ಜಿನಿವಾ: ಯೂರೋಪ್‌ನ ಎಂಟು ರಾಷ್ಟ್ರಗಳಲ್ಲಿ ಬ್ರಿಟನ್‌ನಲ್ಲಿ ಕಂಡುಬಂದ ಹೊಸ ಕೊರೊನಾವೈರಸ್ ಪತ್ತೆಯಾಗಿದೆ ಎಂದು ಡಬ್ಲ್ಯೂಹೆಚ್‌ಒ ಯೂರೋಪ್‌ನ ಪ್ರಾದೇಶಿಕ ನಿರ್ದೇಶಕರು ಹೇಳಿದ್ದಾರೆ.
ಯೂರೋಪ್‌ನ ರಾಷ್ಟ್ರಗಳಲ್ಲಿ ಮೇಲ್ವಿಚಾರಣೆ ಮಾಡುತ್ತಿರುವ ಅಧಿಕಾರಿಗಳ ಪ್ರಕಾರ ಇತ್ತೀಚೆಗೆ ಬ್ರಿಟನ್‌ನಲ್ಲಿ ಪತ್ತೆಯಾಗಿದ್ದ ವೈರಸ್ ಎಂಟು ಯೂರೋಪಿಯನ್ ರಾಷ್ಟ್ರಗಳಿಗೆ ಹರಡಿದೆ ಎಂದು ಡಬ್ಲ್ಯೂಹೆಚ್‌ಎ ಯೂರೋಪ್ ತಿಳಿಸಿದೆ. ಇದರ ಜೊತೆಗೆ ಇಂದು ಫ್ರಾನ್ಸ್ ಮೊದಲ ಪ್ರಕರಣವನ್ನು ವರದಿ ಮಾಡಿದೆ.
ಡಬ್ಲ್ಯುಹೆಚ್‌ಒ ಯುರೋಪಿನ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಕ್ಲುಗೆ ಪ್ರಕಾರ ಹೊಸ ಕೊರೊನಾವೈರಸ್ ರೂಪಾಂತರವು ಹಿಂದಿನ ತಳಿಗಳಿಗಿಂತ ಭಿನ್ನವಾಗಿ ಕಿರಿಯ ವಯಸ್ಸಿನವರಲ್ಲಿ ಹೆಚ್ಚು ಹರಡುತ್ತಿದೆ ಎಂದು ಹೇಳಿದ್ದಾರೆ.
''@WHO_ಯುರೋಪ್ ಪ್ರದೇಶದ 8 ದೇಶಗಳು ಈಗ ಹೊಸ ಕೋವಿಡ್-19 ರೂಪಾಂತರ VOC-202012/01 ಅನ್ನು ಗುರುತಿಸಿವೆ. ಅಸ್ತಿತ್ವದಲ್ಲಿರುವ ರಕ್ಷಣಾತ್ಮಕ ಕ್ರಮಗಳನ್ನು ಬಲಪಡಿಸುವುದು ಅತ್ಯಗತ್ಯವಾಗಿದೆ : ಸಾಮಾಜಿಕ ಅಂತರ / ಮಾಸ್ಕ್ / ಬಯೋಬಬಲ್‌ನಲ್ಲಿ ಉಳಿಯುವುದಾಗಿದೆ'' ಎಂದು ಹ್ಯಾನ್ಸ್ ಕ್ಲುಗೆ ಟ್ವೀಟ್ ಮಾಡಿದ್ದಾರೆ.
"ಈ ರೂಪಾಂತರವು ಹಿಂದಿನ ವೈರಸ್‌ಗಿಂತ ಭಿನ್ನವಾಗಿ ಕಿರಿಯ ವಯಸ್ಸಿನವರಲ್ಲಿ ಹರಡುತ್ತಿದೆ ಎಂದು ತೋರುತ್ತದೆ. ಸಂಶೋಧನೆ ನಡೆಯುತ್ತಿರುವಾಗ ಅದರ ಪ್ರಭಾವವನ್ನು ಅರಿಯುವುದು ಮುಖ್ಯವಾಗಿದೆ" ಎಂದು ಕ್ಲುಗೆ ನಂತರದ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮಾರ್ಚ್ 11 ರಂದು ಡಬ್ಲ್ಯುಎಚ್‌ಒ ಕೊರೊನಾವೈರಸ್ (ಕೋವಿಡ್-19) ಜಾಗತಿಕ ಸಾಂಕ್ರಾಮಿಕ ರೋಗ ಎಂದು ಘೋಷಿಸಿತು.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಜಾಗತಿಕವಾಗಿ 79,712,010 ಪ್ರಕರಣಗಳು ಮತ್ತು 1,747,790 ಸಾವುಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗದಿಂದ ಯುನೈಟೆಡ್ ಸ್ಟೇಟ್ಸ್ ಹೆಚ್ಚು ಹಾನಿಗೊಳಗಾದ ದೇಶವಾಗಿ ಮುಂದುವರೆದಿದೆ, ನಂತರದ ಸ್ಥಾನದಲ್ಲಿ ಭಾರತ ಮತ್ತು ಬ್ರೆಜಿಲ್ ಇದೆ.