HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ವಿಶೇಷ ಅಂಚೆ ಮತಪತ್ರ ವಿತರಣೆ ಇಂದಿನಿಂದ ಆರಂಭ

           ಕಾಸರಗೊಡು: ಜಿಲ್ಲೆಯಲ್ಲಿ ವಿಶೇಷ ಅಂಚೆ ಮತಪತ್ರ ವಿತರಣೆ ಇಂದಿನಿಂದ(ಡಿ.5ರಿಂದ) ಆರಂಭಗೊಳ್ಳಲಿದೆ. 

           ಕೋವಿಡ್ ಪಾಸಿಟಿವ್ ಆಗಿರುವ ಮಂದಿಗೆ ಮತ್ತು ಕ್ವಾರೆಂಟೈನ್ ನಲ್ಲಿರುವ ವಿಶೇಷ ಮತದಾತರಿಗಾಗಿ ವಿಶೇಷ ಮತಪತ್ರ ಮೂಲಕ ಡಿ.13 ವರೆಗೆ ಮತದಾನ ನಡೆಸಬಹುದಾಗಿದೆ. 

                   ಬಳಕೆ ಬಗ್ಗೆ ಮಾಹಿತಿ: 

       ವಿಶೇಷ ಮತಪತ್ರ ಬಳಸಿ ಮತದಾನ ನಡೆಸುವ ಮಂದಿ ಯಾವ ಗ್ರಾಮಪಂಚಾಯತ್, ಯಾವ ವಾರ್ಡ್, ಯಾವ ಮತಗಟ್ಟೆ , ಮತದಾತರ ಪಟ್ಟಿಯ ಕ್ರಮ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಕಡ್ಡಾಯವಾಗಿ ಅರಿತಿರಬೇಕು. ಮಾಹಿತಿಗಾಗಿ ಸಂಬಂಧಪಟ್ಟ ಸಿಬ್ಬಂದಿ ಸಂಪರ್ಕಿಸುವ ವೇಳೆ ಈ ಮಾಹಿತಿಗಳನ್ನು ವಿಶೇಷ ಮತದಾರರು ನೀಡಬೇಕಿದೆ. 

        ವಿಶೇಷ ಮತದಾತರಿಂದ ಸಂಗ್ರಹಿಸಿದ ಮಾಹಿತಿಗಳನ್ನು ಜಿಲ್ಲಾ ವೈದ್ಯಾಧಿಕಾರಿ ಅವರ ನೇತೃತ್ವದ ಪ್ರತ್ಯೇಕ ತಂಡ ಬ್ಲಾಕ್ ಮಟ್ಟದ ಆರ್.ಒ.ಗಳ ನೇತೃತ್ವದಲ್ಲಿರುವ ತಂಡ ಪರಿಶೀಲನೆ ನಡೆಸಿ ಖಚಿತಪಡಿಸಿದ ನಂತರ ವಿಶೇಷ ಮತದಾತರ ಸರ್ಟಿಫೈ ಪಟ್ಟಿ ಸಿದ್ಧಪಡಿಸಲಿದೆ. 

     ಈ ರೀತಿ ಸಿದ್ದಗೊಂಡ ಸರ್ಟಿಫೈ ಲಿಸ್ಟ್ ಜಿಲ್ಲಾ ವೈದ್ಯಾಧಿಕಾರಿ ಜಿಲ್ಲಾ ಚುನಾವಣೆ ಅಧಿಕಾರಿಗೆ ಹಸ್ತಾಂತರಿಸುವರು. ಸರ್ಟಿಫೈ ಲಿಸ್ಟ್ ಲಭಿಸಿದ ತಕ್ಷಣ ಜಿಲ್ಲಾ ಚುನಾವಣೆ ಅಧಿಕಾರಿ ಸಂಬಂಧಪಟ್ಟ ಬ್ಲಾಕ್ ಮಟ್ಟದ ಚುನಾವಣೆ ಅಧಿಕಾರಿಗಳಿಗೆ ಅಂಚೆ ಮತಪತ್ರ ನೀಡಲು ನೇಮಕಗೊಂಡಿರುವ ವಿಶೇಷ ಪೆÇೀಲಿಂಗ್ ಟೀಂ ಗೆ ಈ ಲಿಸ್ಟ್ ಹಸ್ತಾಂತರಿಸುವರು. 

      ಸರ್ಟಿಫೈ ಲಿಸ್ಟ್ ಲಭಿಸಿದ ತಕ್ಷಣ ವಿಶೇಷ ಪೆÇೀಲಿಂಗ್ ಟೀಂ ಕೋವಿಡ್ ಸಂಹಿತೆ ಪಾಲಿಸಿ ವಿಶೇಷ ಮತದಾತರನ್ನು ಸಂಪರ್ಕಿಸಿ ಮತಪತ್ರ ಅರ್ಜಿ ನೀಡಿ ಸಹಿತ ಪಡೆದುಕೊಳ್ಳುವರು. 

    ವಿಶೇಷ ಮತದಾತರಿಗೆ ಸ್ಪೆಷ್ಯಲ್ ಟೀಂ ನೀಡುವ ಅಂಚೆ ಮತಪತ್ರ ಕಾಗದದಲ್ಲಿ ಮತ ಚಲಾಯಿಸಿ ನಿಗದಿತ ಲಕೋಟೆಯಲ್ಲಿ ಇರಿಸಿ ತಕ್ಷಣ ಮರಳಿಸಬೇಕು. 

    ಮತದಾನದ ಗೌಪ್ಯತೆ  ಪಾಲಿಸಿ ಮತದಾತರು ತಾವಿರುವ ಪ್ರದೇಶದಲ್ಲೇ ಮತದಾನ ನಡೆಸಬಹುದು. ಮತಚಲಾಯಿಸಿದ ನಂತರ ಮತಪತ್ರವನ್ನು ಕಿರು ಲಕೋಟೆಯಲ್ಲಿ ಹಾಕಿ ಮತದಾತ ಲಕೋಟೆಯನ್ನು ಮುಚ್ಚುಗಡೆ ನಡೆಸಬೇಕು. ಮತದಾತರು ಸತ್ಯವಾuಟಿಜeಜಿiಟಿeಜ್ಮಲದಲ್ಲಿ ಸಹಿತ ಮಾಡಿರುವನ್ನು ವಿಶೇಷ ಪೆÇೀಲಿಂಗ್ ಆಫೀಸರ್ ದೃಡೀಕರಿಸಬೇಕು. ಈ ಎರಡನ್ನೂ ದೊಡ್ಡ ಲಕೋಟೆಯಲ್ಲಿರಿಸಿ ನಂತರ ವಿಶೇಷ ಪೆÇೀಲಿಂಗ್ ಆಫೀಸರ್ ಗೆ ಮರಳಿಸಬೇಕು. 

            ವಿಶೇಷ ಪೆÇೀಲಿಂಗ್ ತಂಡದ ಗಮನಕ್ಕೆ :

    ಪ್ರತಿ ವಿಶೇಷ ಮತದಾತರಿಂದ ಮರಳಿ ಪಡೆಯುವ ಎಲ್ಲ ಪಾರಂಗಳನ್ನು ಲಕೋಟೆಯಲ್ಲಿರಿಸಿ ಡಬ್ಬಲ್ ಪ್ಯಾಕ್ ನಡೆಸಬೇಕು. ಚುನಾವಣೆ ಸಾಮಾಗ್ರಿಗಳನ್ನು ಹಸ್ತಾಂತರಿಸುವ ವೇಳೆ ಕಡ್ಡಾಯವಾಗಿ ಗ್ಲೌಸ್ ಧರಿಸಬೇಕು. ದಾಖಲೆಗಳನ್ನು ಮತದಾತರಿಗೆ ಹಸ್ತಾಂತರಿಸುವ ಮತ್ತು ಮರಳಿ ಪಡೆಯುವ ವೇಳೆ ಕೈಗಳ ಶುಚೀಕರಣ ಗಮನಿಸಿಕೊಳ್ಳಬೇಕು. ಮತಪತ್ರ ಸಹಿತ ದಾಖಲೆಗಳನ್ನು ವಿಶೇಷ ಮತದಾತರು, ಪೆÇೀಲಿಂಗ್ ಆಫೀಸರ್ ಮಾತ್ರ ಬಳಸಬೇಕು. ಮತಪತ್ರ ಅಳವಡಗೊಂಡಿರುವ ಲಕೋಟೆ, ಸತ್ಯವಾuಟಿಜeಜಿiಟಿeಜ್ಮಲ ಸಹಿತ ಫಾರಂ ಗಳು ಒಂದೇ ಲಕೋಟೆಯಲ್ಲಿ ಇರಿಸಿ ಮರಳಿ ಪಡೆಯಬೇಕು. ಮತಪತ್ರವಿರಿಸಿ ಸೀಲ್ ನಡೆಸಿರುವ ಲಕೋಟೆ ಚುನಾವಣೆ ಅಧಿಕಾರಿ ನಿಗದಿತ ಪೆಟ್ಟಿಗೆಯಲ್ಲಿ ಹಾಕಬೇಕು. ವಿಶೇಷ ಪೆÇೀಲಿಂಗ್ ಆಫೀಸರ್ ಮತ್ತು ತಂಡ ಪಿ.ಪಿ.ಇ. ಕಿಟ್ ಸಹಿತ ಕೋವಿಡ್ ಪ್ರತಿರೋಧ ಸಾಮಾಗ್ರಿಗಳನ್ನು ಕಡ್ಡಾಯವಾಗಿ ಧರಿಸಬೇಕು. ಕರ್ತವ್ಯ ದ ಅವಧಿ ಮುಗಿದ ತಕ್ಷಣ ವಿಶೇಷ ಪೆÇೀಲಿಂಗ್ ತಂಡ ತಾವು ಧರಿಸಿದ್ದ ಪಿ.ಪಿ.ಇ. ಕಿಟ್ ಆರೋಗ್ಯ ಇಲಾಖೆ ನಿಗದಿಪಡಿಸಿರುವ ಜಾಗದಲ್ಲೇ ಹಾಕಬೇಕು. 

            ವಿಶೇಷ ಮತದಾತರೂ ಜಾಗರೂಕರಾಗಿರಬೇಕು:

     ವಿಶೇಷ ಪೆÇೀಲಿಂಗ್ ಆಫೀಸರ್  ವಿಶೇಷ ಮತದಾತರನ್ನು ಸಂಪರ್ಕಿಸುವ ವೇಳೆ ತುಂಬ ಜಾಗ್ರತೆ ಮತ್ತು ಎಚ್ಚರಿಕೆ ಪಾಲಿಸಬೇಕಾದುದು ಕಡ್ಡಾಯ. ವಿಶೇಷ ಮತದಾತರು ಸಾಬೂನು ಬಳಸಿ  ಯಾ ಸಾನಿಟೈಸರ್ ಬಳಸಿ ಕೈಗಳನ್ನು ಶುಚಿಗೊಳಿಸಿ ಮತಪತ್ರ ಸಹಿತ ಸಾಮಾಗಿಗಳನ್ನು ಪಡೆದುಕೊಂಡು ಬಳಸಿಕೊಳ್ಳಬೇಕು. ಕೈಗಳನ್ನು ಮತ್ತೆ ಮತ್ತೆ ಸಾನಿಟೈಸ್ ನಡೆಸಿದ ನಂತರವಷ್ಟೇ ಮತಪತ್ರ ಇರಿಸಿ ಸೀಲ್ ಮಾಡಿದ ಲಕೋಟೆಯನ್ನು ಸ್ಪೆಷ್ಯಲ್ ಪೋಲಿಂಗ್ ಆಫೀಸರ್ ಗೆ ಹಸ್ತಾಂತರಿಸಬೇಕು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries