ಕೋಝಿಕ್ಕೋಡ್: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಿನ್ನೆ ನಡೆದ ಮೂರನೇ ಹಂತದ ಚುನಾವಣೆಯಲ್ಲಿ ಭಾರಿ ಮತದಾನವಾಗಿರುವುದಾಗಿ ಚುನಾವಣಾ ಆಯೋಗದ ಮೂಲಗಳಿಂದ ತಿಳಿದುಬಂದಿದೆ. ಅನಧಿಕೃತ ಮಾಹಿತಿಯ ಪ್ರಕಾರ, ಸುಮಾರು 78 ಪ್ರತಿಶತದಷ್ಟು ಮತದಾರರು ಮತ ಚಲಾಯಿಸಿದ್ದಾರೆ. ಅಧಿಕೃತ ಅಂಕಿ ಅಂಶಗಳಲ್ಲಿ ಸ್ವಲ್ಪ ಬದಲಾವಣೆ ಇರಬಹುದು. ಇದರೊಂದಿಗೆ ರಾಜ್ಯದಲ್ಲಿ ಶೇಕಡಾ 75 ರಷ್ಟು ಮತದಾನ ಮೂರು ಹಂತಗಳಲ್ಲಿ ದಾಖಲಾಗಿದೆ.
ಮೂರನೇ ಹಂತದ ಕೊನೆಯ ಅರ್ಧ ಘಂಟೆಯಲ್ಲಿ, ಕೋವಿಡ್ ರೋಗಿಗಳು ಹೆಚ್ಚಿನ ಬೂತ್‍ಗಳಿಗೆ ಭೇಟಿ ನೀಡಿ ತಮ್ಮ ಮತಗಳನ್ನು ಚಲಾಯಿಸಿ ಮರಳಿದರು. ಕೊನೆಯ ನಿಮಿಷಗಳಲ್ಲಿ, ಜನರು ಮತ ಚಲಾಯಿಸಲು ಸರತಿಯಲ್ಲಿ ಉತ್ಸುಕರಾಗಿ ಕಾಯುತ್ತಿರುವ ದೃಶ್ಯಗಳು ಕಂಡುಬಂದಿದೆ.
ಕಾಸರಗೋಡು ಶೇ 75.62, ಕಣ್ಣೂರು ಶೇ 76.83, ಕೋಝಿಕ್ಕೋಡ್ ಶೇ 77.32 ಮತ್ತು ಮಲಪ್ಪುರಂ ಶೇ 77.59 ರಷ್ಟು ಮತದಾನವಾಗಿದೆ. ಆಂತೂರ್ ನಗರಸಭೆಯನ್ನೂ ಒಳಗೊಂಡಂತೆ ಕೊನೆಯ ಗಂಟೆಗಳಲ್ಲಿ ದಾಖಲೆಯ ಮತದಾನ ದಾಖಲಾಗಿದೆ. ಅತ್ಯಂತ ಸಮಸ್ಯಾತ್ಮಕ ಬೂತ್‍ಗಳನ್ನು ಹೊಂದಿರುವ ಕಣ್ಣೂರಿನಲ್ಲಿ ಭಾರೀ ಭದ್ರತೆಯಡಿಯಲ್ಲಿ ಮತದಾನ ನಡೆಯಿತು.
ಹಲವಾರು ಸ್ಥಳಗಳಲ್ಲಿ ಒಂದಷ್ಟು ಸಂಘರ್ಷಗಳೂ ವರದಿಯಾಗಿದೆ. ನಾದಪುರಂ ತೆರುವಂಪರಂಬಿಲ್‍ನಲ್ಲಿ ಘರ್ಷಣೆ ನಡೆಯಿತು. ಪೆÇಲೀಸರು ಗ್ರೆನೇಡ್‍ಗಳನ್ನು ಪ್ರಯೋಗಿಸಿ ನಿಯಂತ್ರಿಸಿದರು. ಗುಂಪುಗೂಡಿ ಜಗಳಗೈಯ್ಯುತ್ತಿದ್ದ ಜನರನ್ನು ಎಬ್ಬಿಸುವ ವೇಳೆ ಘರ್ಷಣೆಗಳು ಭುಗಿಲೆದ್ದವು. ಪೋಲೀಸರು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ.
ಕಣ್ಣೂರಿನಲ್ಲಿ ಮತದಾನದ ನಂತರ ಎಲ್‍ಡಿಎಫ್ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಎಡಪಂಥೀಯರ ವಿರುದ್ದ ವ್ಯಾಪಕ ದೂರುಗಳು, ರಾಜಕೀಯ ಕೀಳು ದುರಾಡಳಿತದ ವಿರುದ್ಧ ಜನರು ತೀರ್ಪು ಬರೆಯುತ್ತಾರೆ ಮತ್ತು ಯುಡಿಎಫ್ ದಾಖಲೆಯ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದ್ದಾರೆ.
ಎಡ ಮತ್ತು ಬಲ ರಂಗಗಳೆರಡೂ ಶೇ.ವಾರು ಮತಗಳ ಏರಿಕೆಯು ತಮ್ಮ ಪಕ್ಷದ ಬಲದಿಂದ ಎಂದು ಆಶಿಸುತ್ತಿವೆ. ಎನ್‍ಡಿಎ ಕೂಡ ಉತ್ತಮ ಹೋರಾಟ ನಡೆಸಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ನಾಳೆ ನಡೆಯಲಿರುವ ಮತ ಎಣಿಕೆಗಾಗಿ ರಾಜ್ಯ ತುದಿಗಾಲಲ್ಲಿ ಕಾಯುತ್ತಿದೆ.