HEALTH TIPS

ಪ್ಯಾಕೇಜ್ಡ್ ಮಿನರಲ್ ವಾಟರ್​ಗೆ ಹೊಸ ನಿಯಮ

         ನವದೆಹಲಿ: ಬಾಟಲಿಗಳಲ್ಲಿ ಪೂರೈಸುವ ಲವಣಯುಕ್ತ ನೀರಿಗೆ (ಪ್ಯಾಕೇಜ್ಡ್ ಮಿನರಲ್ ವಾಟರ್) ಸಂಬಂಧಿಸಿದ ಹೊಸ ನಿಯಮ ಜನವರಿ 1ರಿಂದ ಜಾರಿಗೆ ಬರಲಿದೆ. ಪ್ರತಿ ಲೀಟರ್ ನೀರಿನಲ್ಲಿ 20 ಮಿಲಿಗ್ರಾಂ ಕ್ಯಾಲ್ಷಿಯಂ ಮತ್ತು 10 ಮಿಲಿಗ್ರಾಂ ಮ್ಯಾಗ್ನೀಷಿಯಂ ಇರಬೇಕು. ಇವು ಆರೋಗ್ಯಕ್ಕೆ ಅತ್ಯಂತ ಮಹತ್ವದ ಅಂಶಗಳಾಗಿವೆ ಎಂದು ಭಾರತ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ಹೇಳಿದೆ. ಕಂಪನಿಗಳು ಈ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಅಂದಾಜು 150 ಬ್ರಾಂಡ್​ಗಳಿದ್ದು, ಲೈಸೆನ್ಸ್ ಹೊಂದಿದ ವಾಟರ್ ಬಾಟ್ಲಿಂಗ್ ಘಟಕಗಳ ಸಂಖ್ಯೆ 6000 ಇದೆ.

       ಖನಿಜಗಳು ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಪ್ಯಾಕೇಜ್ಡ್ ಕುಡಿಯುವ ನೀರಿನಲ್ಲಿ ಕೆಲವು ನಿರ್ದಿಷ್ಟ ಖನಿಜಗಳನ್ನು ಸೇರಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​ಜಿಟಿ) ಎಫ್​ಎಸ್​ಎಸ್​ಎಐಗೆ ಸೂಚಿಸಿತ್ತು. ಮಾನವ ಬಳಕೆಗೆ ಸುರಕ್ಷಿತಗೊಳಿಸುವ ಉದ್ದೇಶದಿಂದ ನೀರನ್ನು ಸೋಸುವ (ಫಿಲ್ಟರ್) ವೇಳೆ ಅದರಲ್ಲಿನ ಖನಿಜಗಳು ನಷ್ಟವಾಗುತ್ತವೆ. ಹೀಗಾಗಿ ಅವುಗಳನ್ನು ಸೇರಿಸುವುದು ಸೂಕ್ತ ಎಂಬುದು ಎನ್​ಜಿಟಿ ಅಭಿಪ್ರಾಯವಾಗಿದೆ.

ಎರಡು ಬಾರಿ ಗಡುವು ವಿಸ್ತರಣೆ: ಎನ್​ಜಿಟಿಯ ಮೂಲ ಆದೇಶ ಹೊರಬಿದ್ದಿದ್ದು 2019ರ ಮೇ 29ರಂದು. ಗಡುವನ್ನು ಎರಡು ಬಾರಿ ವಿಸ್ತರಿಸಲಾಗಿದ್ದು ಪ್ಯಾಕೇಜ್ಡ್ ಮಿನರಲ್ ವಾಟರ್ ಕಂಪನಿಗಳು 2020ರ ಡಿಸೆಂಬರ್ 31ರೊಳಗೆ ನಿಯಮವನ್ನು ಕಡ್ಡಾಯವಾಗಿ ಜಾರಿ ಮಾಡುವಂತೆ ಸೂಚಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries