ಕೊಟ್ಟಾಯಂ: ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ನಿರ್ಬಂಧಗಳಿಂದಾಗಿ ತೀರ್ಥಕ್ಷೇತ್ರವಾದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಆದಾಯ ಕುಸಿದಿದೆ.
ಮಂಡಲ ಪೂಜೆಯ ಮೊದಲ 39 ದಿನಗಳಲ್ಲಿ ಅರಾವಣ ಮಾರಾಟ ಮತ್ತು ಹುಂಡಿ ಸಂಗ್ರಹದಿಂದ ಬಂದ ಆದಾಯ ಸೇರಿದಂತೆ ದೇವಾಲಯದ ಒಟ್ಟು ಆದಾಯ 9.09 ಕೋಟಿ ರೂ ನಷ್ಟಿದೆ. ಆದರೆ, ಕಳೆದ ವರ್ಷದ ಮಂಡಲ ಪೂಜೆ ಅವಧಿಯಲ್ಲಿ ಒಟ್ಟು 165 ಕೋಟಿ ರೂ ಆದಾಯ ಸಂಗ್ರಹವಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.ಕೋವಿಡ್ -19 ತಡೆ ಕ್ರಮದಿಂದಾಗಿ ಈ ವರ್ಷ ಡಿ 24 ರವರೆಗೆ 71,706 ಭಕ್ತರಿಗೆ ಮಾತ್ರ ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿತ್ತು. 2019 ರಲ್ಲಿ ದಿನಕ್ಕೆ 5000 ದಿಂದ ಒಂದು ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು.
ದೇವಾಲಯವನ್ನು ನಿರ್ವಹಿಸುವ ತಿರುವಂಕೂರು ದೇವಸ್ವಂ ಮಂಡಳಿಯು ತನ್ನ ಅಧೀನದಲ್ಲಿರುವ ಎಲ್ಲಾ 1250 ದೇವಾಲಯಗಳಿಗೆ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಿದೆ.