ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮತದಾನ ನಡೆಸುವ ಮಂದಿ ಜಿಲ್ಲಾ ಐ.ಇ.ಸಿ. ಸಂಚಲನ ಸಮಿತಿ ನಡೆಸುವ ಕೋವಿಡ್ ಜನಜಾಗೃತಿ ಶಿಬಿರದ ಸದಸ್ಯರಾಗಲು ಅವಕಾಶಗಳಿವೆ. "ನನ್ನ ಪ್ರಥಮ ಮತದಾನ ಕೋವಿಡ್ ಜಾಗೃತಿಯೊಂದಿಗೆ" ಎಂಬ ವೀಡಿಯೋ ಸಂದೇಶವನ್ನು ಡಿಸೆಂಬರ್ 2ರ ಮುಂಚಿತವಾಗಿ 8590684023 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಕಳುಹಿಸಬೇಕು. ಆಯ್ದ ಸಂದೇಶಗಳ ವೀಡಿಯೋಗಳು ಐ.ಇ.ಸಿ. ಸಂಚಲನ ಸಮಿತಿಯ ಜನಜಾಗೃತಿ ಶಿಬಿರಗಳಲ್ಲಿ ಬಳಸಲಾಗುವುದು.