ಬದಿಯಡ್ಕ: ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‍ನ ಮಹಾಸಭೆಯು ಬ್ಯಾಂಕ್‍ನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಬ್ಯಾಂಕ್‍ನ ಸರ್ವತೋಮುಖ ಅಭಿವೃದ್ಧಿಗೆ ಬ್ಯಾಂಕ್‍ನ ಸದಸ್ಯರೇ ಕಾರಣರು, ಸದಸ್ಯರ ಅಗತ್ಯಗಳಿಗಾಗಿ ವಿವಿಧ ರೀತಿಯ ಸಾಲಗಳನ್ನು ನೀಡುತ್ತಿದ್ದೇವೆ. ಸಾಲವನ್ನು ಕ್ಲಪ್ತ ಸಮಯಕ್ಕೆ ಮರುಪಾವತಿ ಮಾಡಿಕೊಂಡರೆ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿಗೆ ಕಾರಣವಾಗಬಹುದು. ಪ್ರಸಕ್ತ ವರ್ಷದಲ್ಲಿ ಬ್ಯಾಂಕ್ 8.19ಲಕ್ಷ ರೂ. ಲಾಭವನ್ನು ಗಳಿಸಿದೆ. ಅದರಂತೆ ಶೇ.6ರಷ್ಟು ಲಾಭಾಂಶವನ್ನು ಬ್ಯಾಂಕ್‍ನ ಎ ಮತ್ತು ಬಿ ಕ್ಲಾಸ್ ಸದಸ್ಯರಿಗೆ ವಿತರಿಸಲಾಗುವುದು.
ಮಹಾಸಭೆಯಲ್ಲಿ ಬ್ಯಾಂಕ್ ಕಾರ್ಯದರ್ಶಿ ಮಾಧವ ಶರ್ಮಾ ಕೆ. 2019-20ನೇ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು. ಸಹ ಕಾರ್ಯದರ್ಶಿ ಲೋಕೇಶ್ ರೈ 2019-20ನೇ ವರ್ಷದ ಆಯ-ವ್ಯಯ ಮಂಡಿಸಿದರು. 2019-20ನೇ ವರ್ಷದ ಬಜೆಟ್‍ಗಿಂತ ಅಧಿಕ ಖರ್ಚಿನ ಅಂಗೀಕಾರ, 2021-22ನೇ ವರ್ಷದ ಬಜೆಟ್‍ನ ಅಂಗೀಕರಾ ಹಾಗೂ 2019-20ನೇ ವರ್ಷದ ಆಡಿಟ್ ರಿಪೆÇೀರ್ಟ್ ಅಂಗೀಕರಿಸಲಾಯಿತು. ಬ್ಯಾಂಕ್‍ನ ನಿರ್ದೇಶಕ ಎಂ.ರಾಮಕೃಷ್ಣ ಭಟ್, ಕೃಷ್ಣಮೂರ್ತಿ ಎ, ಎಂ.ಜಯಪ್ರಕಾಶ್ ಶೆಟ್ಟಿ, ಬಿ.ಕೊರಗಪ್ಪ, ಹರಿಪ್ರಸಾದ್, ಲತಾ ಕುಣಿಕುಳ್ಳಾಯ ಮತ್ತು ಶಾಂತಾ ಕುಮಾರಿ ಉಪಸ್ಥಿತರಿದ್ದರು. ಬ್ಯಾಂಕ್‍ನ ಉಪಾಧ್ಯಕ್ಷ ಎಂ. ಶ್ರೀಧರ ಭಟ್ ಸ್ವಾಗತಿಸಿ, ನಿರ್ದೇಶಕ ಎಂ. ಸುಧಾಮ ಗೋಸಾಡ ವಂದಿಸಿದರು.