ಮಂಜೇಶ್ವರ: ಮಂಜೇಶ್ವರ ಮತ್ತು ಕಾಸರಗೋಡು ಬ್ಲಾಕ್ ಪಂಚಾಯತ್ ಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬುಧವಾರ ನಡೆದಿದೆ.
ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆಯಾಗಿ ಐಕ್ಯರಂಗದ ಅಭ್ಯರ್ಥಿ ಷಮೀನಾ ಟೀಚರ್ ಅವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಐಕ್ಯರಂಗದ ಮುಹಮ್ಮದ್ ಹನೀಫ ಅವರು ಆಯ್ಕೆಗೊಂಡಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ನಯಾಬಝಾರ್ 11ನೇ ವಾರ್ಡ್ ನಿಂದ ಗೆದ್ದಿದ್ದ ಷಮೀನಾ ಟೀಚರ್ ಅವರಿಗೆ ಬುಧವಾರ ನಡೆದ ಆಯ್ಕೆಯಲ್ಲಿ 7 ಮತಗಳು ಲಭಿಸಿದ್ದುವು. ಪ್ರತಿಸ್ಪರ್ಧಿಯಾಗಿದ್ದ ಬಿ.ಜೆ.ಪಿ.ಯ ಎಂ.ಎಲ್.ಅಶ್ವಿನಿ ಅವರಿಗೆ 6 ಮತಗಳು ಲಭಿಸಿದ್ದುವು. ಇಬ್ಬರು ಸದಸ್ಯರು ಮತದಾನದಲ್ಲಿ ಭಾಗವಹಿಸಿರಲಿಲ್ಲ. ಉಪ್ಪಳ 14ನೇ ವಾರ್ಡ್ ನಿಂದ ಗೆದ್ದಿದ್ದ ಮುಹಮ್ಮದ್ ಹಸೀಫ ಅವರಿಗೆ ಬುಧವಾರದ ಆಯ್ಕೆಯಲ್ಲಿ 7 ಮತಗಳು ಲಭಿಸಿದ್ದುವು. ಪ್ರತಿಸ್ಪರ್ಧಿ ಬಿ.ಜೆ.ಪಿ.ಯ ಬಟ್ಟು ಶೆಟ್ಟಿ ಅವರಿಗೆ 6 ಮತಗಳು ದೊರೆತಿದ್ದುವು.
ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆಯಾಗಿ ಐಕ್ಯರಂಗದ ಅಭ್ಯರ್ಥಿ ಸಿ.ಎ.ಸೈಮಾ ಅವರು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಐಕ್ಯರಂಗದ ಪಿ.ಎ.ಎಅಶ್ರಫ್ ಆಲಿ ಅವರು ನೇಮಕಗೊಂಡರು. ಸಿವಿಲ್ ಸ್ಟೇಷನ್ 14ನೇ ವಾರ್ಡ್ ಅಭ್ಯರ್ಥಿಯಾಗಿ ಗೆದ್ದಿದ್ದ ಸಿ.ಎ.ಸೈಮಾ ಅವರಿಗೆ ಬುಧವಾರ ನಡೆದ ಆಯ್ಕೆಯಲ್ಲಿ 11 ಮತಗಳು ಲಭಿಸಿದ್ದುವು. ಪ್ರತಿಸ್ಪರ್ಧಿ ಬಿ.ಜೆ.ಪಿ.ಯ ಜಯಂತಿ ಅವರಿಗೆ 4 ಮತಗಳು ಲಭಿಸಿದ್ದುವು. ಎರಿಯಾಲ್ 4ನೇ ವಾರ್ಡ್ ನಿಂದ ಗೆಲುವು ಸಾಧಿಸಿದ್ದ ಪಿ.ಎ.ಅಶ್ರಫ್ ಆಲಿ ಅವರಿಗೆ ಬುಧವಾರ ನಡೆದ ಆಯ್ಕೆಯಲ್ಲಿ 11 ಮತಗಳು ದೊರಕಿದ್ದುವು. ಪ್ರತಿಸ್ಪರ್ಧಿ ಸುಕುಮಾರ ಕುದ್ರೆಪ್ಪಾಡಿ ಅವರಿಗೆ 4 ಮತಗಳು ದೊರೆತಿದ್ದುವು.