HEALTH TIPS

ಎಲ್ಲ ಮಾದರಿ ಚಿತ್ರಗಳಿಗೆ ಪ್ರೋತ್ಸಾಹ: ಜಾವಡೇಕರ್‌

         ನವದೆಹಲಿ: ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಸೇರಿದಂತೆ ಎಲ್ಲ ಮಾದರಿಯ ಉತ್ತಮ ಚಿತ್ರಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಸೋಮವಾರ ಹೇಳಿದರು.

        ಆನ್‌ಲೈನ್‌ ಅಂತರರಾಷ್ಟ್ರೀಯ ಕೊರೊನಾವೈರಸ್‌ ಕಿರುಚಿತ್ರೋತ್ಸವದಲ್ಲಿ ಮಾತನಾಡಿದ ಅವರು, ಯಾರ ಬಳಿ ಸ್ಮಾರ್ಟ್‌ಫೋನ್‌ ಇದೆಯೋ ಹಾಗೂ ಹೇಳಲೊಂದು ಕಥೆ ಇದೆಯೊ ಅವರು ಅವರೇ ಚಿತ್ರನಿರ್ಮಾಪಕರಾಗುತ್ತಿದ್ದಾರೆ. ಇದು ಸಂವಹನ ಕ್ರಾಂತಿಗಿಂತ ಕಮ್ಮಿಯೇನಲ್ಲ. ಜನರು 'ಸಿಟಿಜನ್‌ ಜರ್ನಲಿಸ್ಟ್‌'ಗಳಾಗುತ್ತಿದ್ದು, ತಮ್ಮದೇ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ, ಅದನ್ನು ಕಿರುಚಿತ್ರವಾಗಿ ಹೊರತರುತ್ತಿದ್ದಾರೆ' ಎಂದರು.

        'ಎಲ್ಲ ಮಾದರಿಯ ಚಿತ್ರಗಳು, ಉತ್ತಮ ಚಿತ್ರಗಳು ಹಾಗೂ ಜನರು ಇಷ್ಟಪಡುವ ಚಿತ್ರಗಳು ಬರಬೇಕು ಎನ್ನುವುದು ಸರ್ಕಾರದ ಯೋಜನೆ. ಕೋವಿಡ್‌ ಪಿಡುಗನ್ನು ವಿಷಯವಾಗಿರಿಸಿಕೊಂಡು ಚಿತ್ರೋತ್ಸವ ಆಯೋಜನೆ ಮಾಡಿರುವುದು ಹೊಸ ಆಲೋಚನೆ' ಎಂದು ಅಭಿನಂದಿಸಿದರು.

     ಇಂಡಿಯನ್‌ ಇನ್ಫೊಟೈನ್‌ಮೆಂಟ್‌ ಮೀಡಿಯಾ ಕಾರ್ಪೊರೇಷನ್‌(ಐಐಎಂಸಿ) ಆಯೋಜಿಸಿದ್ದ ಈ ಚಿತ್ರೋತ್ಸವಕ್ಕೆ 108 ದೇಶಗಳಿಂದ 2,800 ಕಿರುಚಿತ್ರಗಳು ಬಂದಿವೆ. ಪಿಡುಗಿಗಿರುವ ಚಿಕಿತ್ಸೆ, ಮುಂಜಾಗ್ರತಾ ಕ್ರಮಗಳು ಹಾಗೂ ಪಿಡುಗಿನಿಂದಾಗಿ ಜನಜೀವನದ ಮೇಲಾಗಿರುವ ಪರಿಣಾಮವನ್ನು ವಿಷಯವಾಗಿಸಿ ಕಿರುಚಿತ್ರಗಳನ್ನು ರಚಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries