್ ನಾಯರ್ (57), ತಿರುವನಂತಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನೈ ನಿವಾಸಿ ಪ್ರೇಮಾ (60),ಕೊಲ್ಲಂ ತೇವಳ್ಳಿಯ  ಲೀಲಾ ಭಾಯಿ (58) ಆಲಪ್ಪುಳದ ರೇಡುಮುಕ್ಕು ನಿವಾಸಿ ತ್ರಿಲೋಕ್(64), ಮುಳ್ಳತ್ತುವಳಪ್ಪಿನ ಕಾಸಿಮ್ (85), ಕೋಟ್ಟಯಂ ಚಂಗನಸ್ಸೆರಿಯ ಥಾಮಸ್ ಚಾಕೊ (93),  ವೈಕ್ಕಂ ನ ಗೋಪಾಲಕೃಷ್ಣನ್ (56), ಆದಿಚ್ಚಾರಂ ನ ಶಾಹಿದಾ (58), ಎರ್ನಾಕುಳಂ ಕೊಚ್ಚಿಯ ಮೇರಿ ಪೈಲ್ (81), ಪಚ್ಚಲಂ ನ  ಟಿ.ಸುಬ್ರಮಣಿಯನ್ (68), ಮಟ್ಟಂಚೇರಿಯ ಮೊಹಮ್ಮದ್ (90), ತೊಪ್ಪಂಪಡಿಯ ಮೇರಿ ಅಸೆಂಪೆಟ್ (72), ಆಲಪಾರಾದ ಪಪ್ಪಚ್ಚನ್ (86), ಫೆÇೀರ್ಟ್ ಕೊಚ್ಚಿಯ ಹವಾಬಿ (72), ಅಲುವಾದ ಅಬ್ದುಲ್ ಹಮೀದ್ (75), ತೃಶೂರ್ ಪುಟ್ಟೂರಿನ ಲೀಲಾ (57)ಮಲಪ್ಪುರಂ ತಿರೂರ್ ನ ಹಂಸ(70), ಕೋಝಿಕ್ಕೋಡ್ ಪುದಿಯಂಗಾಡಿಯ ತಫೀಸ್(66), ವೆಂಗರದ ಉಣ್ಣಿಮ(70), ನಾಂದಿಯ ಅಬ್ದುಲ್ ರಹಮಾನ್(65), ಮುಕ್ಕಂ ನ ಶ್ರೀಧರನ್(75), ವೆಳ್ಳಪರಂಬಿನ ಕುಂಞ್ತುತ್ತು(76), ಮುಕ್ಕಂ ನ ಮೂಸಾ(75), ರಾಮಂತಳಿಯ ರಾಮಕೃಷ್ಣನ್ ನಾಯರ್(87), ತಾಳಂ ನ ರಮೇಶ್ ಕುಮಾರ್ (49), ಕಣ್ಣೂರು ಮಟ್ಟಣ್ಣೂರಿನ ಅಹ್ಮದ್ ಕುಟ್ಟಿ (88) ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ರಾಜ್ಯಾದ್ಯಂತ ಈವರೆಗೆ ಒಟ್ಟು 2298 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. 

      ಇಂದು, ಸೋಂಕು ಪತ್ತೆಯಾದವರಲ್ಲಿ 98 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 5539 ಜನರಿಗೆ ಸೋಂಕು ತಗುಲಿದೆ. 634 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 764, ಕೋಝಿಕ್ಕೋಡ್  688, ಎರ್ನಾಕುಳಂ 585, ತ್ರಿಶೂರ್ 637, ಕೊಟ್ಟಾಯಂ 537, ತಿರುವನಂತಪುರ 371, ಆಲಪ್ಪುಳ 430, ಪಾಲಕ್ಕಾಡ್ 269, ಕೊಲ್ಲಂ 358, ಪತ್ತನಂತಿಟ್ಟು 220, ವಯನಾಡ್ 261, ಕಣ್ಣೂರು 165, ಇಡುಕ್ಕಿ 152, ಕಾಸರಗೋಡು 102 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. 

       ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,09,280 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,94,018 ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 15,262 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1716 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

        ಇಂದು 4 ಹೊಸ ಹಾಟ್‍ಸ್ಪಾಟ್‍ಗಳಿವೆ. ಹೊಸ ಹಾಟ್‍ಸ್ಪಾಟ್‍ಗಳೆಂದರೆ ವಯನಾಡ್ ಜಿಲ್ಲೆಯ ತಿರುವನಂತಪುರಂ ಜಿಲ್ಲೆಯ ನೂಲ್‍ಪುಳ(ಕಂಟೋನ್ಮೆಂಟ್ ವಲಯ ವಾರ್ಡ್ 5, 6, 16 (ಸಬ್ ವಾರ್ಡ್), ಕಾನಿಯಂಪತ್ತ (ಸಬ್ ವಾರ್ಡ್ 4), ಪುಲಿಮಟ್ (18, 19) ಮತ್ತು ಎಲಂಗನ್ (14). 26 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ ಒಟ್ಟು 479 ಹಾಟ್‍ಸ್ಪಾಟ್‍ಗಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries