ತಿರುವನಂತಪುರ: ಕೇಂದ್ರ ವಿದೇಶಾಂಗ ಸಚಿವ ವಿ. ಮುರಲೀಧರನ್ ಆರೋಗ್ಯವಾಗಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಚಿರಯಿಂಕಿಳಿ ಕ್ಷೇತ್ರದ ಚುನಾವಣಾ ಕಚೇರಿಯನ್ನು ಉದ್ಘಾಟಿಸಲು ಮಂಗಳವಾರ ಆಗಮಿಸಿದ್ದ ವಿ.ಮುರಲೀಧರನ್ ತೀವ್ರ ಅಸ್ವಸ್ಥಗೊಂಡರು. ಕೂಡಲೇ ಆಗಮಿಸಿದ ವೈದ್ಯಕೀಯ ತಂಡ ಪರೀಕ್ಷೆ ನಡೆಸಿತು.
ರಕ್ತದೋತ್ತಡದ ಹೆಚ್ಚುವಿಕೆಯೇ ಅಸ್ವಸ್ಥತೆಗೆ ಕಾರಣವೆನ್ನಲಾಗಿದ್ದು ವಿಶೇಷ ವಿಶ್ರಾಂತಿ ಸೂಚಿಸಲಾಯಿತು. ವಿಶ್ರಾಂತಿ ಪಡೆದ ಬಳಿಕ ಸಚಿವರು ಸಭೆ ನಡೆದಿದ್ದ ಸ್ಥಳದಿಂದ ನಿರ್ಗಮಿಸಿದರು. ಸಚಿವರಿಗೆ ಪ್ರಸ್ತುತ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದು ತಿಳಿದುಬಂದಿದೆ.