ಕಾಸರಗೋಡು: ಇತರ ರಾಜ್ಯಗಳಿಂದ, ವಿದೇಶಗಳಿಂದ ಆಗಮಿಸಿ ಮತದಾನಕ್ಕೆ ತೆರಳುವ ಮಂದಿ ಕೋವಿಡ್ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿನಂತಿಸಿದ್ದಾರೆ.
ನಿನ್ನೆ ನಡೆದ ವೀಡಿಯೋ ಕಾನ್ಪರೆನ್ಸ್ ಮೂಲಕ ಬುಧವಾರ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊರೋನಾ ಸೋಂಕು ಹರಡದಂತೆ ನಡೆಸುತ್ತಿರುವ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಈ ಮಂದಿ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಚುನಾವಣೆಯ ಪ್ರಚಾರ ಚಟುವಟಿಕೆಗಳು ಅಂತಿಹಂತದಲ್ಲಿದ್ದು, ಈ ವೆಳೆಯೂ ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಪೆÇೀಲಿಂಗ್ ಕೇಂದ್ರಗಳ ವಿತರಣೆ ಕೇಂದ್ರಗಳ ಆವರಣದೊಳಗೆ ಪ್ರಿಸೈಡಿಂಗ್ ಅಧಿಕಾರಿಗಳಿಗೆ ಮತ್ತು ಫಸ್ಟ್ ಪೆÇೀಲಿಂಗ್ ಅಧಿಕಾರಿಗಳಿಗೆ ಮಾತ್ರ ಪ್ರವೇಶಾತಿ ಇರುವುದು. ಕರ್ತವ್ಯಕ್ಕೆ ನೇಮಕಗೊಂಡಿರುವ ಇತರ ಸಿಬ್ಬಂದಿ ಸಜ್ಜುಗೊಂಡಿರುವ ವಾಹನಗಳಲ್ಲಿ ಕುಳಿತುಕೊಳ್ಳಬೇಕು. ವಾಹನಗಳಲ್ಲಿ ಕಿಟ್, ಚೆಕ್ ಲಿಸ್ಟ್ ಇರಬೇಕು. ಪ್ರಿಸೈಡಿಂಗ್ ಅಧಿಕಾರಿಗಳು, ಫಸ್ಟ್ ಪೆÇೀಲಿಂಗ್ ಅಧಿಕಾರಿಗಳು ಇ.ವಿ.ಎಂ. ಸಹಿತ ಸಾಮಾಗ್ರಿಗಳನ್ನು ತರುವ ವೇಳೆಗಾಗಲೇ ಇತರ ಸಿಬ್ಬಂದಿ ಕಿಟ್ ನಲ್ಲಿ ಚೆಕ್ ಲಿಸ್ಟ್ ಬಳಸಿ ತಪಾಸಣೆ ನಡೆಸಬೇಕು. ಲೋಪದೋಷಗಳಿದ್ದಲ್ಲಿ ಬಸ್ ಗಳಲ್ಲಿ ಹಾಜರಾತಿ ಸಂಗ್ರಹಕ್ಕೆ ಆಗಮಿಸುವ ಸೆಕ್ಟರ್ ಅಧಿಕಾರಿಯ ಗಮನಕ್ಕೆ ತರಬೇಕು ಎಂದವರು ನುಡಿದರು.
ಮತಗಟ್ಟೆಗಳ ಸಾಮಾಗ್ರಿ ವಿತರಣೆ ಕೇಂದ್ರಗಳಲ್ಲಿ ತಪಾಸಣೆಗಾಗಿ ಮೊಬೈಲ್ ಟೆಸ್ಟಿಂಗ್ ಸೌಲಭ್ಯ ಏರ್ಪಡಿಸುವಂತೆ ಜಿಲ್ಲಾ ವೈದ್ಯಧಿಕಾರಿಗೆ ಆದೇಶ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರಿಗೆ ಅಂಚೆ ಮತದಾನ ಮಂಜೂರು ಮಾಡುವ ವಿಚಾರ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ಡಿ.30ರಿಂದ ಜ.5 ವರೆಗೆ ಪೆರಿಂuಟಿಜeಜಿiಟಿeಜಂ ಸಿ.ಆರ್.ಪಿ.ಎಫ್ ಗೆ ಔಟ್ಡೋರ್ ಟ್ರೈನಿಂಗ್ ಜಂಗಲ್ ಕ್ಯಾಂಪ್ ಚೀಮೇನಿ ಎಸ್ಟೇಟ್ ನಲ್ಲಿ ನಡೆಸಲು ಅನುಮತಿ ನೀಡಲಾಯಿತು. ತಳ್ಳುಗಾಡಿಗಳಲ್ಲಿ ಆಹಾರ ಪಾರ್ಸೆಲ್ ಆಗಿ ಮಾತ್ರ ವಿತರಿಸಲು ಅನುಮತಿಯಿದೆ ಎಂದು ತಿಳಿಸಲಾಯಿತು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಡಿ.ಟಿ.ಒ.ಮನೋಜ್ ಕುಮಾರ್, ಕೋರ್ ಸಮಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.