ಕಾಸರಗೋಡು: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮ ಇಂದು(ಡಿ.1ರಂದು) ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಗ್ಗೆ 8.30ಕ್ಕೆ ನಡೆಯುವ ಸಮಾರಂಭದಲ್ಲಿ ರೆಡ್ ರಿಬ್ಬನ್ ವಿತರಣೆ, 9 ಗಂಟೆಗೆ ಭಿತ್ತಿಪತ್ರ ಪ್ರದರ್ಶನ, 9.30ಕ್ಕೆ ಸಾರ್ವಜನಿಕ ಜಾಗೃತಿ ಶಿಬಿರ ಇತ್ಯಾದಿ ನಡೆಯಲಿದೆ. ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಕೆ.ಕೆ.ರಾಜಾರಾಮ ಸಮಾರಂಭವನ್ನು ಉದ್ಘಾಟಿಸುವರು.