ಕಾಸರಗೋಡು: ಇನ್ನೊಬ್ಬರ ಮತವನ್ನು ಮತ್ತೊಬ್ಬರು ಚಲಾಯಿಸುವುದು ಅಥವಾ ತಾನು ಈಗಾಗಲೇ ಮತದಾನ ನಡೆಸಿದ್ದು, ಅದನ್ನು ಗುಪ್ತವಾಗಿರಿಸಿ ಮತ್ತೊಮ್ಮೆ ಮತದಾನ ನಡೆಸಲು ಯತ್ನಿಸುವುದು(ಅಕ್ರಮ ಮತದಾನ(ಕಳ್ಳವೋಟು)) ಕಾನೂನು ರೀತ್ಯಾ ಅಪರಧ ವಾಗಿದೆ. ಐ.ಪಿ.ಸಿ. 171 ಪ್ರಕಾರ ಒಂದು ವರ್ಷ ವರೆಗಿನ ಸಜೆ ಲಭಿಸಬಹುದಾದ ಅಪರಾಧ ಇದಾಗಿದೆ. ಯಾರದ್ದಾದರೂಪ್ರೇರಣೆ4ಯಿಮದ ಇಂಥಾ ಕೃತ್ಯ ನಡೆಸಿದ್ದರೂ, ಶಿಕ್ಷೆಯಲ್ಲಿ ಸಡಿಲಿಕೆ ಇರುವುದಿಲ್ಲ. ಮತ್ತೊಬ್ಬರ ಗುರುತುಚೀಟಿ ನಕಲಿಯಾಗಿ ನಿರ್ಮಿಸಿ ಮತದಾನ ನಡೆಸಲು ಯತ್ನಿಸಿದ ಪ್ರಕರಣದಲ್ಲೂ ನಕಲಿ ದಾಖಲೆಪತ್ರ ನಿರ್ಮಿಸಿದ, ಇನ್ನೊಬ್ಬರ ಬದಲಿಗೆ ತಾನು ಮತದಾನ ನಡೆಸಿದ ಪ್ರಕರಣದಲ್ಲೂ ಕೇಸು ದಾಖಲಿಸಲಾಗುವುದು.
ವಿದೇಶದಲ್ಲಿ, ಇತರ ರಾಜ್ಯದಲ್ಲಿರುವ ಮತದಾತರ ಹೆಸರಲ್ಲಿ, ಮತದಾತರ ಪಟ್ಟಿಯಲ್ಲಿ ಹೆಸರು ಹೊಂದಿರುವ , ಆದರೆ ಈಗ ನಿಧನರಾಗಿರುವ ವ್ಯಕ್ತಿಯ ಗುರುತುಚೀಟಿಯನ್ನು ಯಾರು ಕೇಳಿದರೂ ನೀಡಬಾರದು. ಇವನ್ನು ಬಳಸಿ ಅಕ್ರಮ ಮತದಾನ ನಡೆಸಲು ಯತ್ನಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಿಜವಾದ ಗುರುತುಚೀಟಿಯೊಮದಿಗೆ ಅಸಲಿ ಮತದಾತರೇ ಮತದಾನ ನಡೆಸುತ್ತಿದ್ದಾರೆ ಎಂದು ಖಚಿತಪಡಿಸುವ ಹೊಣೆಗಾರಿಕೆ ಚುನಾವಣೆ ಅಧಿಕಾರಿಯದ್ದಾಗಿದೆ. ಮತದಾತರ ಗುರುತುಚೀಟಿ ಬಗ್ಗೆ ದೂರುಗಳಿದ್ದಲ್ಲಿ ಕಾನೂನುರೀತ್ಯಾ ಕ್ರಮಗಳನ್ನು ನಡೆಸಿದ ಮೇಲಷ್ಟೇ ಮತದಾನ ನಡೆಸಲು ಅನುಮತಿ ನೀಡಬೇಕು. ಟೆಂಡರ್ ವೋಟ್ ವೋಟಿಂಗ್ ಯಂತ್ರದಲ್ಲಿ ನಡೆಸಲು ಮಂಜೂರಾತಿ ನೀಡಕೂಡದು. ಯಾವುದೇ ಅಭ್ಯರ್ಥಿಗಾಗಿ ಮತದಾನ ನಡೆಸಲು ಹಣ ಯಾ ಕೊಡುಗೆ ನೀಡುವುದು, ಬೆದರಿಕೆ ಹಾಕುವುದು , ಪ್ರೇರಣೆ ನೀಡುವುದು, ಮತದಾನ ನಡೆಸಲು ತಡೆಮಾಡುವುದು ಇತ್ಯಾದಿ ನಡೆದಲ್ಲಿ, ಮತಗಟ್ಟೆ ಬಳಿ ಸಂಘರ್ಷ ನಡೆದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.