ಕಾಸರಗೋಡು: ಬಡವರ, ಅನಾಥರ ಕಣ್ಣೀರೊರೆಸಲು ಮತ್ತೆ ಜಿಲ್ಲಾಧಿಕಾರಿ ಅವರ ಅದಾಲತ್ ನಡೆಯುತ್ತಿದೆ.
ಆನ್ ಲೈನ್ ಮೂಲಕ ಮಂಗಳವಾರ ನಡೆದ ಹೊಸದುರ್ಗ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ ಇದಕ್ಕೊಂದು ನಿದರ್ಶನವಾಗಿದೆ.
ಜಾಗ ಸಂಬಂಧಿ ಸಮಸ್ಯೆಗಳು, ಭೂತೆರಿಗೆ, ಕುಡಿಯುವ ನೀರು, ವಿದ್ಯುತ್, ಪಿಂಚಣಿ, ಪರಿಸರ ಮಾಲಿನ್ಯ ಸಹಿತ ದೂರುಗಳು ಈ ವೇಳೆ ಅಧಿಕವಾಗಿದ್ದುವು.
ಕುಡಿಯುವ ನೀರಿನ ಸಂಪರ್ಕಕ್ಕಾಗಿ ಮಡಿಕೈ ಮೇಕಾಟ್ ನಿವಾಸಿ ಬಿ<ದು ಅವರು ದೂರು ಸಲ್ಲಿಸಿದ್ದರು. ಜಲಜೀವನ ಯೋಜನೆಯಲ್ಲಿ ಅಳವಡಿಸಿ ನೀರಿನ ಸಂಪರ್ಕ ಒದಗಿಸುವುದಾಗಿ ಜಿಲ್ಲಾಧಿಕಾರಿ ಈ ವೇಳೆ ಭರವಸೆ ನೀಡಿದರು. ಅಂಧರಾಗಿರುವ ತಮ್ಮ ಮಕ್ಕಳಿಗೆ ಹಾಸ್ಟೆಲ್ ಗೆ ಪ್ರವೇಶಾತಿ ನೀಡುವುತ್ತಿಲ್ಲ. ನಿತ್ಯ ಮಡಿಕೈಯಿಂದ ವಿದ್ಯಾನಗರದ ಸರಕಾರಿ ಅಂಧ ವಿದ್ಯಾಲಯಕ್ಕೆ ಬಂದು ಹೋಗುವುದು ಸಮಸ್ಯೆಯಾಗುತ್ತಿದೆ ಎಂಬ ಅವರ ಮತ್ತೊಂದು ದೂರನ್ನು ಪರಿಶೀಲನೆ ನಡೆಸಿರುವ ಜಿಲ್ಲಾಧಿಕಾರಿ 24 ತಾಸುಗಳಲ್ಲಿ ಸಮಸ್ಯೆ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಆದರೆ ಅರ್ಧ ತಾಸಿನಲ್ಲೇ ಪರಿಹಾರ ಲಭಿಸಿತ್ತು.
ಒಟ್ಟು 31 ದೂರುಗಳು ಲಭಿಸಿದ್ದುವು. ಎಲ್ಲವಕ್ಕೂ ತೀರ್ಪು ನೀಡಲಾಗಿದೆ.
ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಸಹಾಯಕ ಜಿಲ್ಲಾಧಿಕಾರಿ ಎಲ್.ಆರ್. ಕೆ.ರವಿಕುಮಾರ್, ತಹಸೀಳ್ದಾರ್ ಎನ್.ಮಣಿರಾಜ್, ಎಲ್.ಆರ್.ತಹಸೀಲ್ದಾರ್ ವಿಜಯನ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.