ಕಾಸರಗೋಡು: ಸ್ಥಳೀಯ ಸಂಸ್ಥೆಗಳ ಮೂರನೇ ಹಂತದ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ 77.14 ರಷ್ಟು ಮತದಾನ ದಾಖಲಾತಿದೆ. ಜಿಲ್ಲೆಯ ಒಟ್ಟು 1048645 ಮತದಾರರಲ್ಲಿ 808909 ಮಂದಿ ಮತ ಚಲಾಯಿಸಿರುವರು. ಇದರಲ್ಲಿ 379480 ಮಂದಿ ಪುರುಷರು, 429427 ಮಂದಿ ಮಹಿಳೆಯರು ಮತ್ತು ಇಬ್ಬರು ವಿಶೇಷ ಲಿಂಗಿಗಳು ಸೇರಿದ್ದಾರೆ.
ನಗರಸಭೆಗಳಲ್ಲಿ ನೀಲೇಶ್ವರ ಅತಿ ಹೆಚ್ಚು ಮತದಾನ ದಾಖಲಾಗಿದ್ದು ಶೇ.80.38 ರಷ್ಟು ದಾಖಲಾಗಿದೆ. ಕಾಸರಗೋಡು ನಗರಸಭೆಯಲ್ಲಿ ಅತಿ ಕಡಿಮೆ (ಶೇ.70.3),
ಬ್ಲಾಕ್ ಪಂಚಾಯಿತಿಗಳಲ್ಲಿ ನೀಲೇಶ್ವರ ಬ್ಲಾಕ್ ಅತಿ ಹೆಚ್ಚು ಮತದಾನವನ್ನು ದಾಖಲಿಸಿದೆ (ಶೇ.82.07). ಕಡಿಮೆ ಕಾಸರಗೋಡು ಬ್ಲಾಕ್‍ನಲ್ಲಿದೆ (ಶೇ.72.86).
ಕೋವಿಡ್ ಕಳವಳದ ಮಧ್ಯೆ ಜಿಲ್ಲೆಯಲ್ಲಿ ಮತದಾನ ಶಾಂತಿಯುತವಾಗಿ ಮತ್ತು ಸರಾಗವಾಗಿ ಕೊನೆಗೊಂಡಿತು. ಬೆಳಿಗ್ಗೆ 6 ಗಂಟೆಗೆ ನಡೆದ ಅಣಕು ಮತದಾನದ ಬಳಿಕ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು. ಕೆಲವು ಸ್ಥಳಗಳಲ್ಲಿ ಮತದಾನ ಯಂತ್ರಗಳು ದೋಷಪೂರಿತವಾಗಿದ್ದರೂ ಶೀಘ್ರದಲ್ಲೇ ದುರಸ್ತಿಗೊಂಡು ಮತದಾನ ಪುನರಾರಂಭವಾಯಿತು. ವೆಬ್‍ಕಾಸ್ಟಿಂಗ್ ಸ್ಥಾಪಿಸಲಾದ ಅತಿ ಸೂಕ್ಷ್ಮ ಬೂತ್ ಗಳಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ನಗರಸಭೆ ಮಟ್ಟದಲ್ಲಿ ಮತದಾನ ವಿವರ:
ಕಾಞಂಗಾಡ್ - 78.43%
ಕಾಸರಗೋಡು - 70.3%
ನಿಲೇಶ್ವರ - 80.38%
ಮತದಾನ ಬ್ಲಾಕ್ ಪಂಚಾಯಿತಿಗಳು:
ಕಾರಡ್ಕ - 81.18%
ಮಂಜೇಶ್ವರ - 73.39%
ಕಾಸರಗೋಡು - 72.86%
ಕಾಞಂಗಾಡ್ -77.29%
ಪರಪ್ಪ- 80.74%
ನಿಲೇಶ್ವರಂ - 82.07%
ಪಂಚಾಯತ್ ಮಟ್ಟದಲ್ಲಿ ಮತದಾನ:
ಉದುಮ: 73.94
ಪಳ್ಳಿಕ್ಕೆರೆ: 72.6
ಅಜಾನೂರು: 76.55
ಪುಲ್ಲೂರ್-ಪೆರಿಯಾ: 82.23
ಮಡಿಕೈ: 87.43
ಕುಂಬ್ಡಾಜೆ: 76.15
ಬೆಳ್ಳೂರು: 85.86
ಕಾರಡ್ಕ: 80.3
ಮುಳಿಯಾರ್: 77.67
ದೇಲಂಪಾಡಿ: 80.06
ಬೇಡಡ್ಕ: 82.18
ಕುತ್ತಿಕ್ಕೋಲ್: 86.51
ಕೈಯೂರ್-ಚೀಮೆನಿ: 86.16
ಚೆರ್ವತ್ತೂರು: 81.53
ವಲಿಯಪರಂಬ: 85.45
ಪಡನ್ನ: 80.31
ಪಿಲಿಕೋಡ್: 88.25
ತ್ರಿಕ್ಕರಿಪುರ: 75.68
ಕೊಡೋಂ-ಬೆಳ್ಳೂರು: 78.07
ಕಳ್ಳಾರ್: 80.48
ಪನತ್ತಡಿ: 82.21
ಬಳಾಲ್: 79.01
ಕಿನಾನೂರ್-ಕೆರಿಂದಳ: 84.42
ವೆಸ್ಟ್ ಎಳೇರಿ: 81.58
ಈಸ್ಟ್ ಎಳೇರಿ: 79.87
ಮಂಜೇಶ್ವರ: 69.15
ವರ್ಕಾಡಿ: 76.36
ಮೀಂಜ: 77.29
ಮಂಗಲ್ಪಾಡಿ: 67.24
ಪೈವಳಿಕೆ: 76.54
ಪುತ್ತಿಗೆ: 76.65
ಎಣ್ಮಕಜೆ: 75.94
ಕುಂಬಳೆ: 70.69
ಬದಿಯಡ್ಕ: 71.91
ಮೊಗ್ರಾಲ್-ಪುತ್ತೂರು: 74.74
ಮಧೂರು: 72.01
ಚೆಮ್ಮನಾಡ್: 74.15
ಚೆಂಗಳ: 73.91