ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಮತದಾನದಂದು ಇತರ ಚಟುವಟಿಕೆ ನಡೆಸಲು ನೇಮಕಗೊಂಡಿರುವ ಜಿಲ್ಲಾ ಚುನಾವಣೆ ಕಚೇರಿಯ, ಗ್ರಾಮ ಪಂಚಾಯತ್, ನಗರಸಭೆ ಕಚೇರಿಗಳ ಚುನಾವಣೆ ವಿಭಾಗ ಸಿಬ್ಬಂದಿಗೆ, ಚುನಾವಣೆ ಅಧಿಕಾರಿ, ಉಪಚುನಾವಣೆ ಅಧಿಕಾರಿ ಅವರ ಕಚೇರಿಗಳ ಚುನಾವಣೆ ವಿಭಾಗ ಸಿಬ್ಬಂದಿಗೆ, ನಿರೀಕ್ಷಕ, ಸೆಕ್ಟರಲ್ ಆಫೀಸರ್ ಗಳು, ಆಂಟಿ ಡಿಫೆÇೀರ್ಸ್ ಮೆಂಟ್ ಸ್ಕ್ವಾಡ್ ಸದಸ್ಯರು, ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡಿರುವ ಪೆÇಲೀಸ್ ಸಿಬ್ಬಂದಿಗೆ ಸಹ ಅಂಚೆ ಬಾಲೆಟ್ ಮಂಜೂರು ಮಾಡಲು ರಾಜ್ಯ ಚುನಾವಣೆ ಆಯೋಗ ಆದೇಶ ನೀಡಿದೆ. ಇದಕ್ಕಾಗಿ 15ನೇ ನಂಬ್ರ ಫಾರಂ ನಲ್ಲಿ ಚುನಾವಣೆ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು.