HEALTH TIPS

ವಾಹನಗಳ ಮುಂಭಾಗದ ಪ್ರಯಾಣಿಕ ಸೀಟ್ ಗಳಲ್ಲಿ ಏರ್ ಬ್ಯಾಗ್ ಕಡ್ಡಾಯಗೊಳಿಸಲು ಸರ್ಕಾರದ ಪ್ರಸ್ತಾವನೆ

       ನವದೆಹಲಿ: ವಾಹನಗಳ ಮುಂಭಾಗದ ಸೀಟ್ ಗಳಲ್ಲಿ ಏರ್ ಬ್ಯಾಗ್ ನ್ನು ಕಡ್ಡಾಯಗೊಳಿಸುವುದಕ್ಕೆ ಪ್ರಸ್ತಾವನೆ ಇದೆ ಎಂದು ಸರ್ಕಾರ ಹೇಳಿದೆ. ಅಪಘಾತ ಉಂಟಾದಾಗ ಪ್ರಯಾಣಿಕರ ಸುರಕ್ಷತೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

       ರಸ್ತೆ ಸಾರಿಗೆ ಸಚಿವಾಲಯ ಈ ಸಂಬಂಧ ಅಧಿಸೂಚನೆಯ ಕರಡನ್ನು ತಯಾರಿಸಿದೆ ಎಂದು ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

      ಹೊಸ ಕಾರು, ವಾಹನಗಳಲ್ಲಿ ಏ.1, 2021 ರಿಂದ ಪ್ರಸ್ತಾವಿತ ಕಾನೂನು ಜಾರಿಗೆ ತರುವುದಕ್ಕೆ ನಿರ್ಧರಿಸಲಾಗಿದ್ದು, ಈಗಿರುವ ಮಾದರಿಯ ವಾಹನಗಳಲ್ಲಿ ಜೂ.1, 2021 ರಿಂದ ಇದನ್ನು ಜಾರಿಗೆ ತರಬೇಕಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರಿಂದ ಸಲಹೆ, ಅಭಿಪ್ರಾಯಗಳನ್ನೂ ಸಚಿವಾಲಯ ಸಂಗ್ರಹಿಸಲು ಮುಂದಾಗಿದ್ದು, morth@gov.in ನಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಬಹುದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries