ತಿರುವನಂತಪುರ: ಮುಂದಿನ ಮೇ ತಿಂಗಳಲ್ಲಿ ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲರಿಗೆ ಅಂಚೆ ಮತದಾನವನ್ನು ಪರಿಚಯಿಸಲಾಗುವುದು. ಇದಕ್ಕಾಗಿ ಜನಗಣತಿ ಸೇರಿದಂತೆ ಕಾರ್ಯಚಟುವಟಿಕೆಗಳು ಆರಂಭಿಸಲಾಗಿದೆ ಎಂದು ಕೇರಳ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಟೀಕರಾಮ್ ಮೀನಾ ಗುರುವಾರ ತಿಳಿಸಿದ್ದಾರೆ.
ಮತಗಟ್ಟೆಗೆ ನೇರವಾಗಿ ಬಂದು ಮತ ಚಲಾಯಿಸಲು ಸಾಧ್ಯವಾಗದವರಿಗೆ ಅಂಚೆ ಮತದಾನದ ಮೂಲಕ ಹಕ್ಕು ಚಲಾಯಿಸಲು ಈ ಮೂಲಕ ಸಾಧ್ಯವಾಗಲಿದೆ.
"ಕೋವಿಡ್ ರೋಗಿಗಳಿಗೆ ಮತದಾನದ ಸೌಲಭ್ಯವನ್ನು ಹೇಗೆ ಒದಗಿಸಬಹುದು ಎಂದು ನಾವು ನೋಡುತ್ತಿದ್ದೇವೆ" ಎಂದೂ ಟೀಕಾರಮ್ ಮೀನಾ ಹೇಳಿರುವರು.