ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ 67 ಸಮಸ್ಯಾತ್ಮಕ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಏರ್ಪಡಿಸಲಾಗುವುದು.
ರಾಜ್ಯ ಪೆÇಲೀಸ್ ಮುಖ್ಯಸ್ಥ ಅವರ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಚುನಾವಣೆ ಆಯೋಗ ಜಿಲ್ಲೆಯ 99 ಪೆÇೀಲಿಂಗ್ ಬೂತ್ ಗಳನ್ನು ಸಮಸ್ಯಾತ್ಮಕ ಮತಗಟ್ಟೆಗಳ ಪಟ್ಟಿಯಲ್ಲಿ ಸೇರಿಸಿದೆ. ಇವುಗಳಲ್ಲಿ 32 ಮತಗಟ್ಟೆಗಳಲ್ಲಿ ನೆಟ್ ವರ್ಕ್ ಸೌಲಭ್ಯ ಇಲ್ಲದೇ ಇರುವ ಹಿನ್ನೆಲೆಯಲ್ಲಿ ವೀಡಿಯೋಗ್ರಫಿ ವ್ಯವಸ್ಥೆ ಏರ್ಪಡಿಸಲಾಗುವುದು.
ವೆಬ್ ಕಾಸ್ಟಿಂಗ್ ಸೌಲಭ್ಯ ಏರ್ಪಡಿಸುವ 67 ಮತಗಟ್ಟೆಗಳಿಂದ ಮತದಾನ ಪ್ರಕ್ರಿಯೆಯ ನೇರಪ್ರಸಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಜ್ಜುಗೊಳಿಸುವ ಚುನಾವಣೆ ನಿಯಂತ್ರಣ ಕೊಠಡಿಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ವೀಕ್ಷಣೆ ನಡೆಸಲಾಗುವುದು.
ಈ 99 ಸಮಸ್ಯಾತ್ಮಕ ಮತಗಟ್ಟೆಗಳಲ್ಲಿ 84 ಬೂತ್ ಗಳು ಕ್ರಿಟಿಕಲ್ ವಿಭಾಗದಲ್ಲಿ ಮತ್ತು 8 ಮತಗಟ್ಟೆಗಳು ವಲ್ನರಬಲ್ ವಿಭಾಗದಲ್ಲಿ, ಉಳಿದ 8 ಬೂತ್ ಗಳು ಗಡಿವಲಯದ ಅತಿ ತೀವ್ರ ಜಾಗ್ರತೆ ಅಗತ್ಯವಿರುವ ಮತಗಟ್ಟೆಗಳಾಗಿವೆ.
ಇವಲ್ಲದೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅವರ ಜಂಟಿ ತನಿಖೆಯಲ್ಲಿ ಪತ್ತೆ ಮಾಡಲಾದ 23 ಸಮಸ್ಯಾತ್ಮಕ ಬೂತ್ ಗಳಲ್ಲಿ ಮತ್ತು ಅಭ್ಯರ್ಥಿಗಳ ವೆಚ್ಚದಲ್ಲಿ ಅಗತ್ಯವಿರುವ 134 ಬೂತ್ ಗಳಲ್ಲಿ ವೀಡಿಯೋಗ್ರಫಿ ಏರ್ಪಡಿಸಲಾಗುವುದು.