ಈ ಮೊದಲು ಮಡಿಕೈ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಮತ್ತು ಬಳಿಕ ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷರಾಗಿದ್ದರು.
ಎಲ್‌ಡಿಎಫ್ ಗೆ ಜಿಲ್ಲಾ ಪಂಚಾಯತ್‌ನಲ್ಲಿ ಓರ್ವ ಸ್ವತಂತ್ರ ಸೇರಿದಂತೆ ಎಂಟು ಸ್ಥಾನಗಳನ್ನು ಗೆದ್ದಿದೆ. ಬೇಬಿ ಬಾಲಕೃಷ್ಣನ್ ಮಡಿಕೈ ವಿಭಾಗದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.
1995ರಲ್ಲಿ ಮೊದಲ ಬಾರಿಗೆ ಮಡಿಕ್ಯೆ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಅಂದು ಅವಿವಾಹಿತೆಯಾಗಿದ್ದ ಅವರು ರಾಜ್ಯದ ಅತಿ ಕಿರಿಯ ಅಧ್ಯಕ್ಷೆ ಎಂಬ ನೆಗಳ್ತೆಗೂ ಪಾತ್ರರಾಗಿದ್ದರು. ಬಳಿಕದ ಅವಧಿಯಲ್ಲಿ
ಜನರಲ್ ಸ್ಥಾನವಾಗಿದ್ದರೂ, ಬೇಬಿ ಅವರನ್ನೇ ಆಯ್ಕೆ ಮಾಡಿತ್ತು.
2005 ರಲ್ಲಿ ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಬೇಬಿಯನ್ನು. ಬೇಬಿ ಬಾಲಕೃಷ್ಣನ್ ತಮ್ಮ ರಾಜಕೀಯ ಜೀವನದ ಮಧ್ಯೆಯೂ ಕಲಿಕೆಯನ್ನು ಕ್ಯೆಬಿಡದೆ ಎಂ.ಎ.ಹಾಗೂ ಬಿ.ಎಡ್ ವ್ಯಾಸಂಗ ಪೂರ್ಯೆಸಿ ಪೆರಿಯಾ ಮತ್ತು ಬೆಂಗಳಂ ಶಾಲೆಗಳಲ್ಲಿ ಅತಿಥಿ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದರು.
ಬೇಬಿ ಬಾಲಕೃಷ್ಣನ್ ಬಾಲಾಪರಾಧಿ ನ್ಯಾಯ ಮಂಡಳಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಈ ಬಾರಿ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿದ್ದರು. ಕಣ್ಣೂರು ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಪ್ರಯತ್ನಗಳು ಅರ್ಧದಾರಿಯಲ್ಲೇ ಮುಗಿದಿವೆ.
ಸಿಪಿಎಂ ಜಿಲ್ಲಾ ಸಮಿತಿಯ ಸದಸ್ಯೆ ಮತ್ತು ಪ್ರಜಾಪ್ರಭುತ್ವ ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿದ್ದಾರೆ. ಕುಟುಂಬಶ್ರೀ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ಕಿಲಾ ಅಧ್ಯಾಪಕರ ಸದಸ್ಯರಾಗಿದ್ದಾರೆ. ಜೊತೆಗೆ ಉದ್ಯೋಗ ಖಾತರಿ ಯೋಜನೆ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ನೀಲೇಶ್ವರಂ ಮುನ್ಸಿಪಲ್ ಕಾರ್ಪೊರೇಶನ್‌ನ ಮಾಜಿ ಯುಡಿ ಕ್ಲರ್ಕ್ ಬಾಲಕೃಷ್ಣನ್ ಅವರ ಪತ್ನಿಯಾಗಿದ್ದಾರೆ. ಒಬ್ಬನೇ ಪುತ್ರ ಕಿರಣ್ ಬಾಲಕೃಷ್ಣನ್.