ಬದಿಯಡ್ಕ: ಈ ಬರುವ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯ ವಿವಿಧ ಕಾರ್ಯ ಚಟುವಟಿಕೆಗಳಿಗಾಗಿ ಕುಂಬ್ಡಾಜೆ ಜಯನಗರದಲ್ಲಿ ಅಣಿಗೊಳಿಸಲಾದ ನೂತನ ಕಚೇರಿಯನ್ನು ರಾಜ್ಯ ಬಿಜೆಪಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂಜೀವ ಶೆಟ್ಟಿ ಮೊಟ್ಟಕುಂಜ ಉದ್ಘಾಟಿಸಿದರು.
ವಿಜ್ಞಾಪನ ಪತ್ರಿಕೆಯನ್ನು ರಾಮಚಂದ್ರ ಭಟ್, ಉಪ್ಪಂಗಳ ಬಿಡುಗಡೆಗೊಳಿಸಿದರು. ಚೋಕೆಮೂಲೆ ವಾಸುದೇವ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ, ರವೀಂದ್ರ ರೈ ಗೋಸಾಡ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ, ಕಳೆದ ಐದು ವರ್ಷಗಳಲ್ಲಿ ಕುಂಬಡಾಜೆ ಗ್ರಾಮದ ಹನ್ನೊಂದನೇ ವಾರ್ಡಿನ ನಿಸ್ವಾರ್ಥ ಸೇವೆಗೈದ ಶಾಂತಾ ಎಸ್. ಭಟ್ ಅವರನ್ನು ಜಯಶ್ರೀ, ಕಲ್ಲಕಳಂಬಿ ಶಾಲು ಹೊದೆಸಿ, ಸಂಜೀವ ಶೆಟ್ಟಿ ಸ್ಮರಣಿಕೆ ನೀಡಿ ಅಭಿನಂದಿಸಿದರು. ಶಶಿಧರ ತೆಕ್ಕೆಮೂಲೆ ಶುಭಾಶಂಸನೆಗೈದರು. ಹನ್ನೊಂದನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಹರೀಶ್ ಗೋಸಾಡ ಮಾತನಾಡಿ, ಕುಂಬಡಾಜೆಯ ಎಲ್ಲ ವಾರ್ಡಿನ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ಪಂಚಾಯಿತಿ ಆಡಳಿತವನ್ನು ಪಡೆದುಕೊಳ್ಳಲು ಪಣತೊಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. ಬಿಜೆಪಿಯ ಹಿರಿಯ ಸಲಹೆಗಾರರಾದ ಮಾಳಿಗೆಮನೆ ಸೂರ್ಯನಾರಾಯಣ ಭಟ್, ಅಶೋಕ್ ಭಟ್ ಗುಲುಗುಂಜಿ, ನಾರಾಯಣ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದು ಮಾರ್ಗದರ್ಶನಗೈದರು. ಕೀರ್ತನ ಗೋವಿಂದ್ ಗುಲುಗುಂಜಿ ಸ್ವಾಗತಿಸಿ ಯತೀಶ್ ಮಾರ್ಪನಡ್ಕ ಇವರು ವಂದಿಸಿದರು. ಬಿ. ಕೆ. ಸುರೇಶ ಇವರು ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.