ಕೊಚ್ಚಿ: ಆರ್‍ಬಿಎಲ್ ಬ್ಯಾಂಕ್ ಮತ್ತು ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಬ್ಯಾಂಕ್ ಗ್ರಾಹಕರಿಗೆ ಜೀವ ವಿಮಾ ಯೋಜನೆಗಳನ್ನು ಒದಗಿಸಲು ಬ್ಯಾಂಕ್ ವಿಮಾ ಸಹಭಾಗಿತ್ವವನ್ನು ಮಾಡಿಕೊಂಡಿವೆ.
ಇದು ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಯೋಜನೆಗಳನ್ನು 28 ರಾಜ್ಯಗಳಲ್ಲಿ ಆರ್ಬಿಎಲ್ ಬ್ಯಾಂಕಿನ 398 ಶಾಖೆಗಳ ಮೂಲಕ ಲಭ್ಯವಾಗುವಂತೆ ಮಾಡುತ್ತದೆ. ಐಸಿಐಸಿಐ ಪ್ರುಡೆನ್ಶಿಯಲ್ ತನ್ನ ವಿತರಣಾ ಜಾಲವನ್ನು ವಿಸ್ತರಿಸಲು ಇದು ದಾರಿ ಮಾಡಿಕೊಡುತ್ತದೆ.
ಆರ್‍ಬಿಎಲ್ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿಶ್ವವೀರ್ ಅಹುಜಾ ಈ ಬಗ್ಗೆ ನಿನ್ನೆ ಕೊಚ್ಚಿಯಲ್ಲಿ ಮಾಹಿತಿ ನೀಡಿರುವರು.
ಗ್ರಾಹಕ ಸ್ನೇಹಿ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸುವ ಮೂಲಕ ಜನ ಸೇವೆಗೆ ಇದು ಲಭ್ಯವಾಗುವುದು ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎನ್.ಎಸ್. ಕಣ್ಣನ್ ವಿವರಗಳನ್ನು ನೀಡಿರುವರು.