ಪೆರ್ಲ:ಕೇರಳ ರಾಜ್ಯ ವಿದ್ಯುತ್ ಮಂಡಳಿ ಪೆರ್ಲ ವಿಭಾಗೀಯ ಕಚೇರಿಯ ಕಾರ್ಯ ವೈಖರಿಯಲ್ಲಿ ಮಹತ್ತರ ಬದಲಾವಣೆಯಾಗಿದ್ದು ಪ್ರಸ್ತುತ ಎಲ್ಲಾ ಸಿಬಂದಿಗಳೂ ಶ್ಲಾಘನೀಯ, ಗ್ರಾಹಕ ಸ್ನೇಹಿ ಸೇವೆ ನೀಡುವ ಮೂಲಕ ಜನಮನ್ನಣೆ ಪಡೆದಿದ್ದಾರೆ.
ವರ್ಷಗಳ ಹಿಂದೆ ಪೆರ್ಲ ವಿಭಾಗೀಯ ಸಿಬ್ಬಂದಿಗಳ ಮೂಲಕ ಕೆಲಸ ಮಾಡಿಸಲು ಆಗುತ್ತಿದ್ದ ಕಷ್ಟನಷ್ಟ ಮಾನಸಿಕ ಕಿರಿಕಿರಿಯ, ಪ್ರಸ್ತುತ ಜನಪರ ಬದಲಾವಣೆಯನ್ನು ಗುರುತಿಸಿ ಸಾಮಾಜಿಕ ಮೆಚ್ಚುಗೆ ವ್ಯಕ್ತಪಡಿಸುವ ನಿಟ್ಟಿನಲ್ಲಿ ಪ್ರಸ್ತುತ ಸಂದರ್ಭ, ಇತಿಮಿತಿಗೆ ಹೊಂದಿಕೊಂಡು ಕೆಎಸ್ ಇಬಿ ಪೆರ್ಲ ಸೆಕ್ಷನ್ ಸಿಬ್ಬಂದಿಗಳಿಗೆ ಕೃತಜ್ಞತೆ ಸಮರ್ಪಿಸುವ ಉದ್ದೇಶದೊಂದಿಗೆ ಪಡ್ರೆ ಗ್ರಾಮದ ಸಮಾನ ಮನಸ್ಕರಿಂದ ಡಿ.9ರಂದು ಬೆಳಗ್ಗೆ 8.30ಕ್ಕೆ ವಿದ್ಯುತ್ ಕಚೇರಿಯಲ್ಲಿ ಸರಳ ಕಾರ್ಯಕ್ರಮ ನಡೆಯಲಿದೆ.ಊರಿನ ಎಲ್ಲಾ ಸಮಾನ ಮನಸ್ಕರು ಈ ಸತ್ಕಾರ್ಯದಲ್ಲಿ ಪ್ರಾತಿನಿಧಿಕವಾಗಿ ಭಾಗವಹಿಸುವಂತೆ ತಿಳಿಸಲಾಗಿದೆ.