ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಚಟುವಟಿಕೆಗಳಿಗಾಗಿ ಕಾಸರಗೋಡು ಜಿಲ್ಲೆಯಲ್ಲಿ 924 ವಾಹನಗಳು ಸಜ್ಜುಗೊಂಡಿವೆ.
ಮತಗಟ್ಟೆಗಳಿಗೆ ಸಾಮಾಗ್ರಿ ಒಯ್ಯುವ, ಕರ್ತವ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿಯ, ಸುರಕ್ಷೆ ಹೊಣೆಗಾರಿಕೆಯ ಸಿಬ್ಬಂದಿಯ ಸಂಚಾರಗಳಿಗಾಗಿ ಈ ವಾಹನಗಳು ಓಡಾಟ ನಡೆಸಲಿವೆ. ಬಸ್, ಮಿನಿಬಸ್, ಟ್ರಾವಲರ್, ಜೀಪು/ಎಲ್.ಎಂ.ವಿ. ಸಹಿತ ವಾಹನಗಳು ಈ ಸಾಲಿನಲ್ಲಿವೆ.
ಮಂಜೇಶ್ವರ ಬ್ಲಾಕ್ ಗೆ 139 ವಾಹನಗಳು, ಕಾಸರಗೋಡು ಮತ್ತು ಕಾರಡ್ಕ ಬ್ಲಾಕ್ ಗಳಿಗೆ ತಲಾ 128 ವಾಹನಗಳು, ಕಾಞಂಗಾಡ್ ಬ್ಲೋಕ್ ಗೆ 69, ನೀಲೇಶ್ವರ ಬ್ಲೋಕ್ ಗೆ 109, ಪರಪ್ಪ ಬ್ಲೋಕ್ ಗೆ 129 ವಾಹನಗಳು, ಕಾಸರಗೋಡು ನಗರಸಭೆಗೆ 14, ನೀಲೇಶ್ವರ ನಗರಸಭೆಗೆ 15, ಕಾಞಂಗಾಡ್ ನಗರಸಭೆಗೆ 47 ವಾಹನಗಳು ಮಂಜೂರುಗೊಂಡಿವೆ.
ಜೊತೆಗೆ ಪೋಲೀಸರ ಸಹಿತ ಸುರಕ್ಷೆ ಸಿಬ್ಬಂದಿಗೆ 124 ವಾಹನಗಳು, ವಿಶೇಷ ಅಂಚೆ ಮತಪತ್ರ ವಿತರಣೆಗೆ 22 ವಾಹನಗಳು ಸಜ್ಜುಗೊಂಡಿವೆ ಎಂದು ಸಂಚಾರ ನಿರ್ವಹಣೆ ನೋಡೆಲ್ ಅಧಿಕಾರಿ ಎ.ಕೆ.ರಾಧಾಕೃಷ್ಣನ್ ತಿಳಿಸಿದರು.