ಮಂಜೇಶ್ವರ: ಹದಿನೆಂಟು ಪೇಟೆಗಳ ದೇವಾಲಯವೆಂದೇ ಖ್ಯಾತವಾದ ಮಂಜೇಶ್ವರ ಶ್ರೀಅನಂತೇಶ್ವರ ದೇವಾಲಕಯದ ವಾರ್ಷಿಕ ಷಷ್ಠೀ ಮಹೋತ್ಸವದ ಪ್ರಧಾನ ರಥೋತ್ಸವ ಭಾನುವಾರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳೊಂದಿಗೆ ಕೋವಿಡ್ ನಿಬಂಧನೆಗಳಿಗೆ ಅನುಸಾರ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೆಳಿಗ್ಗಿನ ಪೂಜೆಗಳ ಬಳಿಕ 9ರಿಂದ 11ರ ವರೆಗೆ ಧರ್ಮ, ಮಧ್ಯಾಹ್ನ 12 ರಿಂದ ಮಹಾಪೂಜೆ, 12.30ಕ್ಕೆ ಯಜ್ಞ, ಅಪರಾಹ್ನ 3ಕ್ಕೆ ಪೂರ್ಣಾಹುತಿ, 3.30 ರಿಂದ ಯಜ್ಞಾರತಿ, ಸ್ವರ್ಣ ಲಾಲ್ಕಿಯಲ್ಲಿ ಬಲಿ ಉತ್ಸವ, ರಥಾರೋಹಣಕ್ಕೆ ಹೊರಡುವುದು, ಸಂಜೆ 5ಕ್ಕೆ ರಥಾರೋಹಣ, 7ಕ್ಕೆ ರಥಾವರೋಹಣ, ಗರ್ಭಗೃಹಕ್ಕೆ ದೇವರ ಆಗಮನ, ರಾತ್ರಿ 8ಕ್ಕೆ ಮಂಗಳಾರತಿ ನಡೆಯಿತು.
ಇಂದು (ಸೋಮವಾರ) ಮಧ್ಯಾಹ್ನ 12.30ಕ್ಕೆ ಅವಭೃತ, 1.30ರಿಂದ 3.30ರ ವರೆಗೆ ಮರದ ಲಾಲ್ಕಿ, ಸಣ್ಣ ರಥೋತ್ಸವ, 4.30ರಿಂದ ಶೇಷತೀರ್ಥ ಸ್ನಾನ, 5.30ಕ್ಕೆ ಧ್ವಜಾವರೋಹಣ, 6.30 ರಿಂದ ಗಡಿ ಪ್ರಸಾದ ವಿತರಣೆ, ರಾತ್ರಿ 8ಕ್ಕೆ ಮಹಾಪೂಜೆ ನೆರವೇರಲಿದೆ.