ಆಲಪ್ಪುಳ: ಆಲಪ್ಪುಳದ ಐರಾವಂಕರದಲ್ಲಿ ಬಾವಿ ಕೊರೆಯುತ್ತಿದ್ದಾಗ ಪುರಾತತ್ವ ವಸ್ತುಗಳು ಲಭ್ಯವಾದ ಘಟನೆ ನಡೆದಿದೆ. ಕೃಷಿ ಇಲಾಖೆಯ ಅಧಿಕಾರಿ ಪ್ರಸಾದ್ ಅವರ ಮನೆಯಲ್ಲಿ ಬಾವಿ ಅಗೆಯುವಾಗ ಸಮುದ್ರ ಜೀವಿಗಳ ಅವಶೇಷಗಳು ಪತ್ತೆಯಾಗಿವೆ. ಕಡಲು ಜೀವಿಗಳ ಚಿಪ್ಪುಗಳು, ಶಂಖ, ಇತರ ಜೀವಿಗಳ ಅವಶಿಷ್ಟಗಳು ಕಂಡುಬಂದಿದೆ. ಸಮುದ್ರದಿಂದ ಸುಮಾರು 30 ಕಿ.ಮೀ ದೂರದಲ್ಲಿ ಈ ಪ್ರದೇಶವಿದೆ.
ಜಯಪ್ರಕಾಶ್ ರಾಘವ್ ಪಣಿಕರ್ ಈ ಬಗ್ಗೆ ಪೆÇೀಸ್ಟ್ ಅನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಸೋದರಸಂಬಂಧಿ ಮತ್ತು ಕೃಷಿ ಇಲಾಖೆಯ ಅಧಿಕಾರಿ ಶ್ರೀ ಪ್ರಸಾದ್ ಅವರ ಮನೆಯ ಬಾವಿಯನ್ನು ಆಳಗೊಳಿಸಲು ಅಗೆದಾಗ ಕಂಡುಬಂದ ಕೆಲವು ವಸ್ತುಗಳ ಚಿತ್ರಗಳು. ಕಡಲು ಜೀವಿಗಳ ಅವಶಿಷ್ಟಗಳು ಈ ಚಿತ್ರದಲ್ಲಿವೆ" ಎಂದು ಬರೆದಿರುವರು.
" ಅಲಪ್ಪುಳ ಜಿಲ್ಲೆಯ ಮಾವೇಲಿಕ್ಕರದ ಕಾರ್ತಿಕಪಳ್ಳಿಯಿಂದ ಪೂರ್ವಕ್ಕೆ ಕನಿಷ್ಠ 50 ಕಿಲೋಮೀಟರ್ ದೂರದಲ್ಲಿ ಇಳವಕ್ಕರ ಎಂಬ ಪ್ರದೇಶದಲ್ಲಿ 50 ಅಡಿ ಆಳದಲ್ಲಿ ಈ ವಸ್ತುಗಳನ್ನು ಪತ್ತೆಹಚ್ಚಲಾಗಿದೆ. ಒಂದು ಸಣ್ಣ ಗುಡ್ಡಗಾಡು ಪ್ರದೇಶದಂತಿದೆ, ಸಮುದ್ರ ಜೀವಿಗಳ ಅವಶೇಷಗಳು ಮೇಲ್ಮಣ್ಣಿನ ಕೆಳಗಿರುವ ಮಣ್ಣಿನಿಂದ ಮತ್ತು ಅದರ ಕೆಳಗೆ ಸುಮಾರು 30-40 ಅಡಿ ಮರಳುಗಲ್ಲಿ ಕಂಡುಬರುತ್ತವೆ. "
ಈ ಪ್ರದೇಶದ ಉತ್ತರದಲ್ಲಿರುವ ಮಾನ್ನಾರ್, ಕಡಪ್ರಾ ಮತ್ತು ನಿರಣಂ ಎಂಬ ಪ್ರದೇಶದಲ್ಲೂ ಮಣ್ಣಿನಡಿ ಕಡಲು ಜೀವಿಗಳ ಅವಶೇಷಗಳು ಈ ಹಿಂದೆ ಕಂಡುಬಂದಿದೆ. ಈ ಪ್ರದೇಶಗಳು ಒಂದು ಕಾಲದಲ್ಲಿ ಸಮುದ್ರಗಳಾಗಿದ್ದವು ಮತ್ತು ಸಮುದ್ರ ಭೂ ಚಲನೆಯಲ್ಲಿ ಹಿಂದೆ ಸರಿದಿರಬೇಕು ಎಂದು ಜಯಪ್ರಕಾಶ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಒಂದನೇ ಶತಮಾನದಲ್ಲಿ ಪ್ಲಿನಿ ಅವರ ಪ್ರವಾಸ ಕಥೆಯಲ್ಲಿ ಉಲ್ಲೇಖಿಸಲಾದ ನೆಲ್ಸಿಂಡಾ ಬಂದರು ಸಹ ನಿರಣಂ ಎಂದು ಹೇಳಲಾಗುತ್ತದೆ. ಕರಾವಳಿಯಿಂದ 20 ರಿಂದ 30 ಕಿ.ಮೀ ದೂರದಲ್ಲಿರುವ ನಿರಣಂ, ಮನ್ನಾರ್, ಕಡಪ್ರಾ ಮತ್ತು ಐರಾವಂಕರ ಪ್ರದೇಶಗಳ ಮಣ್ಣಿನಲ್ಲಿ ಕಂಡುಬರುವ ಸಮುದ್ರ ಜೀವಿಗಳ ಅವಶೇಷಗಳು ಈ ಪ್ರದೇಶಗಳು ಒಂದು ಕಾಲದಲ್ಲಿ ಸಮುದ್ರಗಳಾಗಿದ್ದವು ಎಂಬುದನ್ನು ತೋರಿಸುತ್ತದೆ. ಪರಶುರಾಮನು ತನ್ನ ಕೊಡಲಿಯನ್ನು ಎಸೆದು ಕೇರಳವನ್ನು ಸೃಷ್ಟಿಸಿದ್ದಲ್ಲವೇ ಎಂದು ಜಯಪ್ರಕಾಶ್ ಬರೆದಿದ್ದಾರೆ.